Asianet Suvarna News Asianet Suvarna News

ಉಪಚುನಾವಣೆ ಅಖಾಡ ರೆಡಿ; ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ

ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ಅಖಾಡ ರೆಡಿಯಾಗಿದೆ.  ನಾಮಪತ್ರ ಸಲ್ಲಿ ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಸರ್ಕಾರ ಉಳಿಸಿಕೊಳ್ಳಲು 08 ಸ್ಥಾನಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ. ಯಾರ್ಯಾರ ಬಳಿ ಎಷ್ಟೆಷ್ಟು ಆಸ್ತಿಯಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ. 

Karnataka By Election candidates assets details are here
Author
Bengaluru, First Published Nov 19, 2019, 11:12 AM IST

ಬೆಂಗಳೂರು (ನ. 19): ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ಅಖಾಡ ರೆಡಿಯಾಗಿದೆ.  ನಾಮಪತ್ರ ಸಲ್ಲಿ ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಸರ್ಕಾರ ಉಳಿಸಿಕೊಳ್ಳಲು 08 ಸ್ಥಾನಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.  ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ. ಯಾರ್ಯಾರ ಬಳಿ ಎಷ್ಟೆಷ್ಟು ಆಸ್ತಿಯಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ. 

ಆನಂದಸಿಂಗ್‌ ಆಸ್ತಿಯಲ್ಲಿ .58.76 ಕೋಟಿ ಹೆಚ್ಚಳ

ವಿಜಯನಗರ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಆನಂದ್‌ ಸಿಂಗ್‌ ಚರಾಸ್ತಿ, ಸ್ಥಿರಾಸ್ತಿ ಸೇರಿದಂತೆ ಒಟ್ಟು .176.27 ಕೋಟಿ ಘೋಷಿಸಿಕೊಂಡಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಇವರು .117.51 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ಹೀಗಾಗಿ ಆನಂದ್‌ ಸಿಂಗ್‌ ಆಸ್ತಿ ಕಳೆದ ಬಾರಿಗೆ ಹೋಲಿಸಿದರೆ .58.76 ಕೋಟಿ ಹೆಚ್ಚಳವಾಗಿದೆ.

ನಾಮಪತ್ರ ಭರಾಟೆ ಅಂತ್ಯ, ಯಾರು ಯಾವ ಕಣಕ್ಕೆ ನಾಮಿನೇಷನ್? 15 ಕ್ಷೇತ್ರಗಳ ಸಂಪೂರ್ಣ ವಿವರ...

ಆನಂದ ಸಿಂಗ್‌ .69.27 ಕೋಟಿ ಚರಾಸ್ತಿ, .107 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಆನಂದ್‌ಸಿಂಗ್‌ ಬಳಿ ಬಿಎಂಡಬ್ಲ್ಯೂ, ರೇಂಜ್‌ ರೋವರ್‌ ಸೇರಿದಂತೆ 15 ವಿವಿಧ ಕಾರುಗಳಿವೆ. ಇವರ ಬಳಿ .45.05 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದರೆ ಪತ್ನಿ ಲಕ್ಷ್ಮೇ ಸಿಂಗ್‌ .58.48 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. .5.26 ಕೋಟಿ ಮೌಲ್ಯದ ಆಭರಣಗಳನ್ನು ಹೊಂದಿದ್ದು, .76.42 ಕೋಟಿ ಸಾಲವೂ ಇದೆ. ಕಳೆದ ಚುನಾವಣೆಯಲ್ಲಿ ಸಲ್ಲಿಸಿದ ಆಸ್ತಿ ವಿವರದಲ್ಲಿ ಆನಂದಸಿಂಗ್‌ ಕುಟುಂಬದ ಒಟ್ಟು ಸ್ಥಿರಾಸ್ತಿ .75.45 ಕೋಟಿ, ಚರಾಸ್ತಿ .42.06 ಕೋಟಿ ಇತ್ತು.

ಎಚ್‌.ವಿಶ್ವನಾಥ್‌ ಆಸ್ತಿ .3.46 ಕೋಟಿ

ಹುಣಸೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್‌ ಮತ್ತು ಅವರ ಪತ್ನಿ ಎನ್‌.ಶಾಂತಮ್ಮ ಅವರ ಹೆಸರಿನಲ್ಲಿರುವ ಒಟ್ಟು ಆಸ್ತಿ ಮೌಲ್ಯ.3.46 ಕೋಟಿ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಯಶವಂತಪುರ ಕೈ ಅಭ್ಯರ್ಥಿ ನಾಗರಾಜ್ ಬಳಿ ಪತ್ನಿಗಿಂತಲೂ ಹೆಚ್ಚು ಚಿನ್ನ!

