ಕೋಲ್ಕತ್ತಾ(ಸೆ.15): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಾಂಗ್ಲಾ ದೇಶದ ಪ್ರಧಾನಿಯಾಗಲಿ ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ವ್ಯಂಗ್ಯವಾಡಿದ್ದಾರೆ.  

ಪಶ್ಚಿಮ ಬಂಗಾಳದಲ್ಲಿ NRC ಜಾರಿಗೊಳಿಸುವುದಾಗಿ ಹೇಳಿರುವ ಸುರೇಂದ್ರ ಸಿಂಗ್, ಅಕ್ರಮ ಬಾಂಗ್ಲಾದೇಶಿಯರನ್ನು ರಕ್ಷಿಸಲು ಸಿದ್ಧವಾಗಿರುವ ಮಮತಾ ಬಾಂಗ್ಲಾದೇಶದ ಪ್ರಧಾನಿಯಾದರೆ ಒಳಿತು ಎಂದು ಹರಿಹಾಯ್ದಿದ್ದಾರೆ.

ಮಮತಾ ಬ್ಯಾನರ್ಜಿ ಅಕ್ರಮ ಬಾಂಗ್ಲಾದೇಶದವರ ಬೆಂಬಲದೊಂದಿಗೆ ರಾಜಕಾರಣ ಮಾಡಬೇಕೆಂದಿದ್ದರೆ ಅವರು ಬಾಂಗ್ಲಾದೇಶಕ್ಕೇ ಹೋಗಲಿ ಎಂದಿರುವ ಸುರೇಂದ್ರ, ಅವರು ಬೇಕಾದರೆ ಬಾಂಗ್ಲಾದೇಶದ ಪ್ರಧಾನಿಯಾಗಲಿ ಎಂದು ಕುಹುಕವಾಡಿದ್ದಾರೆ.