Asianet Suvarna News Asianet Suvarna News

ಮತ್ತೆ ಅರಳಿತು ಕಮಲ : ಭರ್ಜರಿ ಗೆಲುವು

ಪಂಚರಾಜ್ಯ ಚುನಾವಣೆಯಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಬಿಜೆಪಿಗೆ ಇದೀಗ ಮತ್ತೊಮ್ಮೆ ಹುರುಪು ತುಂಬಿದೆ ಅಸ್ಸಾಂನಲ್ಲಿ ನಡೆದ ಚುನಾವಣೆ. ಅಸ್ಸಾಂ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. 

BJP Surges In Assam Pachayat Poll
Author
Bengaluru, First Published Dec 15, 2018, 12:15 PM IST

ಗುವಾಹಟಿ : ಇತ್ತೀಚೆಗಷ್ಟೇ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಬಿಜೆಪಿಗೆ ಅಸ್ಸಾಂನಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆ ಮತ್ತೆ ಶಕ್ತಿ ತುಂಬಿದಂತಾಗಿದೆ.  ಬಿಜೆಪಿ ತನ್ನ ಜಯದ ಹಾದಿಯನ್ನು ಮುಂದುವರಿಸಿದ್ದು, ಅಸ್ಸಾಂ ಪಂಚಾಯತ್ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಭಾರಿಸಿದೆ. 

ಇದರಿಂದ ಲೋಕಸಭಾ ಚುನಾವಣೆ ಶೀಘ್ರದಲ್ಲೇ ಇರುವ ಈ ಹೊತ್ತಿನಲ್ಲಿ ಮತ್ತೆ ಭರವಸೆ ಮೂಡಿದಂತಾಗಿದೆ. 

ಡಿಸೆಂಬರ್ 5 ಹಾಗೂ 9 ರಂದು 2 ಹಂತದಲ್ಲಿ ನಡೆದ ಚುನಾವಣೆಯ ಫಲಿತಾಂಶ ಡಿಸೆಂಬರ್ 14ರ ಶುಕ್ರವಾರ ಪ್ರಕಟವಾಗಿದ್ದು, ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮೂಲಕ ವಿಜಯ ಪತಾಕೆಯನ್ನು ಹಾರಿಸಿದೆ. 

ಅಸ್ಸಾಂನ 2199 ಗ್ರಾಮ ಪಂಚಾಯತ್ ಅಧ್ಯಕ್ಷರು, 21,999 ಪಂಚಾಯತ್ ಸದಸ್ಯ ಹುದ್ದೆಗೆ, 2199 ಅಂಚಾಲಿಕ್ ಪಂಚಾಯತ್ ಅಧ್ಯಕ್ಷ ಹುದ್ದೆಗೆ, 420 ಜಿಲ್ಲಾ ಪಂಚಾಯತ್ ಸದಸ್ಯ ಹುದ್ದೆಗೆ ಚುನಾವಣೆ ನಡೆದಿದ್ದು,  ಶೇ.82ರಷ್ಟು ಮತದಾನ ನಡೆದಿತ್ತು.

ಒಟ್ಟು 7769 ಪಂಚಾಯತ್ ಸೀಟುಗಳಲ್ಲಿ ಬಿಜೆಪಿ ಗೆದ್ದಿದ್ದು, ಕಾಂಗ್ರೆಸ್ 5896 ಸೀಟುಗಳನ್ನು   ಪಡೆದಿದೆ. ಇನ್ನು ಎಜಿಪಿ 1372, AIUDF 755 ಇತರೆ 2112 ಗೆಲುವು ಪಡೆದಿವೆ.  ಇನ್ನು ಜಿಲ್ಲಾ ಪಂಚಾಯತ್ ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 223, ಕಾಂಗ್ರೆಸ್ 139, ಎಜಿಪಿ 18 ಸೀಟುಗಳನ್ನು ಗೆದ್ದುಕೊಂಡಿವೆ. 

ಬಿಜೆಪಿ ಹೆಚ್ಚಿನ ಸ್ಥಾನ ಪಡೆದುಕೊಂಡಿದ್ದು, ಇದಕ್ಕೆ ಬಿಜೆಪಿ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲ್ ಜನತೆಗೆ ಧನ್ಯವಾದ ತಿಳಿಸಿದ್ದು, ಇದು ಒಳ್ಳೆಯ ಆಡಳಿತ ಹಾಗೂ ಅಭಿವೃದ್ಧಿಗೆ ಸಿಕ್ಕ ಜಯ ಎಂದು ಹೇಳಿದ್ದಾರೆ. 

ಪಂಚರಾಜ್ಯ ಚುನಾವಣೆ: ರಾಹುಲ್ ಗಾಂಧಿ ಮಾಡಿದ ಗಿಮಿಕ್ಕೇನು? ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆದ್ದಿದ್ದರ ಗುಟ್ಟೇನು?
Follow Us:
Download App:
  • android
  • ios