Asianet Suvarna News

'ಟೈಮ್' ಚೇಂಜ್ ಆಗಿದೆ: ಮೋದಿ ಈಗ ಭಾರತದ ಸಂಘಟಕ!

ಲೋಕಸಭೆ ಚುನಾವಣೆ ಬಳಿಕ ಬದಲಾದ 'ಟೈಮ್'| ಮೋದಿಯನ್ನು ಭಾರತದ ಮುಖ್ಯ ವಿಭಜಕ ಎಂದಿದ್ದ ಟೈಮ್| ಚುನಾವಣೆ ಬಳಿಕ ಮೋದಿ ಕುರಿತ ಅಭಿಪ್ರಾಯ ಬದಲು| ಮೋದಿಯನ್ನು ಭಾರತದ ಸಂಘಟಕ ಎಂದು ಹೊಗಳಿದ ಟೈಮ್ ನಿಯತಕಾಲಿಕೆ| ಇಂದಿರಾ ಗಾಂಧಿ ಬಳಿಕ ದೇಶವನ್ನು ಒಗ್ಗೂಡಿಸಿದ ಪ್ರಧಾನಿ ಎಂದ ಟೈಮ್|

Time Magazine Says Narendra Modi Has United India
Author
Bengaluru, First Published May 29, 2019, 1:20 PM IST
  • Facebook
  • Twitter
  • Whatsapp

ನ್ಯೂಯಾರ್ಕ್(ಮೇ.29): ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಭಾರತದ ಮುಖ್ಯ ವಿಭಜಕ' ಎಂದು ಜರೆದಿದ್ದ ಅಮೆರಿಕದ ಟೈಮ್ ನಿಯತಕಾಲಿಕೆ, ಇದೀಗ ಚುನಾವಣೆ ಮುಗಿದ ಬಳಿಕ ಮೋದಿ ಅವರನ್ನು ಭಾರತದ ಸಂಘಟಕ ಎಂದು ಹಾಡಿ ಹೊಗಳಿದೆ.

ಲೋಕಸಭೆ ಚುನಾವಣೆ ಬಳಿಕ ಮೋದಿ ಕುರಿತು ಮತ್ತೆ ಲೇಖನ ಬರೆದಿರುವ ಟೈಮ್ ಮ್ಯಾಗಜಿನ್, ಮೋದಿ ಕೇವಲ ಅಧಿಕಾರವನ್ನಷ್ಟೇ ಮರಳಿ ಪಡೆದಿಲ್ಲ ಬದಲಿಗೆ ಭಾರತವನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದೆ.

ಭಾರತದ ಸಾಮಾಜಿಕ ವ್ಯವಸ್ಥೆಯ ಅತ್ಯಂತ ಕೆಳ ಹಂತದಿಂದ ಮೇಲೆದ್ದು ಬಂದಿರುವ ಮೋದಿ, ಭಾರತವನ್ನು ಒಗ್ಗೂಡಿಸಿದ ಪರಿ ಅನನ್ಯ ಎಂದು ಲೇಖನದಲ್ಲಿ ಪ್ರಶಂಸೆ ವ್ಯಕ್ತಪಡಿಸಲಾಗಿದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಳಿಕ ದೇಶವನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾದ ಏಕೈಕ ಪ್ರಧಾನಿ ನರೇಂದ್ರ ಮೋದಿ ಎಂದು ಟೈಮ್ ನಿಯಕಾಲಿಕೆ ಅಭಿಪ್ರಾಯಪಟ್ಟಿದೆ.

Follow Us:
Download App:
  • android
  • ios