ಭಾರತಕ್ಕೆ ಸಿಎಎ ಅಗತ್ಯವೇ ಇರಲಿಲ್ಲ: ಬಾಂಗ್ಲಾ ಪ್ರಧಾನಿ

ಭಾರತಕ್ಕೆ ಸಿಎಎ ಅಗತ್ಯವೇ ಇರಲಿಲ್ಲ: ಬಾಂಗ್ಲಾ ಪ್ರಧಾನಿ| ಭಾರತ ತೊರೆದು ಯಾರೂ ಬಾಂಗ್ಲಾಗೆ ಬರುತ್ತಿಲ್ಲ

CAA was not necessary but it is India internal affair Bangladesh PM Sheikh Hasina

ದುಬೈ[ಜ.20]: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ಭಾರತದ ಆಂತರಿಕ ವಿಚಾರ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಹೇಳಿಕೆ ನೀಡಿದ್ದಾರೆ. ಗಲ್‌್ಫ ನ್ಯೂಸ್‌ಗೆ ಸಂದರ್ಶನವೊಂದನ್ನು ನೀಡಿರುವ ಶೇಖ್‌ ಹಸೀನಾ,‘ಭಾರತ ಸರ್ಕಾರ ಏಕೆ ಪೌರತ್ವ ಕಾಯ್ದೆ ಜಾರಿಗೊಳಿಸಿದೆ ಎಂಬುದು ಗೊತ್ತಿಲ್ಲ. ಅದರ ಅಗತ್ಯವೇ ಇರಲಿಲ್ಲ’ ಎಂದು ಹೇಳಿದ್ದಾರೆ.

ಪುಣೆ ಆಯ್ತು, ಈಗ ರಾಜ್ಯದ ಈರುಳ್ಳಿಯೂ ಕೆಜಿಗೆ 100 ರೂ

ಇದೇ ವೇಳೆ ಸಿಎಎ ಜಾರಿ ಬಳಿಕ ಧಾರ್ಮಿಕ ಕಿರುಕುಳದ ಕಾರಣದಿಂದ ವಲಸಿಗರು ಭಾರತ ತೊರೆದು ಬಾಂಗ್ಲಾ ದೇಶಕ್ಕೆ ಮರಳಿ ಬರುತ್ತಿಲ್ಲ. ಆದರೆ, ಭಾರತದಲ್ಲಿರುವ ಜನರು ಇದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಆದರೆ, ದೇಶದಲ್ಲಿ ಯಾವುದೇ ಅಸ್ಥಿರತೆ ಉಂಟಾದರೆ ಅದು ನೆರೆ ಹೊರೆಯ ದೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಆದರೆ, ಈಗಲೂ ಅದು ಭಾರತದ ಆಂತರಿಕ ವಿಷಯ. 2019ರಲ್ಲಿ ದೆಹಲಿಗೆ ಭೇಟಿ ನೀಡಿದ ವೇಳೆ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದಾಗಿ ತಮಗೆ ಇದೇ ಭರವಸೆ ನೀಡಿದ್ದಾರೆ ಎಂದು ಶೇಖ್‌ ಹಸೀನಾ ಹೇಳಿದ್ದಾರೆ.

ಭಾರತ vs ಬಾಂಗ್ಲಾದೇಶ ಡೇ & ಟೆಸ್ಟ್ ಪಂದ್ಯಕ್ಕೆ ಮೋದಿ, ಸಚಿನ್?

ಜನವರಿ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios