ಯೋಧ ಗುರು ಪತ್ನಿಗೆ ಸುಮಲತಾ ಅರ್ಧ ಎಕರೆ ದಾನ | ದಾಖಲೆ ಹಸ್ತಾಂತರಿಸಿದ ಅಂಬರೀಷ್ ಪತ್ನಿ | ಶೀಘ್ರದಲ್ಲೇ ನೋಂದಣಿ ಮಾಡಿಕೊಡುವೆ ಎಂದ ಸುಮಲತಾ
ಮಂಡ್ಯ (ಮಾ. 05): ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಗೆ ಬಲಿಯಾದ ಮಂಡ್ಯ ಜಿಲ್ಲೆ ಮದ್ದೂರಿನ ಸಿಆರ್‌ಪಿಎಫ್ ಯೋಧ ಎಚ್. ಗುರು ಕುಟುಂಬಕ್ಕೆ ಮಾಜಿ ಸಚಿವ ದಿ. ಅಂಬರೀಷ್ ಪತ್ನಿ ಸುಮಲತಾ ಅವರು ಈ ಹಿಂದೆ ಕೊಟ್ಟಮಾತಿನಂತೆ 20 ಗುಂಟೆ ಜಮೀನು ದೇಣಿಗೆ ಕೊಟ್ಟಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಸ್ತಾಂತರಿಸಿದರು.
ಸರ್ಜಿಕಲ್ ಸ್ಟ್ರೈಕ್‌ಗೆ ಸಂಭ್ರಮಿಸೋದು ಬಿಟ್ಟು ಸಿಎಂ ಪುತ್ರನ ಸಿನಿಮಾ ನೋಡ್ಬೇಕಾ?
ಸುಮಲತಾ ಅವರು ಹುತಾತ್ಮ ಯೋಧನ ಕುಟುಂಬಕ್ಕೆ ಭೂಮಿಯ ದಾಖಲೆ ಪತ್ರವನ್ನು ನೀಡಿದರು. ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದ ಜಮೀನು ಅಂಬರೀಷ್ ಅವರಿಗೆ ಪಿತ್ರಾರ್ಜಿತವಾಗಿ ಬಂದಿತ್ತು. ಈ ಜಮೀನನ್ನು ಅಂಬರೀಷ್ ತಮ್ಮ ಪುತ್ರ ಅಭಿಷೇಕ್‌ಗೆ ಪಾಲು ಮಾಡಿ ಖಾತೆ ಮಾಡಿಕೊಟ್ಟಿದ್ದರು. ಈಗ ಅದರಲ್ಲಿ 20 ಗುಂಟೆಯಷ್ಟುಜಾಗವನ್ನು ಹುತಾತ್ಮ ಯೋಧನ ಪತ್ನಿ ಹೆಸರಿಗೆ ಸುಮಲತಾ ಅವರು ದಾನಪತ್ರ ಮಾಡಿಸಿದ್ದಾರೆ.
ಯಾವ ಷರತ್ತೂ ಹಾಕಿಲ್ಲ:
ನಂತರ ಮಾತನಾಡಿದ ಸುಮಲತಾ, ನಾನು ಈ ಹಿಂದೆ ಹೇಳಿದಂತೆ ಜಮೀನು ದಾನ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಕುಟುಂಬದವರ ನಿರ್ಧಾರದಂತೆ ನೋಂದಣಿ ಮಾಡಿಕೊಡುತ್ತೇವೆ. ಅದರಲ್ಲಿ ಸ್ಮಾರಕ ಮಾಡ್ತಾರೋ, ವ್ಯವಸಾಯ ಮಾಡ್ತಾರೋ ಎನ್ನುವುದು ಅವರಿಗೆ ಬಿಟ್ಟವಿಚಾರ ಎಂದರು.
ಬೆಂಗಳೂರಿನ ಯಶವಂತಪುರದಿಂದ ಹೊರಟ ರೈಲಿಗೆ ಬೆಂಕಿ
ಜಮೀನಿಗೆ ಸಂಬಂಧಿಸಿ ಯಾವುದೇ ಷರತ್ತನ್ನೂ ಹಾಕಿಲ್ಲ. ಜಮೀನನ್ನು ಅವರಿಗೆ ನೀಡಿದ ಬಳಿಕ ಅದರ ಮೇಲೆ ನನಗೆ ಯಾವುದೇ ಅಧಿಕಾರವಿಲ್ಲ. ಅವರಿಗೆ ಯಾವ ರೀತಿ ಅನುಕೂಲವಾಗುತ್ತದೋ ಅದರಂತೆ ಬಳಸಿಕೊಳ್ಳಲಿ. ನೋವಿನಲ್ಲಿರುವ ಕುಟುಂಬದವರಿಗೆ ಈ ಜಮೀನನ್ನು ಇದೇ ಉದ್ದೇಶಕ್ಕೆ ಬಳಸಿಕೊಳ್ಳುವಂತೆ ಒತ್ತಡ ಹೇರುವುದಿಲ್ಲ ಎಂದು ನುಡಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 5, 2019, 10:09 AM IST