ಬೆಂಗಳೂರು[ನ.19]: ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಿರುವುದರಿಂದ ಸಾಫ್ಟ್ ವೇರ್ ಕಂಪೆನಿಯ ಸುಮಾರು 40 ಸಾವಿರ ಮಧ್ಯಮ ಮಟ್ಟದ ಟೆಕ್ಕಿಗಳು ಉದ್ಯೋಗ ಕಳೆದುಕೊಳ್ಳಲಿದ್ದಾರೆಂದು ಇನ್ಫೀಸಿಸ್ ಮಾಜಿ ನಿರ್ದೇಶಕ ಟಿ. ವಿ ಮೋಹನ್ ದಾಸ್ ಪೈ ಭವಿಷ್ಯ ನುಡಿದಿದ್ದಾರೆ.

ಸೋಮವಾರದಂದು ಈ ಕುರಿತಾಗಿ ಮಾತನಾಡಿದ ಉದ್ಯಮಿ 'ಐಟಿ ವಲಯ ಮತ್ತಷ್ಟು ಪಕ್ವತೆ ಸಾಧಿಸುವಾಗ ಇಂತಹ ಬದಲಾವಣೆಯಾಗುತ್ತದೆ. ಇಲ್ಲಿ 5 ವರ್ಷಕ್ಕೊಮ್ಮೆ ಉದ್ಯೋಗ ಕಳೆದುಕೊಳ್ಳುವುದು ಸಹಜ. ಕ್ಷೇತ್ರವೊಂದು ಪಕ್ವಗೊಳ್ಳುವಾಗ ಹಲವಾರು ಮಂದಿ ಮಧ್ಯಮ ಮಟ್ಟದ ಉದ್ಯೋಗಿಗಳಾಗಿರುತ್ತಾರೆ. ಇವರು ತಾವು ಪಡೆಯುವ ವೇತನಕ್ಕೆ ತಕ್ಕಂತೆ ಕೆಲಸ ಮಾಡುವುದಿಲ್ಲ' ಎಂದಿದ್ದಾರೆ.

2ಲಕ್ಷ ಭಾರತೀಯ ಟೆಕ್ಕಿಗಳಿಗೆ ಜಪಾನ್‌ ಭರ್ಜರಿ ಆಹ್ವಾನ!

ಅಲ್ಲದೇ 'ಕಂಪನಿಗಳು ವೇಗವಾಗಿ ಬೆಳೆಯುತ್ತಿರುವಾಗ ಪ್ರಚಾರಗಳು ಭರ್ಜರಿಯಾಗೇ ನಡೆಯುತ್ತವೆ. ಆದರೆ ಆರ್ಥಿಕವಾಗಿ ಕುಸಿಯಲಾರಂಭಿಸಿದಾಗ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಾರೆ. ಇನ್ನೊಂದು ವರ್ಷದೊಳಗೆ ಐಟಿ ಕ್ಷೇತ್ರದಲ್ಲಿ ಮದ್ಯಮ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಸುಮಾರು 40 ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಆದರೂ ಇವರಲ್ಲಿ ಶೇ. 80 ಮಂದಿಗೆ ಬೇರೆಡೆ ಉದ್ಯೋಗ ಸಿಗುತ್ತದೆ' ಎಂದಿದ್ದಾರೆ.

ನವೆಂಬರ್ 19ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: