1) ಉಪಚುನಾವಣೆ: ಚಿಕ್ಕಬಳ್ಳಾಪುರ JDS ಅಭ್ಯರ್ಥಿ ನಾಮಪತ್ರ ರಿಜೆಕ್ಟ್.

ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯಾಗಿದ್ದು, ಇಂದು (ಮಂಗಳವಾರ) ನಾಮಪತ್ರ ಪರಿಶೀಲನೆ ನಡೆದಿದೆ. ಇದರ ಮಧ್ಯೆ ಚಿಕ್ಕಬಳ್ಳಾಪುರ ಜೆಡಿಎಸ್ ಅಭ್ಯರ್ಥಿಯ ಉಮೇದುವಾರಿಕೆ ತಿರಸ್ಕೃತವಾಗಿದೆ.

2) ಮಂಡ್ಯ: ಸೊಸೆಯನ್ನು ಕೊಂದ ಮಾವ ಜೈಲಿನಲ್ಲೇ ಆತ್ಮಹತ್ಯೆ

ಅನೈತಿಕ ಸಂಬಂಧಕ್ಕೆ ಒಪ್ಪದ ಸೊಸೆಯನ್ನು ಕೊಂದು ಜೈಲಿನಲ್ಲಿದ್ದ ಮಾವ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸೊಸೆಯನ್ನೇ ಮಂಚಕ್ಕೆ ಕರೆದಿದ್ದ ಕಾಮುಕ ಮಾವ ಅನೈತಿಕ ಸಂಬಂಧಕ್ಕೆ ಒಪ್ಪದ ಆಕೆಯನ್ನು ಹಾಡ ಹಗಲೇ ಕೊಲೆ ಮಾಡಿದ್ದ. ಇದೀದ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

3) ರೌಡಿ ಲಕ್ಷ್ಮಣ ಮರ್ಡರ್ ಮಿಸ್ಟರಿ; ವರ್ಷಿಣಿ ಬಿಚ್ಚಿಟ್ಳು ಲವ್, ಸೆಕ್ಸ್ ಹಿಸ್ಟ್ರಿ!

ಕಳೆದ ಮಾರ್ಚ್ ತಿಂಗಳಿನಲ್ಲಿ ಹಾಡುಹಗಲೇ ರೌಡಿ ಲಕ್ಷ್ಮಣನನ್ನು ಬೆಂಗಳೂರಿನ ನಡುಬೀದಿಯಲ್ಲಿ ಭೀಕರವಾಗಿ ಹತ್ಯೆಗೈಯಲಾಗಿತ್ತು.ಪ್ರತಿ ದಿನ ಸ್ಫೋಟಕ ತಿರುವುಗಳನ್ನು ಪಡೆದ ಈ ಪ್ರಕರಣದಲ್ಲಿ ಕೊನೆಗೆ ಸಿಕ್ಕಿಬಿದ್ದದ್ದು ವಿದ್ಯಾರ್ಥಿನಿ! ಬೆಂಗಳೂರಿನ ಕೊಲೆಗೆ ಲಂಡನ್‌ ನಂಟನ್ನು ಕಂಡು ಪೊಲೀಸರೇ ಹೈರಾಣಾಗಿದ್ದರು. ಆ ಯುವತಿ ವರ್ಷಿಣಿ ಲಂಡನ್‌ನಲ್ಲೇ ಕೂತು ಮರ್ಡರ್ ಸ್ಕೆಚ್ ಹಾಕಿದ್ದಳು. ಪ್ರಕರಣದ ಕುರಿತಂತೆ ಮತ್ತಷ್ಟು ಸ್ಫೋಟಕ ಮಾಹಿತಿ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ. 

