Asianet Suvarna News

ನೀವೂ ಸಿಗರೇಟ್ ಸೇದ್ತೀರಾ? ಈ ವಿಡಿಯೋ ಒಮ್ಮೆ ನೋಡ್ಬಿಡಿ!

ಶ್ವಾಸಕೋಶ ದಾನ ಮಾಡಿದ ಧೂಮಪಾನ ವ್ಯಸನಿ| ಕಪ್ಪಾದ ಶ್ವಾಸಕೋಶ ಬೇರೆಯವರಿಗೆ ಕಸಿ ಮಾಡಿದ್ರೆ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ

Transplant doctor rejects damaged donated lungs from chain smoker
Author
Bangalore, First Published Nov 19, 2019, 4:05 PM IST
  • Facebook
  • Twitter
  • Whatsapp

ಹಾಂಕಾಂಗ್[ನ.19]: ಧೂಮಪಾನ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಹೀಗಿದ್ದರೂ ಸ್ಮೋಕಿಂಗ್ ಮಾಡುವವರ ಸಂಖ್ಯೆ ಮಾತ್ರ ಇಳಿದಿಲ್ಲ. ಸದ್ಯ ಧೂಮಪಾನ ವ್ಯಸನಿಯೊಬ್ಬ ದಾನಗೈದ ಶ್ವಾಸಕೋಶದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. 

ಶ್ವಾಸಕೋಶದಿಂದ ನಿಕೋಟಿನ್ ಹೊರಹಾಕಲು ಮನೆಯಲ್ಲಿಯೇ ಇದೆ ಮದ್ದು

ಈ ವಿಡಿಯೋ 30 ವರ್ಷಗಳಿಂದ ಧೂಮಪಾನ ಮಾಡುತ್ತಿದ್ದ 52 ವರ್ಷದ ವ್ಯಕ್ತಿಯದ್ದಾಗಿದೆ. ವಿಡಿಯೋದಲ್ಲಿ ತೋರಿಸಲಾದ ಶ್ವಾಸಕೋಶ ಸಂಪೂರ್ಣವಾಗಿ ಕಪ್ಪಾಗಿವೆ. ಈ ವಿಡಿಯೋ ಚೀನಾದ ಯೂಕ್ಸೀ ಪೀಪಲ್ಸ್ ಹಾಸ್ಪಿಟಲ್ ನಲ್ಲಿ ಚಿತ್ರೀಕರಿಸಿದ್ದಾಗಿದೆ. ಡಾ. ಚೆನ್ ಝಿಯೆಂಗು ಹಾಗೂ ಅವರ ಕಸಿ ತಂಡ ವ್ಯಕ್ತಿಯೊಬ್ಬ ದಾನ ಮಾಡಿದ ಶ್ವಾಸಕೋಶದ ತಪಾಸಣೆ ನಡೆಸುತ್ತಿದ್ದಾರೆ. 

ಈ ಲಂಗ್ಸ್ ಕುರಿತು ಪ್ರತಿಕ್ರಿಯಿಸಿದ ವೈದ್ಯರು 'ಶ್ವಾಸಕೋಶ ದಾನ ಮಾಡಿದ ವ್ಯಕ್ತಿಯ ಮೆದುಳು ನಿಷ್ಕ್ರಿಯಗೊಂಡಿತ್ತು. ಆದರೆ ಶ್ವಾಸಕೋಶ ಅದೆಷ್ಟರ ಮಟ್ಟಿಗೆ ಹಾಳಾಗಿದೆ ಎಂದರೆ ಇದನ್ನು ಬೇರಾವುದೇ ವ್ಯಕ್ತಿಗೆ ಅಳವಡಿಸಲು ಸಾಧ್ಯವಿಲ್ಲ. ಒಂದು ವೇಳೆ ಇದನ್ನು ಬೇರೆ ವ್ಯಕ್ತಿಗೆ ಕಸಿ ಮಾಡಿದರೂ ಅವರು ಶ್ವಾಸಕೋಶದ ಸಮಸ್ಯೆಗೆ ತುತ್ತಾಗುತ್ತಾರೆ' ಎಂದಿದ್ದಾರೆ.

ನವೆಂಬರ್ 19ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us:
Download App:
  • android
  • ios