ಚೀನಾ ಟೀಕಿಸಿದ್ದಕ್ಕೆ ಅಮೂಲ್ ಟ್ವೀಟರ್ ಖಾತೆಯೇ ಬ್ಲಾಕ್!
ಚೀನಾ ಟೀಕಿಸಿದ್ದಕ್ಕೆ ಅಮೂಲ್ ಟ್ವೀಟರ್ ಖಾತೆಯೇ ಬ್ಲಾಕ್!| ವ್ಯಾಪಕ ಆಕ್ರೋಶ, ಮತ್ತೆ ಯಥಾಸ್ಥಿತಿ
ನವದೆಹಲಿ(ಜೂ.07): ಭಾರತದ ಖ್ಯಾತ ಕ್ಷೀರ ಉತ್ಪನ್ನಗಳ ಕಂಪನಿಯಾದ ಅಮೂಲ್‌ನ ಟ್ವೀಟರ್ ಖಾತೆಯನ್ನು ಟ್ವೀಟರ್ ಕಂಪನಿ ಕೆಲ ಗಂಟೆಗಳ ಕಾಲ ಬ್ಲಾಕ್ ಮಾಡಿದ ಘಟನೆ ನಡೆದಿದೆ.
ಅಮೂಲ್ ಜೂನ್ 3ರಂದು ಚೀನಾ ಸೇನೆಯ ದ್ಯೋತಕವಾದ ಡ್ರ್ಯಾಗನ್‌ಗೆ ‘ಹೋಗು ಆಚೆ’ ಎಂದು ಅಮೂಲ್ ಗರ್ಲ್ ಎಚ್ಚರಿಕೆ ನೀಡುವ ವ್ಯಂಗ್ಯ ಚಿತ್ರವನ್ನು ತನ್ನ ಟ್ವೀಟರ್ ಖಾತೆಯಲ್ಲಿ ಪ್ರಕಟಿಸಿತ್ತು.
ನೀವು ಅವರಿಗಿಂತ ಬೆಟರ್ ಆಗಬೇಕಾ? ಇದು ಮೈಂಡ್ ಗೇಮ್!
ಇದರ ಬೆನ್ನಲ್ಲೇ ಜೂನ್ 4ರ ರಾತ್ರಿ ಅಮೂಲ್ ಖಾತೆಯನ್ನು ಟ್ವೀಟರ್ ಯಾವುದೇ ಕಾರಣ ನೀಡದೆ ಬ್ಲಾಕ್ ಮಾಡಿತ್ತು. ಈ ನಡೆಗೆ ನೆಟ್ಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಜೂನ್ 5ರಂದು ಮತ್ತೆ ಅಮೂಲ್ ಖಾತೆಗೆ ಟ್ವೀಟರ್ ಚಾಲನೆ ಕೊಟ್ಟಿದೆ.
‘ಭದ್ರತಾ ಕಾರಣಗಳಿಗೆ ಟ್ವೀಟರ್ ಈ ಕ್ರಮ ಕೈಗೊಂಡಿತ್ತು. ಅಧಿಕೃತ ಖಾತೆಗಳನ್ನು ದೃಢೀಕರಿಸಲು ಈ ರೀತಿಯ ಪ್ರಕ್ರಿಯೆಯನ್ನು ಟ್ವೀಟರ್ ಮಾಡುತ್ತದೆ. ಅಮುಲ್ ಕಂಪನಿಯು ಖಾತೆಯ ಭದ್ರತಾ ಪ್ರಕ್ರಿಯೆ ಮುಗಿಸಿದ ಬಳಿಕ ಮತ್ತೆ ಖಾತೆಗೆ ಚಾಲನೆ ನೀಡಿದ್ದೇವೆ’ ಎಂದು ಟ್ವೀಟರ್ ಸಮಜಾಯಿಷಿ ನೀಡಿದೆ.