4) ಉಪಚುನಾವಣೆ ಅಖಾಡ ರೆಡಿ; ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ

ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ಅಖಾಡ ರೆಡಿಯಾಗಿದೆ.  ನಾಮಪತ್ರ ಸಲ್ಲಿ ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಸರ್ಕಾರ ಉಳಿಸಿಕೊಳ್ಳಲು 08 ಸ್ಥಾನಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅಭ್ಯರ್ಥಿಗಳ ಆಸ್ತಿ ವಿವರ ಪಟ್ಟಿ ಬಹಿರಂಗವಾಗಿದೆ.

5) ಬಿಕಿನಿ ತೊಟ್ಟರೆ ಫ್ರೀ ಗ್ಯಾಸ್: ಬಂಕ್ ಮುಂದೆ ಗಂಡಸರ ಲೈನ್!

ಹೊಸದಾಗಿ ಮಾರುಕಟ್ಟೆಗೆ ಬರುವ ಉತ್ಪನ್ನಗಳು ಗ್ರಾಹಕರ ಸೆಳೆಯಲು ಹಲವು ಆಫರ್‌ ನೀಡುತ್ತವೆ. ಇದೀಗ  ಪೆಟ್ರೋಲ್‌ ಬಂಕ್‌ವೊಂದು ಬಿಕಿನಿ ತೊಟ್ಟಗ್ರಾಹಕರಿಗೆ ಉಚಿತ ಪೆಟ್ರೋಲ್‌ ಮತ್ತು ಡೀಸೆಲ್‌ ಪೂರೈಕೆ ಮಾಡುತ್ತಿದೆ. ಈ ಆಫರ್ ನೋಡಿದ ಬಳಿಕ ಪೆಟ್ರೋಲ್ ಬಂಕ್ ಬಳಿ ಗಂಡಸರು ಕ್ಯೂ ನಿಂತಿದ್ದಾರೆ.

6) ಅರೇ, ಮಲೈಕಾಗೇನಾಯ್ತು!? ಶರ್ಟ್ ಹಾಕಿ ಪ್ಯಾಂಟ್ ಹಾಕೋದನ್ನ ಮರೆತ್ಬಿಟ್ರಾ?

ಮಲೈಕಾ ಅರೋರಾ ಬಾಲಿವುಡ್ ಸೆನ್ಸೇಷನ್ ಅಂದ್ರೆ ತಪ್ಪಾಗಲಿಕ್ಕಿಲ್ಲ. ತನಗಿಂತ ಕಿರಿಯ ಅರ್ಜುನ್ ಕಪೂರ್ ಜೊತೆಗೆ ಡೇಟಿಂಗ್, ಹಾಕುವ ಡ್ರೆಸ್, ಡ್ಯಾನ್ಸ್ ಮೂಲಕ ಆಗಾಗ ಸದ್ದು ಮಾಡುತ್ತಿದ್ದಾರೆ.  ಈಕೆ ಏನ್ ಮಾಡಿದ್ರೂ ಸುದ್ದಿಯಾಗುತ್ತೆ ನೋಡಿ. ಅಂದರೆ ಅಭಿಮಾನಿಗಳು ಅಷ್ಟೊಂದು ಗಮನಿಸ್ತಾರೆ ಅಂತಾಯ್ತು! 

7) ಬಿಗ್ ಬಾಸ್ ಬಾರ್ಬಿ ಡಾಲ್ ಚೈತ್ರಾ ವಾಸುದೇವನ್ ಪತಿ ಇವ್ರು!

