Asianet Suvarna News Asianet Suvarna News

ಮೋದಿ-2 ವೈಖರಿ ಅರಿತರು: ಆಡಳಿತಾತ್ಮಕ ಸೇವೆಗೆ ಖಾಸಗಿ ಪರಿಣಿತರು!

ಆಡಳಿತಾತ್ಮಕ ಚಾಣಾಕ್ಷತೆ ಮೆರೆಯಲು ಸಿದ್ಧರಾದ ಮೋದಿ| ಮೋದಿ-2 ಸರ್ಕಾರದ ಕಾರ್ಯವೈಖರಿ ಹೇಗಿರಲಿದೆ?| ಖಾಸಗಿ ವಲಯದ ಪರಿಣಿತರಿಗೆ ಐಎಎಸ್ ಹುದ್ದೆ| 9 ಜನ ಖಾಸಗಿ ವಲಯದ ಪರಿಣಿತರನ್ನು ಆಯ್ಕೆ ಮಾಡಿರುವ UPSC| ಪ್ರಧಾನಿ ಕಾರ್ಯಾಲಯದ ಅಧಿಕೃತ ಒಪ್ಪಿಗೆಯೊಂದೇ ಬಾಕಿ|

Centre Govt Set To Appoint Experts Picked For Lateral Entry Into IAS
Author
Bengaluru, First Published May 29, 2019, 1:51 PM IST

ನವದೆಹಲಿ(ಮೇ.29): ಆಡಳಿತದಲ್ಲಿ ಹಲವು ಪ್ರಥಮಗಳನ್ನು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿ, ಎರಡನೇ ಬಾರಿ ತಮ್ಮ ಆಡಳಿತಾತ್ಮಕ ಚಾಣಾಕ್ಷತೆ ಮೆರೆಯಲು ಸಿದ್ಧರಾಗಿದ್ದಾರೆ.

ಖಾಸಗಿ ಮತ್ತು ಸರ್ಕಾರಿ ಆಡಳಿತ ಯಂತ್ರವನ್ನು ಮತ್ತಷ್ಟು ಹತ್ತಿರಕ್ಕೆ ತರಲು ಶ್ರಮಿಸುತ್ತಿರುವ ಪ್ರಧಾನಿ ಮೋದಿ, ಖಾಸಗಿ ವಲಯದ ಪರಿಣಿತರು ನಾಗರಿಕ ಸೇವೆ ಸೇರುವ ವಿಶೇಷ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು.

ಅದರಂತೆ UPSC ದೇಶದ ಸುಮಾರು 9 ಖಾಸಗಿ ವಲಯದ ಪರಿಣಿತರನ್ನು ಆಯ್ಕೆ ಮಾಡಿದ್ದು, ಮುಂಬರುವ ಜೂನ್ ತಿಂಗಳ ಅಂತ್ಯದಲ್ಲಿ ಇವರೆಲ್ಲಾ ಐಎಎಸ್ ಅಧಿಕಾರಿಗಳಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ.

ಐಎಎಸ್ ಅಧಿಕಾರಿಗಳ ಕೊರತೆ ನೀಗಿಸಲು ಮತ್ತು ಖಾಸಗಿ ವಲಯದ ಪರಿಣಿತರ ಅನುಭವವನ್ನು ಆಡಳಿತಾತ್ಮಕ ನಿರ್ಣಯಗಳಲ್ಲಿ ಬಳಸಿಕೊಳ್ಳುವ ಮೋದಿ ಯೋಜನೆ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ.

UPSCಯಿಂದ ಆಯ್ಕೆಯಾಗಿರುವ ಈ 9 ಜನ ಪರಿಣಿತರು ಮೊದಲು 3 ತಿಂಗಳ ತರಬೇತಿ ಪಡೆದು ಆ ಬಳಿಕ ಐಎಎಸ್ ಅಧಿಕಾರಿಗಳಾಗಿ ನೇಮಕಗೊಳ್ಳಲಿದ್ದಾರೆ. ಪ್ರಧಾನಿ ಕಾರ್ಯಾಲಯದಿಂದ ಇವರ ನೇಮಕಕ್ಕೆ ಅಧಿಕೃತ ಒಪ್ಪಿಗೆ ಸಿಗಬೇಕಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios