ಬೆಂಗಳೂರು, (ಜೂನ್.07): ಕೊರೋನಾ ಹಿನ್ನೆಲೆ ಐಸೋಲೇಷನ್‌ನಲ್ಲಿ ಬೆಂಗಳೂರಿನ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆಯೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

"

 ಸೋಂಕಿನಿಂದ ಗುಣಮುಖರಾಗಿ ಇಂದು (ಭಾನುವಾರ) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ, ಯುದ್ದ ಗೆದ್ದವರಂತೆ ಅವರಿಗೆ ಅದ್ದೂರಿ ಸ್ವಾಗತ ನೀಡಿ ರೋಡ್ ಶೋ ಮಾಡಿದ್ದಾರೆ. ಇದರಿಂದ ಪೊಲೀಸರು ಇಮ್ರಾನ್ ಪಾಷಾನನ್ನು ಬಿಗಿ ಭದ್ರತೆಯಲ್ಲಿ ಜೆ.ಜೆ.ನಗರ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

"

ಪಾದರಾಯನಪುರ ಪಾಲಿಕೆ ಸದಸ್ಯ ಪಾಷಾಗೆ ಕೊರೋನಾ ಸೋಂಕು! 

NDNA ಆಕ್ಟ್ ಅಡಿಯಲ್ಲಿ ಇಮ್ರಾನ್ ಪಾಷಾನನ್ನ ಅರೆಸ್ಟ್ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪಾದರಾಯನಪುರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.ಅಲ್ಲದೇ ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಎರಡು ಕೆ ಎಸ್ ಆರ್ ಪಿ ತುಕಡಿ ನಿಯೋಜಿಸಲಾಗಿದೆ

"

ಐಸೋಲೇಷನ್‌ನಲ್ಲಿಡಲು ಆಸ್ಪತ್ರೆಗೆ ಕರೆದುಕೊಂಡು ಹೋಗವ ವೇಳೆ ಇಮ್ರಾನ್ ಪಾಷಾ ಯುದ್ದಕ್ಕೆ ಹೊರಟವರಂತೆ ಜನರತ್ತ ಕೈಬಿಸಿ ಆಂಬ್ಯುಲೆನ್ಸ್ ಹತ್ತಿದ್ದರು.

ಕೋವಿಡ್ ಪಾಸಿಟೀವ್; ಆಸ್ಪತ್ರೆಗೆ ಹೋಗಲು ಪಾದರಾಯನಪುರ ಕಾರ್ಪೋರೇಟರ್‌ ಹೈಡ್ರಾಮಾ

"