ರಾಮಲಲ್ಲಾನಿಗೆ ದೀರ್ಘದಂಡ ನಮಸ್ಕಾರ, ರಾಮ ಮಂದಿರಕ್ಕೆ ಮೋದಿ ಶಿಲಾನ್ಯಾಸ!...

ಭವ್ಯ ರಾಮ ಮಮದಿರಕ್ಕೆ ಶಿಲಾನ್ಯಾಸ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಐದು ಶತಮಾನಗಳ ರಾಮ ಮಂದಿರ ಕನಸನ್ನು ಸಾಕಾರಗೊಳಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮನಾಮ ಜಪ ಮೊಳಗಿಸಿದ ಮೋದಿ, ಶ್ರವಣ ಬೆಳಗೊಳದ ಉಲ್ಲೇಖ!...

ಭವ್ಯ ಶ್ರೀರಾಮ ಮಂದಿರಕ್ಕೆ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಭಾ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಇಲ್ಲಿದೆ ಮೋದಿ ಭಾಷಣದ ಹೈಲೈಟ್ಸ್

370ನೇ ವಿಧಿ ರದ್ದಾಗಿ ಒಂದು ವರ್ಷ: ಜಮ್ಮು- ಕಾಶ್ಮೀರದಾದ್ಯಂತ ಕರ್ಫ್ಯೂ ಜಾರಿ!...

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ಬುಧವಾರಕ್ಕೆ ಒಂದು ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಾದ್ಯಂತ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.

ರಾಮ ಮಂದಿರ ಭೂಮಿ ಪೂಜೆ; ಅಸಮಾಧಾನ ಹೊರಹಾಕಿದ ಆಲ್ ಇಂಡಿಯಾ ಮುಸ್ಲಿಂ ಬೋರ್ಡ್!...

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಆತಂಕ, ದುಗುಡದಲ್ಲಿ ಇಡೀ ದೇಶ ಇದೀಗ ಸಂಭ್ರಮಿಸುತ್ತಿದೆ. ಶತಮಾನಗಳ ವಿವಾದ ಬಗೆಹರಿದು ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ನಡೆದಿದೆ. ಆದರೆ ಆಲ್ ಇಂಡಿಯಾ ಮುಸ್ಲಿಂ ಲಾ ಬೋರ್ಡ್ ಭೂಮಿ ಪೂಜೆಗೆ ಅಸಮಧಾನ ಹೊರಹಾಕಿದೆ. ಇಷ್ಟೇ ಅಲ್ಲ ಕಾಲ ಚಕ್ರ ತಿರುಗಲಿದೆ ಎಂಬ ಎಚ್ಚರಿಕೆ ಸಂದೇಶವನ್ನು ಸಾರಿಸಿದೆ.

ಐಪಿಎಲ್‌ ವೇಳೆ ಆಟ​ಗಾ​ರ​ರಿಗೆ 5 ದಿನ​ಕ್ಕೊಮ್ಮೆ ಕೋವಿಡ್‌ ಪರೀಕ್ಷೆ...


ಯುಎಇನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿ 5 ದಿನಗಳಿಗೊಮ್ಮೆ ಕೋವಿಡ್ ಟೆಸ್ಟ್ ಮಾಡಲು ಬಿಸಿಸಿಐ ನಿರ್ಧರಿಸಿದೆ. 

500 ವರ್ಷದ ಕನಸು, 30 ವರ್ಷದ ಹಿಂದಿನ ಪ್ರತಿಜ್ಞೆ: ಇದು ರಾಮ ಮಂದಿರ ರಹಸ್ಯ!...

ರಾಮ ಮಂದಿರ ನಿರ್ಮಾಣ ಐನೂರು ವರ್ಷಗಳ ಕನಸು ಆದರೆ ಅದಕ್ಕೆ ಮತ್ತೊಂದು ಆಯಾಮ ಹಾಗೂ ವೇಗ ನೀಡಿದ್ದು ಮೂವತ್ತು ವರ್ಷಗಳ ಹಿಂದಿನ ಪ್ರತಿಜ್ಞೆ ಹಾಗೂ ಸವಾಲು. 


ಬಿಹಾರ ಪೊಲೀಸ್‌ ಮನವಿಗೆ ಸುಪ್ರೀಂ ಅಸ್ತು: ಸುಶಾಂತ್ ಸಿಂಗ್ ಸಾವಿನ ಪ್ರಕರಣ CBIಗೆ...

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ತನಿಖೆ ಸಂಬಂಧ ಬಿಹಾರ ಮತ್ತು ಮುಂಬೈ ಪೊಲೀಸ್ ನಡುವೆ ಶೀತಲ ಸಮರ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.

