ನವದೆಹಲಿ[ಜ.20]: 370ನೇ ವಿಧಿ ರದ್ದಾದ ಬಳಿಕ ಕಾಶ್ಮೀರದಲ್ಲಿ ಇಂಟರ್ನೆಟ್‌ ಸೇವೆ ಬಂದ್‌ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸುವ ಭರದಲ್ಲಿ, ಕಾಶ್ಮೀರಿಗಳು ಅಶ್ಲೀಲ ಚಿತ್ರಗಳನ್ನು ನೋಡಲು ಮಾತ್ರ ಇಂಟರ್ನೆಟ್‌ ಬಳಸುತ್ತಾರೆ ಎಂದು ಹೇಳಿ ನೀತಿ ಆಯೋಗದ ಸದಸ್ಯ ಹಾಗೂ ವಿಜ್ಞಾನಿ ವಿ.ಕೆ ಸಾರಸ್ವತ್‌ ಎಡವಟ್ಟು ಮಾಡಿಕೊಂಡಿದ್ದಾರೆ.

ಕಣಿವೆಯಲ್ಲಿ ಪ್ರೀಪೇಯ್ಡ್ ಮೊಬೈಲ್, ಎಸ್ಎಂಎಸ್ ಸೇವೆ ಮತ್ತೆ ಆರಂಭ!

ಈ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಅವರು ಕ್ಷಮೆ ಯಾಚಿಸಿದ್ದಾರೆ. ಗುಜರಾತ್‌ನ ಗಾಂಧಿನಗರದಲ್ಲಿ ಮಾತನಾಡಿದ ಅವರು, ಯಾಕೆ ರಾಜಕಾರಣಿಗಳು ಕಾಶ್ಮೀರಕ್ಕೆ ಹೋಗಬೇಕು? ಕಾಶ್ಮೀರದಲ್ಲಿ ಇಂಟರ್ನೆಟ್‌ ಬಂದ್‌ ಆಗಿದ್ದರಿಂದ ಆಗಿದ್ದೇನು? ಅಶ್ಲೀಲ ಚಿತ್ರ ವೀಕ್ಷಿಸುವುದು ಬಿಟ್ಟರೆ ಅವರು ಇಂಟರ್ನೆಟ್‌ನಲ್ಲಿ ಮಾಡೋದೇನು? ಎಂದು ಪ್ರಶ್ನಿಸಿದ್ದಾರೆ.

ಸದ್ಯ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಕಾಶ್ಮೀರ ಉಳಿಸಿ ಎನ್ನುವುದು ತಪ್ಪಲ್ಲ ಎಂದ ವಕೀಲ

ಜನವರಿ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