ಎಚ್‌.ವಿಶ್ವನಾಥ್‌ ತಮ್ಮ ಹೆಸರಿನಲ್ಲಿ ಯಾವುದೇ ವಾಹನ ಇಲ್ಲ ಎಂದು ತಿಳಿಸಿದ್ದಾರೆ. ತಮ್ಮ ಬಳಿ ಅಂದಾಜು .1 ಲಕ್ಷ ಮೌಲ್ಯದ 40 ಗ್ರಾಂ ಚಿನ್ನ, ಪತ್ನಿ ಹೆಸರಿನಲ್ಲಿ 300 ಗ್ರಾಂ ಚಿನ್ನ, 3 ಕೇಜಿ ಬೆಳ್ಳಿ ಇದೆ ಎಂದು ಘೋಷಿಸಿದ್ದಾರೆ. ವಿಶ್ವನಾಥ್‌ .2.50 ಲಕ್ಷ ಮತ್ತು ಪತ್ನಿ .3 ಲಕ್ಷ ನಗದು ಹೊಂದಿದ್ದಾರೆ. ವಿಶ್ವನಾಥ್‌ ಒಟ್ಟು 11 ಎಕರೆ 17 ಗುಂಟೆ ಕೃಷಿ ಭೂಮಿ ಹೊಂದಿದ್ದು, ಪತ್ನಿ ಶಾರದಮ್ಮ ಹೆಸರಿನಲ್ಲಿ 2 ಎಕರೆ ತರಿ ಭೂಮಿ ಹೊಂದಿದ್ದಾರೆ.

ವಾಣಿಜ್ಯಕ್ಕೆ ಬಳಕೆಯಾಗುವ ಖಾಲಿ ನಿವೇಶನ ಇವುಗಳ ಒಟ್ಟು ಮೌಲ್ಯ .1.50 ಕೋಟಿ ಎಂದು ತಿಳಿಸಿದ್ದಾರೆ. ಕಳೆದ 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿಶ್ವನಾಥ್‌ .2.28 ಕೋಟಿ ಮತ್ತು ಪತ್ನಿ .52 ಲಕ್ಷ ಹೊಂದಿದ್ದಾರೆ ಎಂದು ಘೋಷಿಸಿಕೊಂಡಿದ್ದರು. ಈ ಬಾರಿ ಉಪ ಚುನಾವಣೆಯಲ್ಲಿ ವಿಶ್ವನಾಥ್‌ ಆಸ್ತಿಯಲ್ಲಿ .52 ಲಕ್ಷ ವೃದ್ಧಿಸಿದ್ದು, ಪತ್ನಿ ಆಸ್ತಿ ಮೌಲ್ಯ .8 ಲಕ್ಷ ಕಡಿಮೆಯಾಗಿದೆ.

ರಾಜು ಕಾಗೆ ಆಸ್ತಿ ದುಪ್ಪಟ್ಟು

ಕಾಗವಾಡ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜು ಕಾಗೆ ಅವರ ಆಸ್ತಿಯಲ್ಲಿ ಒಂದೇ ವರ್ಷದಲ್ಲಿ ದುಪ್ಪಟ್ಟಾಗಿದೆ. ಕಳೆದ 2018ರ ವಿಧಾನಸಭೆ ಚುನಾವಣೆ ವೇಳೆ ತಮ್ಮ ಒಟ್ಟು ಆಸ್ತಿಯನ್ನು .4.84 ಕೋಟಿ ಆಸ್ತಿ ಘೋಷಣೆ ಮಾಡಿದ್ದರು. ಈಗ ನಾಮಪತ್ರದ ಜೊತೆಗೆ ಸಲ್ಲಿಸಿದ ತಮ್ಮ ಆಸ್ತಿ ಕುರಿತ ಅಫಿಡವಿಟ್‌ನಲ್ಲಿ .8.36 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ. ಇದೀಗ ಅವರ ಆಸ್ತಿಯಲ್ಲಿ .3.52 ಕೋಟಿ ಹೆಚ್ಚಳವಾಗಿದೆ.

