ಯವ ನಟ ಚಿರಂಜೀವಿ ಸರ್ಜಾ ನಿಧನ, ಕೋರ್ಟ್ ವಿಚಾರಣೆ ವೇಳೆ ವೃದ್ಧನ ಮರಣ; ಜೂ.7ರ ಟಾಪ್ 10 ಸುದ್ದಿ!
ಸ್ಯಾಂಡಲ್‌ವುಟ್ ನಟ ಚಿರಂಜೀವಿ ಸರ್ಜಾ ಉಸಿರಾಟದ ಸಮಸ್ಯೆಯಿಂದ ನಿಧನರಾಗಿದ್ದಾರೆ. ಚಿರಂಜೀವಿ ದಿಢೀರ್ ಮರಣ, ಚಿತ್ರರಂಗವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಇತ್ತ ಆಸ್ಪತ್ರೆ ದಾಖಲಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದ ವೃದ್ಧ ವಿಚಾರಣೆ ನಡೆಯುತ್ತಿರುವಾಗಲೇ ಸಾವನ್ನಪ್ಪಿದ ಮಕಲುಕುವ ಘಟನೆ ನಡೆದಿದೆ. ಜೀವನದಲ್ಲಿ ಜಿಗುಪ್ಸೆಗೊಂಡ ಪದವಿ ವಿದ್ಯಾರ್ಥಿ ಫ್ಲೈ ಓವರ್ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿದ ಘಟನೆ ನಡೆದಿದೆ. ಚೀನಾ ಟೀಕಿಸಿದ ಅಮೂಲ್ ಟ್ವಿಟರ್ ಖಾತೆ ಬ್ಲಾಕ್, ಗರ್ಭಿಣಿ ಹಸುವಿಗೆ ಸ್ಫೋಟಕ ತನ್ನಿಸಿದ ರಾಕ್ಷಸ ಅರೆಸ್ಟ್ ಸೇರಿದಂತೆ ಜೂನ್ 07ರ ಟಾಪ್ 10 ಸುದ್ದಿ ಇಲ್ಲಿವೆ.
ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್, ನಟ ಚಿರಂಜೀವಿ ಸರ್ಜಾ ಇನ್ನಿಲ್ಲ
ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ. ಸ್ಯಾಂಡಲ್ ವುಡ್‌ಗೆ ಅತಿ ದೊಡ್ಡ ಆಘಾತವಾಗಿದೆ ಜಯನಗರದ ಸಾಗರ್ ಅಪೋಲೋ ಆಸ್ಪತ್ರೆಗೆ ಚಿರು ದಾಖಲಾಗಿದ್ದರು. ವಾಯುಪುತ್ರ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಸರ್ಜಾ ನಂತರ ಅನೇಕ ಚಿತ್ರಗಳಲ್ಲಿ ಮಿಂಚಿದ್ದರು.
ಶಾಲಾ-ಕಾಲೇಜು ಪ್ರಾರಂಭ ಯಾವಾಗ? ದಿನಾಂಕ ಪ್ರಕಟಿಸಿದ ಕೇಂದ್ರ ಸಚಿವ...
ಬಹುತೇಕ ಲಾಕ್‌ಡೌನ್ ಸಡಿಲಗೊಳಿಸಿದ್ದು, ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಆದ್ರೆ, ಶಾಲಾ-ಕಾಲೇಜು ಆರಂಭ ಮಾಡಬೇಕು ಎನ್ನುವ ಚರ್ಚೆಗಳು ನಡೆದಿವೆ. ಇದರ ಮಧ್ಯೆ ಕೇಂದ್ರ ಸಚಿವರೊಬ್ಬರು ಶಾಲೆ ಪುನರಾರಂಭದ ಬಗ್ಗೆ ಮಹತ್ವದ ಸುಳಿವೊಂದನ್ನು ನೀಡಿದ್ದಾರೆ.
