ಟೆಲಿಕಾಂ ಕಂಪೆನಿಗಳ ಮಹತ್ವದ ಘೋಷಣೆ: ಡಿಸೆಂಬರ್‌ನಿಂದ ಮೊಬೈಲ್‌ ಭಾರೀ ದುಬಾರಿ!

ಟೆಲಿಕಾಂ ಕಂಪೆನಿಗಳ ಮಹತ್ವದ ಘೋಷಣೆ: ಡಿಸೆಂಬರ್‌ನಿಂದ ಮೊಬೈಲ್‌ ಭಾರೀ ದುಬಾರಿ!| ಕರೆ ದರ ಏರಿಸುವುದಾಗಿ ವೊಡಾಫೋನ್‌, ಏರ್‌ಟೆಲ್‌ ಘೋಷಣೆ| ಹಣಕಾಸು ಮುಗ್ಗಟ್ಟಿನಿಂದ ಪಾರಾಗಲು ದರ ಏರಿಕೆಗೆ ತೀರ್ಮಾನ

Vodafone Idea Airtel To Hike Tariffs From December Amid Sector Stress

ನವದೆಹಲಿ[ನ.19]: ರಿಲಯನ್ಸ್‌ ಜಿಯೋ ಮಾರುಕಟ್ಟೆಪ್ರವೇಶದ ಬಳಿಕ ದರ ಸಮರದ ಹೊಡೆತಕ್ಕೆ ಸಿಕ್ಕು ಮೊಬೈಲ್‌ ಕರೆ ದರ ಸೇರಿದಂತೆ ವಿವಿಧ ರೀತಿಯ ಸೇವೆಗಳ ದರ ಇಳಿಸಿದ್ದ ವಿವಿಧ ಟೆಲಿಕಾಂ ಕಂಪನಿಗಳು ಮತ್ತೆ ದರ ಏರಿಕೆಯ ಘೋಷಣೆ ಮಾಡಿವೆ. ಡಿಸೆಂಬರ್‌ನಿಂದಲೇ ಎಲ್ಲಾ ರೀತಿಯ ಮೊಬೈಲ್‌ ಸೇವೆಗಳ ಶುಲ್ಕವನ್ನು ಹೆಚ್ಚಿಸುವುದಾಗಿ ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್‌- ಐಡಿಯಾ ಕಂಪನಿಗಳು ಸೋಮವಾರ ಪ್ರಕಟಿಸಿವೆ. ಟೆಲಿಕಾಂ ಕಂಪನಿಗಳು ಕರೆ ಮತ್ತು ಡಾಟಾ ಶುಲ್ಕ ಏರಿಸುತ್ತಿರುವುದು ಸುಮಾರು 3 ವರ್ಷಗಳ ಬಳಿಕ.

ಟೆಲಿಕಾಂ ಕಂಪನಿಗಳೇಕೆ ನಷ್ಟದಲ್ಲಿ ಮುಳುಗಿವೆ? ಜಿಯೋ ಕಾರಣವೋ?

ಹೀಗಾಗಿ ಹಲವು ವರ್ಷಗಳ ಬಳಿಕ ಮತ್ತೆ ಗ್ರಾಹಕರಿಗೆ ಮೊಬೈಲ್‌ ದರ ಏರಿಕೆಯ ಬಿಸಿ ತಟ್ಟುವುದು ಖಚಿತವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಏರ್‌ಟೆಲ್‌, ವೊಡಾಫೋನ್‌ ಹೊರತುಪಡಿಸಿದರೆ ಉಳಿದಿರುವ ಪ್ರಮುಖ ಕಂಪನಿಗಳೆಂದರೆ ರಿಲಯನ್ಸ್‌ ಜಿಯೋ ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌. ಈ ಪೈಕಿ ಜಿಯೋ ಕೆಲ ದಿನಗಳ ಹಿಂದಷ್ಟೇ ತನ್ನ ನೆಟ್‌ವರ್ಕ್ನಿಂದ ಬೇರೆ ನೆಟ್‌ವರ್ಕ್ಗಳಿಗೆ ಮಾಡುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆಯಂತೆ ದರ ವಿಧಿಸುವ ಯೋಜನೆ ಜಾರಿಗೆ ತಂದಿದೆ. ಹೀಗಾಗಿ ಅದು ಮತ್ತೊಂದು ಸುತ್ತಿನಲ್ಲಿ ತಕ್ಷಣಕ್ಕೆ ಶುಲ್ಕ ಹೆಚ್ಚಳ ಮಾಡುವ ಸಾಧ್ಯತೆ ಕಡಿಮೆ. ಇನ್ನು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದಿಂದ ಪುನರುಜ್ಜೀವನ ಪ್ಯಾಕೇಜ್‌ ಪಡೆದುಕೊಂಡಿರುವ ಬಿಎಸ್‌ಎನ್‌ಎಲ್‌ ಕೂಡಾ ದರ ಏರಿಕೆ ಹಾದಿ ತುಳಿದರೆ ಅಚ್ಚರಿ ಇಲ್ಲ ಎನ್ನಲಾಗಿದೆ.