ರಾಜು ಕಾಗೆ ಬಳಿ .1 ಲಕ್ಷ ನಗದಿದೆ. ಆದರೆ, ಪತ್ನಿ ಹಾಗೂ ಮಕ್ಕಳ ಬಳಿ ನಗದು ಹಣ ಇಲ್ಲ. ತಮ್ಮ ಹೆಸರಿನಲ್ಲಿ .4.94 ಕೋಟಿ, ಪತ್ನಿ ಹೆಸರಿನಲ್ಲಿ .30 ಲಕ್ಷ, ಪುತ್ರನ ಹೆಸರಿನಲ್ಲಿ .50 ಲಕ್ಷ ಹಾಗೂ ಮತ್ತೊಬ್ಬ ಪುತ್ರನ ಹೆಸರಿನಲ್ಲಿ .1.05 ಕೋಟಿ ಮೌಲ್ಯದ ಸ್ಥಿರಾಸ್ತಿ ಇರುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ತಮ್ಮ ಹೆಸರಿನಲ್ಲಿ .1.35 ಕೋಟಿ, ಪತ್ನಿ ಹೆಸರಿನಲ್ಲಿ .19.29, ಪುತ್ರನ ಹೆಸರಿನಲ್ಲಿ .1.71 ಲಕ್ಷ ಹಾಗೂ ಮತ್ತೊಬ್ಬ ಪುತ್ರನ ಹೆಸರಿನಲ್ಲಿ .1.98 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ನಾರಾಯಣಗೌಡ ಆಸ್ತಿ ₹13 ಕೋಟಿ ಏರಿಕೆ

ಕೆ.ಆರ್.ಪೇಟೆ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕೆ.ಸಿ.ನಾರಾಯಣಗೌಡ ನಾಮಪತ್ರ ಸಲ್ಲಿಸಿದ್ದು, ಇವರು ₹23.83 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ. 2018 ರ ಚುನಾವಣೆಯಲ್ಲಿ ಇವರು ₹9.15 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ಹೀಗಾಗಿ ಇವರ ಆಸ್ತಿ ₹13 ಕೋಟಿ ಹೆಚ್ಚಳವಾಗಿದೆ. ನಾರಾಯಣಗೌಡರ ಹೆಸರಿನಲ್ಲಿ ₹4 ಕೋಟಿ ಮೌಲ್ಯದ ಚರಾಸ್ತಿ, ₹10 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.

ವಿವಿಧೆಡೆ ₹2 ಕೋಟಿ ಹೂಡಿಕೆ ಮಾಡಿದ್ದಾರೆ. ₹1 ಕೋಟಿ ಮೌಲ್ಯದ 6 ಕಾರುಗಳಿವೆ. ₹21 ಲಕ್ಷ ಮೌಲ್ಯದ 650 ಗ್ರಾಂ ಚಿನ್ನಾಭರಣ, ಕೈಯಲ್ಲಿ 8 ಲಕ್ಷ ನಗದು ಇದೆ. ₹22 ಲಕ್ಷ ಸಾಲ ಇದೆ. ಪತ್ನಿ ದೇವಕಿ ಹೆಸರಿನಲ್ಲಿ ₹2 ಕೋಟಿ ಮೌಲ್ಯದ ಸ್ಥಿರಾಸ್ತಿ, ₹4 ಕೋಟಿ ಮೌಲ್ಯದ ಚರಾಸ್ತಿ ಇದೆ. ₹27 ಲಕ್ಷ ಮೌಲ್ಯದ 641 ಗ್ರಾಂ ಚಿನ್ನಾಭರಣ, 10 ಕೇಜಿ ಬೆಳ್ಳಿ ಇದೆ. ₹35 ಲಕ್ಷ ಸಾಲ ಇದೆ. ಹಿರಿಯ ಪುತ್ರಿ ಲೀನಾ ಹೆಸರಿನಲ್ಲಿ ₹5 ಲಕ್ಷ ಮೌಲ್ಯದ 167 ಗ್ರಾಂ ಚಿನ್ನಾಭರಣ, ಕಿರಿಯ ಪುತ್ರಿ ನೇಹಾ ಹೆಸರಿನಲ್ಲಿ 213 ಗ್ರಾಂ ಚಿನ್ನಾಭರಣಗಳಿವೆ.

ಬಿ.ಸಿ.ಪಾಟೀಲ್ ಆಸ್ತಿ ₹8.58 ಕೋಟಿ

ಹಿರೇಕೆರೂರು ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಸೋಮವಾರ ನಾಮಪತ್ರ ಸಲ್ಲಿಸಿದ್ದು, ₹8.58 ಕೋಟಿ ಆಸ್ತಿ ಘೋಷಣೆ ಮಾಡಿಕೊಂ ಡಿದ್ದಾರೆ. 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದಾಗ ಬಿ.ಸಿ. ಪಾಟೀಲ್ ₹5.98 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. 

