1) ಕರ್ನಾಟಕ ಉಪ ಚುನಾವಣೆ : 15ರಲ್ಲಿ 12 ಬಿಜೆಪಿ, ಅನರ್ಹರು ಈಗ ಅರ್ಹರು!

ರಾಜ್ಯದಲ್ಲಿ ಉಪ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಆಡಳಿತ ಪಕ್ಷ ಬಿಜೆಪಿಯತ್ತ ಜನರು ಒಲವು ತೋರಿಸಿದ್ದು, 15 ಕ್ಷೇತ್ರಗಳಲ್ಲಿ 12 ಸ್ಥಾನ ಬಿಜೆಪಿಗೆ ಒಲಿದಿದೆ.  ಅನರ್ಹರಾಗಿ ರಾಜೀನಾಮೆ ನೀಡಿ ಉಪ ಚುನಾವಣೆ ಎದುರಿಸಿದವರು ಇದೀಗ ಅರ್ಹರಾಗಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 


2) ಸೋಲಿನ ಹೊಣೆಹೊತ್ತು ಸಿದ್ದು ರಾಜೀನಾಮೆ, ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ

ರಾಜ್ಯ ಉಪಚುನಾವಣೆ ಫಲಿತಾಂಶ ರಾಜ್ಯ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸೋಲಿನ ಹೊಣೆ ಹೊತ್ತ ಸಿದ್ದರಾಮಯ್ಯ ವಿಪಕ್ಷ ನಾಯಕ ಹಾಗೂ CLP ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. 

3) ಬೈ ಎಲೆಕ್ಷನ್ ರಿಸಲ್ಟ್: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿ


ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅಳಿವು ಉಳಿವಿಗೆ ಕಾರಣವಾಗಿದ್ದ ಉಪ ಚುನಾವಣೆ ರಿಸಲ್ಟ್‌ ಪ್ರಕಟಗೊಂಡಿದ್ದು, ಬಿಜೆಪಿ ಸರ್ಕಾರ ಸೇಫ್ ಆಗಿದೆ. ಆದ್ರೆ, ಇದರ ಮಧ್ಯೆ ಮಾಜಿ ಸಿಎಂ ಕುಮಾರಸ್ವಾಮಿ ಅಚ್ಚರಿಕೆ ಟ್ವೀಟ್ ಮಾಡಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ.

4) ನಿಜವಾಯ್ತು ನೀಲಿ ಪುಸ್ತಕದ ರಾಜಕೀಯ ಭವಿಷ್ಯ: BSY ಸರ್ಕಾರಕ್ಕಿಲ್ಲ ಕಂಟಕ!

ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ ಹಾಗೂ ಮೂರು ಕ್ಷೇತ್ರಗಳಲ್ಲಿ ಮಾತ್ರ ಸಸ್ಪೆನ್ಸ್ ಇರಲಿದೆ ಎಂದು ಗಣಿತ ತಜ್ಞ ಪಂಡಿತ ಶ್ರೀಪಾಲ್​ ಉಪಾಧ್ಯ ಅವರು ನುಡಿದ ಭವಿಷ್ಯ ಇಂದು ಅಕ್ಷರಶಃ ನಿಜವಾಗಿದೆ. 

5) ಸಿದ್ದರಾಮಯ್ಯಗೆ ಖಡಕ್ ಎಚ್ಚರಿಕೆ ನೀಡಿದ ನೂತನ ಅರ್ಹ ಶಾಸಕ!

ಇನ್ನೂ 13 ರಿಂದ 15 ಜನ ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ, ಆದರೆ ಬಿಜೆಪಿ ಹೈಕಮಾಂಡ್ ಇದಕ್ಕೆ ಒಪ್ಪಿಲ್ಲ, ಸೋತ ಅನರ್ಹ ಶಾಸಕರ ಬಗ್ಗೆ ಸಿಎಂ ಯಡಿಯೂರಪ್ಪ, ಅಮಿತ್ ಶಾ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ವಿಜೇತ ಅಭ್ಯರ್ಥಿ ರಮೇಶ್ ಜಾರಕಿಹೊಳಿ‌ ಹೇಳಿದ್ದಾರೆ. 

6) ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಗೆಲುವಿನೊಂದಿಗೆ ಸವದಿ ರಾಜಕೀಯ ಹಾದಿ ಸುಗಮ..?

ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನೊಂದಿಗೆ ಹಾಗೂ ಅಥಣಿಯಲ್ಲಿ ಅನರ್ಹ ಶಾಸಕ ಗೆದ್ದರೂ ಸಹ ಸವದಿ ರಾಜಕೀಯ ಹಾದಿ ಸುಗಮವಾಗಿದೆ ಎನ್ನುವ ಮಾತುಗಳು ರಾಜ್ಯ ರಾಜಕೀಯದಲ್ಲಿ ದಟ್ಟವಾಗಿದೆ.

