Asianet Suvarna News

ಅರೇ, ಮಲೈಕಾಗೇನಾಯ್ತು!? ಶರ್ಟ್ ಹಾಕಿ ಪ್ಯಾಂಟ್ ಹಾಕೋದನ್ನ ಮರೆತ್ಬಿಟ್ರಾ?

ತಂಗಿಯ ಮನೆಗೆ ಡಿನ್ನರ್‌ಗೆ ಹೋಗುವಾಗ ಬರೀ ಶರ್ಟ್ ಹಾಕಿ ಪ್ಯಾಂಟ್ ಹಾಕೋದನ್ನೇ ಮರೆತು ಬಿಟ್ಟಿದ್ದಾರೆ ದಿಲ್ ಸೆ ಹುಡುಗಿ ಮಲೈಕಾ ಅರೋರಾ. ಈ ಲುಕ್ ಟ್ರೋಲಿಗರಿಗೆ ಆಹಾರವಾಗಿದೆ. 

Malaika Arora came out wearing only shirt photo goes Viral
Author
Bengaluru, First Published Nov 19, 2019, 3:03 PM IST
  • Facebook
  • Twitter
  • Whatsapp

ಮಲೈಕಾ ಅರೋರಾ ಬಾಲಿವುಡ್ ಸೆನ್ಸೇಷನ್ ಅಂದ್ರೆ ತಪ್ಪಾಗಲಿಕ್ಕಿಲ್ಲ. ತನಗಿಂತ ಕಿರಿಯ ಅರ್ಜುನ್ ಕಪೂರ್ ಜೊತೆಗೆ ಡೇಟಿಂಗ್, ಹಾಕುವ ಡ್ರೆಸ್, ಡ್ಯಾನ್ಸ್ ಮೂಲಕ ಆಗಾಗ ಸದ್ದು ಮಾಡುತ್ತಿದ್ದಾರೆ.  ಈಕೆ ಏನ್ ಮಾಡಿದ್ರೂ ಸುದ್ದಿಯಾಗುತ್ತೆ ನೋಡಿ. ಅಂದರೆ ಅಭಿಮಾನಿಗಳು ಅಷ್ಟೊಂದು ಗಮನಿಸ್ತಾರೆ ಅಂತಾಯ್ತು! 

ಮಲೈಕಾ ಹೊಸ ಅವತಾರ ಟ್ರೋಲಿಗರಿಗೆ ಆಹಾರವಾಗಿದೆ. ಮಲೈಕಾ ಸಹೋದರಿ ಅಮೃತಾ ಅರೋರಾ ಮನೆಗೆ ಡಿನ್ನರ್‌ಗೆ ಬಿಳಿ ಬಣ್ಣದ ಶರ್ಟ್ ಹಾಕಿಕೊಂಡು ಹೋಗಿದ್ದಾರೆ. ಅರೇ! ಇದರಲ್ಲೇನಿದೆ ಅಂತೀರಾ? ಆಕೆ ಬರೀ ಶರ್ಟ್ ಮಾತ್ರ ಹಾಕಿದ್ದಾರೆ. ಪ್ಯಾಂಟ್ ಹಾಕುವುದನ್ನು ಮರೆತು ಹೋಗಿದ್ದಾರೆ ಎಂದು ಟ್ರೋಲ್ ಮಾಡ್ತಾ ಇದ್ದಾರೆ. 

ಮಲೈಕಾಗೆ ಇವೆಲ್ಲಾ ಹೊಸದಲ್ಲ. ಆಗಾಗ ಬೋಲ್ಡ್ ಫೋಟೋಗಳನ್ನು ಹಾಕುತ್ತಿರುತ್ತಾರೆ. ಟೀಕೆಗಳಿಗೆಲ್ಲಾ ಡೋಂಟ್ ಕೇರ್ ಎನ್ನುವ ಸ್ವಭಾವ. ಇತ್ತೀಚಿಗೆ ಕೆಂಪು ಬಣ್ಣದ ಡ್ರೆಸ್‌ನಲ್ಲಿ ತಂಗಿ ಅಮೃತಾ ಅರೋರಾ ಜೊತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. 

 

 
 
 
 
 
 
 
 
 
 
 
 
 

Holy guacamole ..... #sistaact ♥️ #fitnfabaward @amuaroraofficial#bestfootforward

A post shared by Malaika Arora (@malaikaaroraofficial) on Nov 14, 2019 at 2:50am PST

ನವೆಂಬರ್ 19ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

 

Follow Us:
Download App:
  • android
  • ios