ನೋಡೋಕೆ ಥೇಟ್‌ ಗೊಂಬೆಯಂತೆ ಕಾಣುವ ಬಿಗ್ ಬಾಸ್ ಸ್ಟರ್ಧಿ ಚೈತ್ರಾ ವಾಸುದೇವನ್ ಮದುವೆ ಆಗಿದ್ದಾರೆ ಅಂತ ಕೇಳಿದ್ರೆ ನಂಬೋಕೆ ಆಗಲ್ಲ. ನಿರೂಪಣೆಯಲ್ಲಿ ಎತ್ತಿದ ಕೈ, ಸೈಲೆಂಟ್ ಆದ್ರೂ ಮೈಕ್‌ ಕೈಗೆ ಬಂದ್ರೆ ಮಾತಿನ ಮಲ್ಲಿ. ಬಿಗ್ ಬಾಸ್ ಮನೆಯಲ್ಲಿ ಮದುವೆಯಾಗಿರುವ ವಿಚಾರವನ್ನು ಮೊದಲ ಬಾರಿ ರಿವೀಲ್ ಮಾಡಿ ಸರ್ಪ್ರೆಸ್ ನೀಡಿದ್ದಾರೆ. 

8) ಟೆಲಿಕಾಂ ಕಂಪೆನಿಗಳ ಮಹತ್ವದ ಘೋಷಣೆ: ಡಿಸೆಂಬರ್‌ನಿಂದ ಮೊಬೈಲ್‌ ಭಾರೀ ದುಬಾರಿ!

ರಿಲಯನ್ಸ್‌ ಜಿಯೋ ಮಾರುಕಟ್ಟೆಪ್ರವೇಶದ ಬಳಿಕ ದರ ಸಮರದ ಹೊಡೆತಕ್ಕೆ ಸಿಕ್ಕು ಮೊಬೈಲ್‌ ಕರೆ ದರ ಸೇರಿದಂತೆ ವಿವಿಧ ರೀತಿಯ ಸೇವೆಗಳ ದರ ಇಳಿಸಿದ್ದ ವಿವಿಧ ಟೆಲಿಕಾಂ ಕಂಪನಿಗಳು ಮತ್ತೆ ದರ ಏರಿಕೆಯ ಘೋಷಣೆ ಮಾಡಿವೆ. ಡಿಸೆಂಬರ್‌ನಿಂದಲೇ ಎಲ್ಲಾ ರೀತಿಯ ಮೊಬೈಲ್‌ ಸೇವೆಗಳ ಶುಲ್ಕವನ್ನು ಹೆಚ್ಚಿಸುವುದಾಗಿ ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್‌- ಐಡಿಯಾ ಕಂಪನಿಗಳು ಸೋಮವಾರ ಪ್ರಕಟಿಸಿವೆ.

9) '40 ಸಾವಿರ ಐಟಿ ಉದ್ಯೋಗಿಗಳ ಭವಿಷ್ಯಕ್ಕೆ ಕತ್ತರಿ!'

ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಿರುವುದರಿಂದ ಸಾಫ್ಟ್ ವೇರ್ ಕಂಪೆನಿಯ ಸುಮಾರು 40 ಸಾವಿರ ಮಧ್ಯಮ ಮಟ್ಟದ ಟೆಕ್ಕಿಗಳು ಉದ್ಯೋಗ ಕಳೆದುಕೊಳ್ಳಲಿದ್ದಾರೆಂದು ಇನ್ಫೀಸಿಸ್ ಮಾಜಿ ನಿರ್ದೇಶಕ ಟಿ. ವಿ ಮೋಹನ್ ದಾಸ್ ಪೈ ಭವಿಷ್ಯ ನುಡಿದಿದ್ದಾರೆ.

10) ಶ್ವಾಸಕೋಶ ದಾನ ಮಾಡಿದ ಧೂಮಪಾನ ವ್ಯಸನಿ: ವೈರಲ್ ಆಯ್ತು ವಿಡಿಯೋ!

ಧೂಮಪಾನ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಹೀಗಿದ್ದರೂ ಸ್ಮೋಕಿಂಗ್ ಮಾಡುವವರ ಸಂಖ್ಯೆ ಮಾತ್ರ ಇಳಿದಿಲ್ಲ. ಸದ್ಯ ಧೂಮಪಾನ ವ್ಯಸನಿಯೊಬ್ಬ ದಾನಗೈದ ಶ್ವಾಸಕೋಶದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.