ಪ.ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ಟಿಎಂಸಿ ಮೆಗಾ ರ‍್ಯಾಲಿ| ಮೆಗಾ ರ‍್ಯಾಲಿಯಲ್ಲಿ ಪ.ಬಂಗಾಳ ಸಿಎಂ ಮಮತಾ ಸಿಡಿಲಿನ ಭಾಷಣ| 2019ರ ಲೋಕಸಭೆ ಚುನಾವಣೆ ರಹಸ್ಯಮಯ ಎಂದ ಮಮತ ಬ್ಯಾನರ್ಜಿ| ‘ಇವಿಎಂ ಯಂತ್ರದ ಸಹಾಯದಿಂದ ಅಧಿಕ ಸೀಟು ಪಡೆದ ಬಿಜೆಪಿ’| ವಿಧಾನಸಭೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲು ಮಮತ ಸಲಹೆ| 15 ಲಕ್ಷ ರೂ. ಎಲ್ಲಿ ಮೋದಿ ಜೀ ಎಂದು ಕೇಳಿದ ಮಮತಾ|

ಕೋಲ್ಕತ್ತಾ(ಜು.21): 2019ರ ಲೋಕಸಭೆ ಚುನಾವಣೆಯ ಫಲಿತಾಂಶದ ಮೇಲೆ ಅನುಮಾನ ವ್ಯಕ್ತಪಡಿಸಿರುವ ಪ.ಬಂಗಾಳ ಸಿಎಂ , ಟಿಎಂಸಿ ಮುಖ್ಯಸ್ಥೆ ಮಮತ ಬ್ಯಾನರ್ಜಿ, ಫಲಿತಾಂಶವನ್ನು ಐತಿಹಾಸಿಕವಲ್ಲ ಬದಲಿಗೆ ರಹಸ್ಯಮಯ ಎಂದು ಬಣ್ಣಿಸಿದ್ದಾರೆ.

ಕೋಲ್ಕತ್ತಾದಲ್ಲಿ ಟಿಎಂಸಿ ಹಮ್ಮಿಕೊಂಡಿರುವ ಮೆಗಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮಮತಾ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಗಳಿಸಿರುವ ಸೀಟುಗಳು ಅನ್ಯಾಯದಿಂದ ಪಡೆದವು ಎಂದು ಹೇಳಿದ್ದಾರೆ.

Scroll to load tweet…

ಹಣ, ಪೊಲೀಸ್ ವ್ಯವಸ್ಥೆ ದರ್ಬಳಕೆ ಹಾಗೂ ಇವಿಎಂ ಸಹಾಯದಿಂದ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಿದರೆ ಬಿಜೆಪಿ ಅಸಲಿ ಬಂಡವಾಳ ಬಯಲಾಗುತ್ತದೆ ಎಂದು ಮಮತಾ ಕಿಡಿಕಾರಿದ್ದಾರೆ. 

ಟಿಎಂಸಿ ಮೆಗಾ ರ‍್ಯಾಲಿಗೆ ಬಿಜೆಪಿಗರು ಅಡ್ಡಿಪಡಿಸುತ್ತಿದ್ದು, ನಮ್ಮ ಕಾರ್ಯಕರ್ತರು ತಿರುಗಿ ಬಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ಇದೇ ವೇಳೆ ಮಮತಾ ಬ್ಯಾನರ್ಜಿ ಎಚ್ಚರಿಸಿದರು.

ಇದೇ ವೇಳೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಮಮತಾ, ಪ್ರತಿಯೊಬ್ಬರಿಗು 15 ಲಕ್ಷ ರೂ. ನೀಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಮೋದಿ ಮೊದಲು ತಾವು ನೀಡಿದ್ದ ಭರವಸೆ ಈಡೇರಿಸಲಿ ಎಂದು ಹರಿಹಾಯ್ದರು.