ಜೀವನದಲ್ಲಿ ಜಿಗುಪ್ಸೆ: ಫ್ಲೈಓವರ್ ಮೇಲಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ...
ಜೀವನದಲ್ಲಿ ಜಿಗುಪ್ಸೆಗೊಂಡ ಪದವಿ ವಿದ್ಯಾರ್ಥಿಯೊಬ್ಬ ಮೈಸೂರು ರಸ್ತೆಯ ನಾಯಂಡಹಳ್ಳಿ ಮೇಲ್ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಶನಿವಾರ ನಡೆದಿದೆ.
ಗರ್ಭಿಣಿ ಹಸುವಿಗೆ ಸ್ಫೋಟಕ ತಿನ್ನಿಸಿದ್ದ 'ರಾಕ್ಷಸ' ಅರೆಸ್ಟ್!
ಕೇರಳದ ಮಲಪ್ಪುರಂನಲ್ಲಿ ಗರ್ಭಿಣಿ ಆನೆಗೆ ಸ್ಫೋಟಕ ತುಂಬಿದ್ದ ಹಣ್ಣು ತಿನ್ನಿಸಿ ಅದು ಸಾವನ್ನಪ್ಪಿದ್ದ ಹೃದಯ ವಿದ್ರಾವಕ ಘಟನೆ ಬೆನ್ನಲ್ಲೇ ಹಿಮಾಚಲ ಪ್ರದೇಶದಲ್ಲಿ ಗರ್ಭಿಣಿ ಹಸುವೊಂದಕ್ಕೆ ಸ್ಪೋಟಕ ತಿನ್ನಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಓರ್ವ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.
ಚಿಕಿತ್ಸೆಗಾಗಿ ಕೋರ್ಟ್‌ಗೆ ಹೋಗಿದ್ದ ವೃದ್ಧ ಅರ್ಜಿ ವಿಚಾರಣೆ ಮುನ್ನ ಸಾವು!...
ಸರ್ಕಾರಿ ಆಸ್ಪತ್ರೆಗಳಿಗೆ ದಾಖಲು ಮಾಡಿಕೊಳ್ಳುವಂತೆ ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದ 75 ವರ್ಷದ ಕೊರೋನಾ ರೋಗಿಯೊಬ್ಬರು, ನ್ಯಾಯಾಲಯ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ನಿಧನ ಹೊಂದಿದ ಮನಕಲಕುವ ಘಟನೆ ದೆಹಲಿಯಲ್ಲಿ ನಡೆದಿದೆ.
ಚೀನಾ ಟೀಕಿಸಿದ್ದಕ್ಕೆ ಅಮೂಲ್ ಟ್ವೀಟರ್ ಖಾತೆಯೇ ಬ್ಲಾಕ್!
ಭಾರತದ ಖ್ಯಾತ ಕ್ಷೀರ ಉತ್ಪನ್ನಗಳ ಕಂಪನಿಯಾದ ಅಮೂಲ್‌ನ ಟ್ವೀಟರ್ ಖಾತೆಯನ್ನು ಟ್ವೀಟರ್ ಕಂಪನಿ ಕೆಲ ಗಂಟೆಗಳ ಕಾಲ ಬ್ಲಾಕ್ ಮಾಡಿದ ಘಟನೆ ನಡೆದಿದೆ.
ಸ್ಟಾರ್ ಹಾಡಲ್ಲಿ ಸುದೀಪ್ ಇಲ್ಲ, ಸಚಿವರೇ ಸಂಪರ್ಕಿಸಿದರೂ ಸಿಗಲ್ಲಿಲ್ಲ; ಇದಕ್ಕೆ ಕಾರಣವೇನು?
