Asianet Suvarna News Asianet Suvarna News

ಕಾಂಗ್ರೆಸ್‌, ಜೆಡಿಎಸ್‌ ಸೀಟು ಹಂಚಿಕೆ ಸಭೆ ವಿಫಲ; ಹೈ ಕಮಾಂಡ್ ಅಂತಿಮ ನಿರ್ಧಾರ

ಕಾಂಗ್ರೆಸ್‌, ಜೆಡಿಎಸ್‌ ಸೀಟು ಹಂಚಿಕೆ ಸಭೆ ವಿಫಲ | ಸಮನ್ವಯ ಸಮಿತಿ ಸಭೆಯಲ್ಲಿ ಬಗೆಹರಿಯದ ಲೋಕಸಭೆ ಕ್ಷೇತ್ರ ಹಂಚಿಕೆ |  ಹೈಕಮಾಂಡ್‌ ಮಟ್ಟದಲ್ಲೇ ಹಂಚಿಕೆಗೆ ಮೈತ್ರಿ ಪಕ್ಷಗಳ ನಿರ್ಧಾರ | 12 ಕ್ಷೇತ್ರ ಬಿಟ್ಟುಕೊಡುವಂತೆ ಕೇಳಿದ ಜೆಡಿಎಸ್‌ ನಾಯಕರು

 

Congress-JDS high commands will decide seat sharing in Loksabha Elections 2019
Author
Bengaluru, First Published Mar 5, 2019, 11:17 AM IST

ಬೆಂಗ​ಳೂರು (ಮಾ. 05):  ಲೋಕ​ಸಭಾ ಚುನಾ​ವಣೆಗೆ ಸೀಟು ಹಂಚಿಕೆ ಕುರಿತು ಚರ್ಚಿ​ಸಲು ನಡೆದ ಸಮ​ನ್ವಯ ಸಮಿತಿ ಸಭೆ ವಿಫ​ಲ​ವಾ​ಗಿದ್ದು, ಹೈಕ​ಮಾಂಡ್‌ ಮಟ್ಟ​ದಲ್ಲೇ ಈ ಬಗ್ಗೆ ಅಂತಿಮ ತೀರ್ಮಾನವಾಗಲಿ ಎಂಬ ನಿರ್ಧಾ​ರಕ್ಕೆ ಮೈತ್ರಿ ಪಕ್ಷ​ಗಳ ನೇತಾ​ರರು ಬಂದಿ​ದ್ದಾ​ರೆ.

ಯೋಧ ಗುರು ಪತ್ನಿಗೆ ಸುಮಲತಾ ಅರ್ಧ ಎಕರೆ ದಾನ

ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಅಧ್ಯ​ಕ್ಷ​ತೆ​ಯಲ್ಲಿ ಸಮ​ನ್ವಯ ಸಮಿತಿ ಸಭೆ ನಡೆ​ಯಿತು. ಈ ಸಭೆ​ಯಲ್ಲಿ ಜೆಡಿ​ಎಸ್‌ ನಾಯ​ಕರು ತಮ್ಮ ಪಕ್ಷಕ್ಕೆ 12 ಸೀಟು ಬಿಟ್ಟು​ಕೊ​ಡ​ಬೇಕು ಎಂದು ಕೋರಿ​ದರು ಎನ್ನ​ಲಾ​ಗಿದೆ. ಆದರೆ, ಇದಕ್ಕೆ ಒಪ್ಪದ ಕಾಂಗ್ರೆಸ್‌ ನಾಯ​ಕರು ಕಾಂಗ್ರೆಸ್‌ ಹಾಗೂ ಜೆಡಿ​ಎಸ್‌ ಪಕ್ಷ​ಗಳು ಹಾಲಿ ಗೆದ್ದಿ​ರುವ ಕ್ಷೇತ್ರ​ಗ​ಳನ್ನು ಹೊರ​ತು​ಪ​ಡಿಸಿ ಚರ್ಚೆ ನಡೆ​ಯ​ಬೇಕು ಎಂದು ವಾದಿ​ಸಿ​ದ್ದಾರೆ.

ಮೋದಿಗೆ ಮುಸ್ಲಿಂ ಮತ ಬೇಕಿಲ್ಲ, ನಮಗೇ ಹಾಕಿ: ಜಮೀರ್ ಅಹ್ಮದ್ ಕರೆ

ತನ್ಮೂ​ಲಕ ಜೆಡಿ​ಎಸ್‌ ಕೇಳು​ತ್ತಿ​ರುವ ಕಾಂಗ್ರೆಸ್‌ ಗೆದ್ದಿ​ರುವ ಕ್ಷೇತ್ರ​ಗ​ಳಾದ ಕೋಲಾರ, ಚಿಕ್ಕ​ಬ​ಳ್ಳಾ​ಪುರ, ಚಿತ್ರ​ದು​ರ್ಗ​ದಂತಹ ಕ್ಷೇತ್ರ​ಗ​ಳನ್ನು ಸುತಾರಾಂ ಬಿಟ್ಟು​ಕೊ​ಡಲು ಸಿದ್ಧ​ರಿಲ್ಲ ಎಂಬ ಸಂದೇಶ ನೀಡಿ​ದ್ದಾರೆ ಎನ್ನ​ಲಾ​ಗಿ​ದೆ.

ಮೂಲ​ಗಳ ಪ್ರಕಾರ ಜೆಡಿ​ಎಸ್‌ ನಾಯ​ಕರು, ಮಂಡ್ಯ ಹಾಗೂ ಹಾಸನ ಕ್ಷೇತ್ರ​ಗ​ಳಲ್ಲಿ ಜೆಡಿ​ಎಸ್‌ ಸಂಸ​ದ​ರಿ​ದ್ದಾರೆ. ಇದ​ಲ್ಲದೆ, ಪಕ್ಷಕ್ಕೆ ಉತ್ತಮ ತಳ​ಹದಿ ಇರುವ ಕ್ಷೇತ್ರ​ಗ​ಳಾದ ಮೈಸೂರು, ಶಿವ​ಮೊಗ್ಗ, ಚಿತ್ರ​ದುರ್ಗ, ತುಮ​ಕೂರು, ವಿಜಯ​ಪುರ, ಬೆಂಗ​ಳೂರು ಉತ್ತರ, ಕೋಲಾರ, ಚಿಕ್ಕ​ಬ​ಳ್ಳಾಪುರ, ಕೆನರಾ ಹಾಗೂ ಬೆಳ​ಗಾವಿ ಕ್ಷೇತ್ರ​ಗ​ಳಲ್ಲೂ ಈ ಬಾರಿ ತನ್ನ ಅಭ್ಯ​ರ್ಥಿ​ಗ​ಳನ್ನು ಕಣಕ್ಕೆ ಇಳಿ​ಸಲು ಬಯ​ಸಿದೆ ಎಂದು ತಿಳಿ​ಸಿ​ದರು ಎನ್ನ​ಲಾ​ಗಿ​ದೆ.

ಎಫ್‌-16 ಹೊಡೆಯಲು ಮಿಗ್‌ ಬಳಸಿದ್ದೇಕೆ?: ಧನೋವಾ ನೀಡಿದ ಅಚ್ಚರಿಯ ಉತ್ತರ!

ಆದರೆ, ಇದಕ್ಕೆ ಕಾಂಗ್ರೆಸ್‌ ನಾಯ​ಕರು ಆಕ್ಷೇಪ ಮಾಡಿದ್ದು, ತುಮ​ಕೂರು, ಚಿಕ್ಕ​ಬ​ಳ್ಳಾ​ಪುರ, ಚಿತ್ರ​ದುರ್ಗ, ಕೋಲಾ​ರ​ದಲ್ಲಿ ಕಾಂಗ್ರೆಸ್‌ ಸಂಸ​ದರು ಇದ್ದಾರೆ. ಇಂತಹ ಕ್ಷೇತ್ರ​ಗ​ಳನ್ನು ಬಿಟ್ಟು​ಕೊ​ಡಲು ಸಾಧ್ಯವೇ ಇಲ್ಲ. ಉಳಿದ ಕ್ಷೇತ್ರಗಳ ಬಗ್ಗೆ ಬೇಕಿ​ದ್ದರೆ ಚರ್ಚೆ ಮಾಡ​ಬ​ಹುದು ಎಂದು ವಾದ ಮಂಡಿ​ಸಿ​ದರು ಎನ್ನುತ್ತವೆ ಮೂಲ​ಗಳು.