ದರ ಏರಿಕೆ: ರಿಲಯನ್ಸ್‌ ಜಿಯೋದ ದರ ಸಮರಕ್ಕೆ ಸಿಕ್ಕಿಬಿದ್ದು ಭಾರೀ ನಷ್ಟಅನುಭವಿಸಿದ್ದ ವೊಡಾಫೋನ್‌- ಐಡಿಯಾ ಮತ್ತು ಏರ್‌ಟೆಲ್‌ ಕಂಪನಿಗಳು ಡಿಸೆಂಬರ್‌ ತಿಂಗಳಿನಿಂದ ಕರೆ ಮತ್ತು ಡಾಟಾ ದರ ಹೆಚ್ಚಿಸುವುದಾಗಿ ಪ್ರಕಟಿಸಿವೆ. ಈ ಬಗ್ಗೆ ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವೊಡಾಫೋನ್‌-ಐಡಿಯಾ ದೂರ ಸಂಪರ್ಕ ಸಂಸ್ಥೆ, ಗ್ರಾಹಕರಿಗೆ ವಿಶ್ವದರ್ಜೆಯ ಡಿಜಿಟಲ್‌ ಸೇವೆಯನ್ನು ನಿರಂತರವಾಗಿ ಮುಂದುವರಿಸುವ ನಿಟ್ಟಿನಲ್ಲಿ, ಡಿಸೆಂಬರ್‌ 1ರಿಂದ ಜಾರಿಗೆ ಬರುವಂತೆ ಸೇವೆಯ ದರಗಳನ್ನು ಏರಿಕೆ ಮಾಡಲಾಗುತ್ತದೆ ಎಂದು ಹೇಳಿದೆ. ಆದಾಗ್ಯೂ, ಯಾವ ಸೇವೆಗೆ ಎಷ್ಟುಪ್ರಮಾಣದ ದರ ಏರಿಕೆ ಮಾಡಲಾಗುತ್ತದೆ ಎಂಬುದರ ಬಗ್ಗೆ ವೊಡಾಫೋನ್‌ ಬಹಿರಂಗಪಡಿಸಿಲ್ಲ.

ವೊಡಾಫೋನ್, ಏರ್‌ಟೆಲ್ ಸಂಕಷ್ಟದಲ್ಲಿ: ನರಳುತ್ತಿವೆ ಭಾರೀ ನಷ್ಟದಲ್ಲಿ!

ಮತ್ತೊಂದೆಡೆ ಏರ್‌ಟೆಲ್‌ ಕೂಡಾ ಉದ್ಯಮವನ್ನು ಕಾರ್ಯಸಾಧು ಮಾಡುವ ನಿಟ್ಟಿನಲ್ಲಿ ದರ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಟೆಲಿಕಾಂ ವಲಯವು ಬಂಡವಾಳ ಹೂಡಿಕೆ ಆಧರಿತ ಮತ್ತು ನಿರಂತರ ಬದಲಾಗುವ ತಂತ್ರಜ್ಞಾನ ಆಧರಿತ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ನಿರಂತರ ಪ್ರಕ್ರಿಯೆ. ಹೀಗಾಗಿ ಉದ್ಯಮದಲ್ಲಿ ಮುಂದುವರೆಯಲು ಅದು ಆರ್ಥಿಕವಾಗಿ ಕಾರ್ಯಸಾಧುವಾಗಿರಬೇಕು. ಈ ನಿಟ್ಟಿನಲ್ಲಿ ಭವಿಷ್ಯದ ದಿನಗಳು ಮತ್ತು ಸೇವೆಯನ್ನು ಗಮನದಲ್ಲಿಟ್ಟುಕೊಂಡು ದರ ಏರಿಕೆ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದೆ.

ಭಾರೀ ಸಂಕಷ್ಟ: ಸುಪ್ರೀಕೋರ್ಟ್‌ ಇತ್ತೀಚೆಗೆ ಟೆಲಿಕಾಂ ಕಂಪನಿಗಳಿಗೆ ಎಜಿಆರ್‌ (ಅಡ್‌ಜಸ್ಟೆಡ್‌ ಗ್ರಾಸ್‌ ರೆವಿನ್ಯೂ) ಶುಲ್ಕ, ದಂಡ ಮತ್ತು ಬಡ್ಡಿ ರೂಪದಲ್ಲಿ ಸುಮಾರು 1.4 ಲಕ್ಷ ಕೋಟಿ ರು. ಪಾವತಿಸಬೇಕೆಂದು ಸೂಚಿಸಿತ್ತು. ಪರಿಣಾಮ ಏರ್‌ಟೆಲ್‌ 42000 ಕೋಟಿ ರು. ಮತ್ತು ವೊಡಾಫೋನ್‌- ಐಡಿಯಾ ಕಂಪನಿಗಳು 40000 ಕೋಟಿ ರು. ಪಾವತಿಸುವ ಅನಿವಾರ್ಯತೆ ಸಿಲುಕಿದ್ದವು. ಈ ಹಣ ಪಾವತಿಸಲು ಇತ್ತೀಚೆಗಷ್ಟೇ ಪ್ರಕಟಗೊಂಡ ತ್ರೈಮಾಸಿಕದಲ್ಲಿ ಉಭಯ ಕಂಪನಿಗಳು ತಮ್ಮ ಆದಾಯದಲ್ಲಿ ಹಣ ತೆಗೆದಿರಿಸಿದ್ದವು. ಪರಿಣಾಮ ಸೆ.30ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ವೊಡಾಫೋನ್‌ - ಐಡಿಯಾ ಕಂಪನಿ 50921 ಕೋಟಿ ರು. ನಷ್ಟದ ಲೆಕ್ಕ ತೋರಿಸಿತ್ತು. ಮತ್ತೊಂದೆಡೆ ಏರ್‌ಟೆಲ್‌ ಕೂಡಾ 23000 ಕೋಟಿ ರು. ನಷ್ಟದ ಲೆಕ್ಕ ತೋರಿಸಿತ್ತು.

ನವೆಂಬರ್ 19ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Latest Videos
Follow Us:
Download App:
  • android
  • ios