ಸ್ಯಾಂಡಲ್‌ವುಡ್ ನಟ-ನಟಿಯರು ಹಾಗೂ ಕ್ರಿಕೆಟಿಗರು ಒಟ್ಟಾಗಿ ಕಾಣಿಸಿಕೊಂಡ 'ಬದಲಾಗು ನೀನು ಬದಲಾಯಿಸು' ಹಾಡಿನಲ್ಲಿ ಕಿಚ್ಚ ಸುದೀಪ್ ಮಿಸ್ಸಿಂಗ್. ಎಲ್ಲರೂ ಇದ್ದಾರೆ ಆದರೆ ಕಿಚ್ಚ ಇಲ್ಲ ಎಂದ ಅಭಿಮಾನಿಗಳಿಗೆ ಸಚಿವ ಸುಧಾಕರ್ ಸ್ಪಷ್ಟನೇ ನೀಡಿದ್ದಾರೆ.
ಗುಡ್ ನ್ಯೂಸ್: ಚಿನ್ನ, ಬೆಳ್ಳಿ ಬೆಲೆಯಲ್ಲಿ ದಾಖಲೆಯ ಇಳಿಕೆ!
ಒಂದೆಡೆ ಕೊರೋನಾ ಆತಂಕ ದೇಶವನ್ನು ಸತಾಯಿಸುತ್ತಿದ್ದು, ಅಪಾರ ಸಾವು ನೋವು ಉಂಟು ಮಾಡಿದೆ. ಹೀಗಿದ್ದರೂ ಚಿನ್ನದ ಬೇಡಿಕೆ ಮಾತ್ರ ಕುಸಿದಿರಲಿಲ್ಲ. ಚಿನ್ನ ಪ್ರಿಯರು ಯಾವಾಗೊಮ್ಮೆ ಅನ್‌ಲಾಕ್ ಆಗಿ ಚಿನ್ನ ಖರೀದಿಸುತ್ತೇವೋ ಎಂದು ಕಾದು ಕುಳಿತ್ತಿದ್ದರು. ಹೀಗಿರುವಾಗಲೇ ಚಿನ್ನದ ದರ ಏರಿಕೆ ಕಂಡಿದ್ದು ನಲ್ವತ್ತು ಸಾವಿರ ಗಡಿ ದಾಟಿತ್ತು. ಇದು ಚಿನ್ನ ಪ್ರಿಯರನ್ನು ಬೇಸರಗೊಳಿಸಿತ್ತು. ಆದರೀಗ ಬಹುದಿನಗಳ ಬಳಿಕ ಚಿನ್ನದ ದರ ಇಳಿಕೆಯಾಗಿದೆ.
ಲಾಕ್‌ಡೌನ್ ಅಂತ್ಯದಲ್ಲಿ ದಾಖಲೆ ಬರೆದ ಮಾರುತಿ ಬಲೆನೊ!
ಲಾಕ್‌ಡೌನ್ ಆರಂಭವಾಗುವ ಮೊದಲೇ ಭಾರತದ ಆಟೋಮೊಬೈಲ್ ಕಂಪನಿಗಳು ಬಹುತೇಕ ಬಾಗಿಲು ಮುಚ್ಚಿತ್ತು. ಸರಿಸುಮಾರು 2 ತಿಂಗಳ ಬಳಿಕ ಅಂದರೆ ಮೇ ಅಂತ್ಯದಲ್ಲಿ ಆಟೋಮೊಬೈಲ್ ಘಟಕಗಳು ಪುನರ್ ಆರಂಭಗೊಂಡಿತು.. ಮೇ ತಿಂಗಳಲ್ಲಿ ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರುಗಳ ಪೈಕಿ ಮಾರುತಿ ಸುಜುಕಿ ಬಲೆನೋ ದಾಖಲೆ ಬರೆದಿದೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ಇಮ್ರಾನ್ ಪಾಷಾ ಅರೆಸ್ಟ್: ಪಾದರಾಯನಪುರದಲ್ಲಿ 144 ಸೆಕ್ಷನ್...
ಕೊರೋನಾ ಹಿನ್ನೆಲೆ ಐಸೋಲೇಷನ್‌ನಲ್ಲಿ ಬೆಂಗಳೂರಿನ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆಯೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.