ಅಲ್ಲದೆ, ತಮ್ಮ ಸ್ವಂತ ಜಿಲ್ಲೆ​ಯಾದ ಮೈಸೂರನ್ನು ಜೆಡಿ​ಎ​ಸ್‌ಗೆ ಬಿಟ್ಟು​ಕೊ​ಡಲು ಸಾಧ್ಯ​ವಿಲ್ಲ. ಬೆಂಗ​ಳೂರು ಉತ್ತ​ರ​ದಲ್ಲಿ ದೇವೇ​ಗೌಡ ಅವರೇ ಸ್ಪರ್ಧಿ​ಸಲು ಆಸಕ್ತಿ ತೋರಿ​ರು​ವು​ದ​ರಿಂದ ಅದ​ನ್ನು ಬಿಟ್ಟು​ಕೊ​ಡ​ಬ​ಹುದು. ಆದರೆ, ಯಾವ ಕಾರ​ಣಕ್ಕೂ ಮೈಸೂರು ಬಿಟ್ಟು​ಕೊ​ಡಲು ಸಾದ್ಯ​ವಿಲ್ಲ ಎಂದು ಸ್ವತಃ ಸಿದ್ದ​ರಾ​ಮಯ್ಯ ಅವರು ಸಭೆ​ಯಲ್ಲಿ ವಾದಿ​ಸಿ​ದರು ಎನ್ನ​ಲಾ​ಗಿದೆ.

ಇದಕ್ಕೆ ಪ್ರತಿ​ಯಾಗಿ ಜೆಡಿ​ಎಸ್‌ ನಾಯ​ಕರು ಮೈತ್ರಿ ಸಂದ​ರ್ಭ​ದಲ್ಲಿ ಕಾಂಗ್ರೆಸ್‌ ಹೈಕ​ಮಾಂಡ್‌ ಕೆಲವೊಂದು ಭರ​ವ​ಸೆ​ಗ​ಳನ್ನು ನೀಡಿದೆ. ಅದ​ರಲ್ಲಿ ಸೀಟು ಹಂಚಿಕೆ ವಿಚಾ​ರ​ ಸಹ ಸೇರಿದೆ. ಹೀಗಾಗಿ ಈ ವಿಚಾರದ ಬಗ್ಗೆ ನಮ್ಮ ಪಕ್ಷದ ವರಿ​ಷ್ಠ​ರಾದ ಎಚ್‌.ಡಿ. ದೇವೇ​ಗೌ​ಡರು ಕಾಂಗ್ರೆ​ಸ್‌ನ ವರಿಷ್ಠ ರಾಹುಲ್‌ ಗಾಂಧಿ ಜತೆ ಚರ್ಚಿ​ಸಿದ ನಂತ​ರವೇ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊ​ಳ್ಳಲಿ ಎಂದಿದ್ದು, ಇದಕ್ಕೆ ಕಾಂಗ್ರೆಸ್‌ ನಾಯ​ಕರು ಒಪ್ಪಿ​ದ್ದಾರೆ ಎನ್ನ​ಲಾ​ಗಿದೆ.

6 ಕ್ಕೆ ಒಪ್ಪಿ​ದೆಯೇ ಜೆಡಿ​ಎಸ್‌?

ಸೀಟು ಹಂಚಿಕೆ ಕುರಿತು ಉಭಯ ಪಕ್ಷ​ಗಳ ರಾಜ್ಯ ನಾಯ​ಕರ ಸಭೆ ವಿಫ​ಲ​ವಾ​ಗಿದೆ ಎನ್ನಲಾ​ಗು​ತ್ತಿ​ದ್ದರೂ, ಉಭಯ ಪಕ್ಷ​ಗಳು ಕೊಡು-ಕೊಳ್ಳು​ವಿಕೆ ವಿಚಾ​ರ​ದಲ್ಲಿ ತಾತ್ವಿಕ ಒಪ್ಪಿ​ಗೆಗೆ ಬಂದಿ​ದ್ದಾರೆ ಎಂದು ಕಾಂಗ್ರೆ​ಸ್‌ನ ಪ್ರಭಾವಿ ಬಣ​ವೊಂದರ ಮೂಲ​ಗಳು ಹೇಳು​ತ್ತವೆ.