ನಟಿ ಸಾನ್ವಿ ಫೇಸ್‌ಬುಕ್ ಖಾತೆ ಹ್ಯಾಕರ್ಸ್ ಮುಷ್ಠಿಯಲ್ಲಿ..!...

ನಟ ನಟಿಯರ ಅಕೌಂಟ್ ಹ್ಯಾಕ್ ಆಗಿದೆ ಎಂಬ ಪೋಸ್ಟ್‌ಗಳು ಕಾಣುತ್ತಿರುತ್ತವೆ. ಇದಕ್ಕೆ ಹೊರತಾಗಿಲ್ಲ ಸ್ಯಾಂಡಲ್‌ವುಡ್ ನಟಿ ಶಾನ್ವಿ ಶ್ರೀವಾಸ್ತವ್. ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಪೋಸ್ಟ್‌ ಹಾಕಿ ಅಭಿಮಾನಿಗಳನ್ನು ಮೆಚ್ಚಿಸುವ ನಟಿಯ ಖಾತೆ ಸದ್ಯ ಹ್ಯಾಕರ್ಸ್ ಕಪಿಮುಷ್ಟಿಯಲ್ಲಿದೆ.

ವಿದೇಶಿ ಕಂಪನಿಗೆ ಪ್ಯಾಸೆಂಜರ್ ವಾಹನ ಮಾರಾಟವಿಲ್ಲ: ಟಾಟಾ ಸ್ಪಷ್ಟನೆ...

ಟಾಟಾ ಮೋಟಾರ್ಸ್ ಕಳೆದ ಹಲವು ವರ್ಷಗಳಿಂದ ಪ್ಯಾಸೆಂಜರ್ ವಾಹನ ಕಡೆಗೂ ಹೆಚ್ಚಿನ ಒಲವು ತೋರಿದೆ. ಈ ಮೂಲಕ ಅತ್ಯುತ್ತಮ ಕಾರುಗಳಾದ ಟಾಟಾ ನೆಕ್ಸಾನ್, ಹ್ಯಾರಿಯರ್, ಟಿಯಾಗೋ ಸೇರದಂತೆ ಹಲವು ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಆದರೆ ಇತ್ತೀಚೆಗೆ ಪ್ಯಾಸೆಂಜರ್ ವೆಹಿಕಲ್ ವಿಭಾಗದ ಶೇಕಡಾ 49 ರಷ್ಟು ಪಾಲು ಮಾರಾಟ ಮಾಡುವ ಕುರಿತು ಹಲವು ಮಾಧ್ಯಗಳಲ್ಲಿ ಸುದ್ದಿ ಹರಿದಾಡಿತ್ತು. ಇದರ ಬೆನ್ನಲ್ಲೇ ಟಾಟಾ ಮೋಟಾರ್ಸ್ ಸ್ಪಷ್ಟನೆ ನೀಡಿದೆ.

UPSC ಪರೀಕ್ಷೆಯಲ್ಲಿ 93ನೇ ರ‍್ಯಾಂಕ್‌; IAS ಅಧಿಕಾರಿಯಾಗುತ್ತಿದ್ದಾರೆ ಮಾಡೆಲ್ ಐಶ್ವರ್ಯ!...

ಫೆಮಿನಾ ಮಿಸ್ ಇಂಡಿಯಾ,  ಕ್ಯಾಂಪಸ್ ಫೇಸಸ್ ಡೆಲ್ಲಿ, ಫ್ರೆಶ್ ಫೇಸ್ ವಿನ್ನರ್ ಡೆಲ್ಲಿ ಸೇರಿದಂತೆ ಹಲವು ಪ್ರಶಸ್ತಿ ಮುಡಿಗೇರಿಸಿಕೊಂಡ ಐಶ್ವರ್ಯ ಶೆರಾನ್, ಮಾಡಲಿಂಗ್ ಕ್ಷೇತ್ರದಲ್ಲಿ ಸಕ್ರಿಯ ಹಾಗೂ ಜನಪ್ರಿಯ. ಮಿಸ್ ಇಂಡಿಯಾ ಹಾಗೂ ಮಿಸ್ ವರ್ಲ್ಡ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಹುಡುಗಿ ಎಂದೇ ಕರೆಯಿಸಿಕೊಂಡಿದ್ದ ಐಶ್ವರ್ಯ ಇದೀಗ IAS ಅಧಿಕಾರಿಯಾಗುತ್ತಿದ್ದಾರೆ.