ಹೀಗಾಗಿ ಇವರ ಆಸ್ತಿ ಕಳೆದ ಒಂದೂವರೆ ವರ್ಷದಲ್ಲಿ ₹ 2.6 ಕೋಟಿ ಹೆಚ್ಚಳವಾಗಿದೆ. ಸೋಮವಾರ ನಾಮಪತ್ರದೊಂದಿಗೆ ಸಲ್ಲಿಸಿರುವ ಶಪಥಪತ್ರದಲ್ಲಿ ತಮ್ಮ ಕುಟುಂಬದ ಆಸ್ತಿ ವಿವರದಲ್ಲಿ ₹2.04 ಕೋಟಿ ಮೌಲ್ಯದ ಚರಾಸ್ತಿ ಹಾಗೂ ₹4.55 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಪತ್ನಿ ವನಜಾ ₹78.46 ಲಕ್ಷ ಮೌಲ್ಯದ ಚರಾಸ್ತಿ ಹಾಗೂ ₹1.20 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಬಿ.ಸಿ.ಪಾಟೀಲ್ ಅವರಲ್ಲಿ ₹60 ಲಕ್ಷ ಮೌಲ್ಯದ ಮರ್ಸಿಡಿಸ್ ಬೆಂಜ್ ಕಾರಿದ್ದರೆ, ಪತ್ನಿ ಬಳಿ ₹40 ಲಕ್ಷ ಮೌಲ್ಯದ ಬೆಂಜ್ ಕಾರಿದೆ. ಬಿ.ಸಿ.ಪಾಟೀಲ್ ಅವರಲ್ಲಿ ₹9 ಲಕ್ಷ ಮೌಲ್ಯದ 300 ಗ್ರಾಂ ಚಿನ್ನ, ಪತ್ನಿ ಬಳಿ ₹13.50 ಲಕ್ಷ ಮೌಲ್ಯದ ಚಿನ್ನ ಹಾಗೂ ₹45 ಸಾವಿರ ಮೌಲ್ಯದ ₹1 ಕೇಜಿ ಬೆಳ್ಳಿಯಿದೆ. ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ವ್ಯಾಯಾಮ ಸಂಸ್ಥೆಗೆ ₹35 ಲಕ್ಷ ಹೂಡಿಕೆ ಮಾಡಿದ್ದಾರೆ. 

ಹೆಬ್ಬಾರ್ ₹7.85 ಕೋಟಿ ಒಡೆಯ

ಯಲ್ಲಾಪುರ ವಿಧಾನಸಭಾ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿರುವ ಶಿವರಾಮ್ ಹೆಬ್ಬಾರ್ ₹7.58 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿ ಕೊಂಡಿದ್ದಾರೆ. 2018 ರ ಚುನಾವಣೆಯಲ್ಲಿ
ಘೋಷಿಸಿರುವುದ ಕ್ಕಿಂತ ಆಸ್ತಿ ₹1.14 ಕೋಟಿ ಹೆಚ್ಚಾಗಿದ್ದು, ಸಾಲ 2.64 ಕೋಟಿಗಳಷ್ಟು ಕಡಿಮೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ₹6.71 ಕೋಟಿ ಆಸ್ತಿ ಘೋಷಿಸಿದ್ದರು. ಪ್ರಸಕ್ತ ಚರಾಸ್ತಿ ₹3.80 ಕೋಟಿ, ಸ್ಥಿರಾಸ್ತಿ ₹4.04 ಕೋಟಿ ಇರುವುದಾಗಿ ಹೇಳಿದ್ದಾರೆ. 

ಕಬ್ಬಿಣಕಂತಿ ಸ್ವಾಮೀಜಿ ಆಸ್ತಿ 2.13 ಕೋಟಿ 

ಹಿರೇಕೆರೂರು ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿರುವ ರಟ್ಟೀಹಳ್ಳಿಯ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ₹2.13 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ₹23,02,196 ಚರಾಸ್ತಿ ಹೊಂದಿದ್ದು, ₹1.90 ಕೋಟಿ ಸ್ಥಿರಾಸ್ತಿ ಸೇರಿದಂತೆ ₹2.13 ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ. 56 ವರ್ಷದ ಸ್ವಾಮೀಜಿ ತತ್ವಶಾಸ್ತ್ರದಲ್ಲಿ ಎಂಎ ಮಾಡಿದ್ದಾರೆ. ₹20 ಲಕ್ಷ ಕೃಷಿ ಸಾಲ ಇರುವುದಾಗಿಯೂ ತಿಳಿಸಿದ್ದಾರೆ.

ನವೆಂಬರ್ 19ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

 

Follow Us:
Download App:
  • android
  • ios