ಈ ಮೂಲ​ಗಳ ಪ್ರಕಾರ ಜೆಡಿ​ಎಸ್‌ 12 ಸ್ಥಾನ​ಗ​ಳಿಗೆ ಬೇಡಿ​ಕೆ​ಯಿ​ಟ್ಟಿ​ದ್ದರೂ, ತಾನು ಬೇಡಿದ ಆರು ಕ್ಷೇತ್ರ​ಗ​ಳನ್ನು ತಕ​ರಾ​ರಿ​ಲ್ಲದೆ ಬಿಟ್ಟು​ಕೊ​ಟ್ಟರೆ ಅಷ್ಟಕ್ಕೆ ತೃಪ್ತ​ರಾ​ಗುವ ಸಂಕೇ​ತ​ವನ್ನು ಸಮ​ನ್ವಯ ಸಮಿತಿ ಸಭೆ​ಯಲ್ಲಿ ನೀಡಿತು ಎನ್ನ​ಲಾ​ಗಿ​ದೆ.

ಜೆಡಿ​ಎಸ್‌ ತನ್ನ ಸಂಸ​ದ​ರನ್ನು ಹೊಂದಿ​ರುವ ಮಂಡ್ಯ ಹಾಗೂ ಹಾಸ​ನದ ಜತೆಗೆ, ಶಿವ​ಮೊಗ್ಗ, ಉತ್ತರ ಕನ್ನಡ, ಬೆಂಗ​ಳೂರು ಉತ್ತರ ಹಾಗೂ ಮೈಸೂ​ರು ಕ್ಷೇತ್ರ​ಗ​ಳನ್ನು ತನಗೆ ಬಿಟ್ಟು​ಕೊ​ಡ​ಬೇಕು ಎಂದು ಬೇಡಿ​ಕೆ​ಯಿ​ಟ್ಟಿದೆ. ಈ ಪೈಕಿ, ಕಾಂಗ್ರೆ​ಸ್‌ಗೆ ಶಿವ​ಮೊಗ್ಗ, ಉತ್ತರ ಕನ್ನಡ, ಬೆಂಗ​ಳೂರು ಉತ್ತರ ಕ್ಷೇತ್ರ​ಗ​ಳ​ನ್ನು ಬಿಟ್ಟು​ಕೊ​ಡಲು ಯಾವುದೇ ತಕ​ರಾ​ರಿಲ್ಲ. ಆದರೆ, ಸಮ​ಸ್ಯೆ​ಯಿ​ರು​ವುದು ಮೈಸೂರು ಕ್ಷೇತ್ರದ ಬಗ್ಗೆ. ಈ ಕ್ಷೇತ್ರಕ್ಕೆ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಕೂಡ ಪಟ್ಟು ಹಿಡಿ​ದಿ​ದ್ದರೆ, ಜೆಡಿ​ಎಸ್‌ ಕೂಡ ತನ್ನ ಆಗ್ರ​ಹ​ದಿಂದ ಹಿಂದಕ್ಕೆ ಸರಿ​ಯು​ತ್ತಿಲ್ಲ ಎಂದು ಈ ಮೂಲ​ಗಳು ಹೇಳಿ​ವೆ.

ಜೆಡಿ​ಎಸ್‌ ಕೇಳು​ತ್ತಿ​ರು​ವ ಕ್ಷೇತ್ರ​ಗಳು

ಮಂಡ್ಯ, ಹಾಸನ, ಮೈಸೂರು, ಚಿತ್ರ​ದುರ್ಗ, ತುಮ​ಕೂರು, ಬೆಂಗ​ಳೂರು ಉತ್ತರ, ಚಿಕ್ಕ​ಬ​ಳ್ಳಾ​ಪುರ, ಕೋಲಾರ, ಶಿವ​ಮೊಗ್ಗ, ಧಾರ​ವಾಡ, ಬೆಳ​ಗಾವಿ ಹಾಗೂ ಧಾರ​ವಾ​ಡ.

ಕಾಂಗ್ರೆಸ್‌ ಬಿಟ್ಟು​ಕೊ​ಡಲು ತಯಾ​ರಿ​ರುವ ಕ್ಷೇತ್ರ​ಗ​ಳು-

ಮಂಡ್ಯ, ಹಾಸನ, ಬೆಂಗ​ಳೂರು ಉತ್ತರ, ಮೈಸೂರು, ಶಿವ​ಮೊಗ್ಗ, ಬೆಳ​ಗಾವಿ ಮತ್ತು ಧಾರ​ವಾ​ಡ.

Follow Us:
Download App:
  • android
  • ios