7) ಬೈ ಎಲೆಕ್ಷನ್ ರಿಸಲ್ಟ್: ಅನರ್ಹರು ಈಗ ಅರ್ಹರು, ಸೋತ್ರೂ ವಿಶ್ವನಾಥ್‌ಗೆ ಸಿಕ್ತು ಭರವಸೆ

ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕದ 15 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶವು ಸೋಮವಾರ(ಡಿಸೆಂಬರ್ 09)ದಂದು ಹೊರ ಬಂದಿದೆ. ವಿಶ್ವನಾಥ್ ಹೊರತುಪಡಿಸಿ ಉಳಿದೆಲ್ಲ ಅನರ್ಹರು ಈಗ ಬೈ ಎಲೆಕ್ಷನ್‌ನಲ್ಲಿ ಗೆದ್ದು ಅರ್ಹರಾಗಿದ್ದೇವೆ ಎಂದು ತೋರಿಸಿದ್ದಾರೆ. 

8) ಸೊಲ್ಲೇ ಇಲ್ಲದ ಕೆಆರ್ ಪೇಟೆಯಲ್ಲಿ ಕಮಲ ಅರಳಿದ್ದೇಗೆ? ಹೊಸ ರಾಜಕೀಯ ಚಾಣಕ್ಯ ಮಾಡಿದ ಆ ಒಂದು ಕೆಲಸ!

ಕೆಆರ್ ಪೇಟೆಯಲ್ಲಿ ನಾರಾಯಣ ಗೌಡರು ಗೆಲುವಿನ ನಗೆ ಬೀರಿದ್ದಾರೆ. ಹಾಗಾದರೆ ನಿಜಕ್ಕೂ ಕೆಆರ್ ಪೇಟೆಯ ಗೆಲುವಿನ ಶ್ರೇಯ ಯಾರಿಗೆ ಸಲ್ಲುತ್ತದೆ? ಹಾಗಾದರೆ ಬಿಜೆಪಿಗೆ ನೆಲೆಯೇ ಇಲ್ಲದ ಕೆಆರ್ ಪೇಟೆಯಲ್ಲಿ 9  ಸಾವಿರ ಮತಗಳ ಅಂತರದಲ್ಲಿ ನಾರಾಯಣ ಗೌಡ ಗೆದ್ದು ಬೀಗಿದ್ದಾರೆ. 

9) ಇದು ನನ್ನ ಕೊನೆ ಚುನಾವಣೆ, ಇನ್ಮುಂದೆ ಸ್ಪರ್ಧಿಸಲ್ಲ: ಗೆದ್ದ ಶಾಸಕನ ಅಚ್ಚರಿಯ ಹೇಳಿಕೆ!

ರ್ನಾಟಕ ಉಪ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. 15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಗೆಲುವಿನ ನಗು ಬೀರಿದೆ. ಈ ಮೂಲಕ ಕರ್ನಾಟಕ ಸರ್ಕಾರ ಸುಭದ್ರಗೊಂಡಿದೆ. ಹುಣಸೂರು ಹೊರತುಪಡಿಸಿ ಬೇರೆಲ್ಲಾ ಕ್ಷೇತ್ರಗಳಲ್ಲಿ ಅತೃಪ್ತ ಶಾಸಕರಿಗೆ ಜನರು ಮತ ನೀಡಿ ಗೆಲ್ಲಿಸಿದ್ದಾರೆ. ಹೀಗಿರುವಾಗ ಶಾಸಕರೊಬ್ಬರು ಇದು ತನ್ನ ಕೊನೆ ಚುನಾವಣೆ, ಇನ್ಮುಂದೆ ತಾನು ಯಾವ ಚುನಾವಣೆಯಲ್ಲೂ ಸ್ಪರ್ಧಿಸಲ್ಲ ಎಂದು ಘೋಷಿಸಿದ್ದಾರೆ.

10) ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆದ ದಿನೇಶ್, ಕಾಂಗ್ರೆಸ್‌ ಮುಂದಿನ ಆಯ್ಕೆ!...

ಉಪಚುನಾವಣೆ ಫಲಿತಾಂಶ ಬಿಜೆಪಿಯಲ್ಲಿ ಗೆಲುವಿನ ನಗೆ ಮೂಡಿಸಿದ್ದರೆ ಅತ್ತ ಕಾಂಗ್ರೆಸ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ್ದು ರಾಜೀನಾಮೆ ಪರ್ವ ಆರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದಾರೆ.