ರಾಮಲಲ್ಲಾನಿಗೆ ದೀರ್ಘದಂಡ ನಮಸ್ಕಾರ, ರಾಮ ಮಂದಿರಕ್ಕೆ ಮೋದಿ ಶಿಲಾನ್ಯಾಸ!
ಐದು ಶತಮಾನದ ಕನಸು ಸಾಕಾರ| ಅಯೋಧ್ಯೆ ರಾಮ ಮಂದಿರಕ್ಕೆ ಮೋದಿ ಶಿಲಾನ್ಯಾಸ| 12.44ರ ಮುಹೂರ್ತದಲ್ಲಿ ಮೋದಿ ಪೂಜೆ
ಅಯೋಧ್ಯೆ(ಆ.05) ಭವ್ಯ ರಾಮ ಮಮದಿರಕ್ಕೆ ಶಿಲಾನ್ಯಾಸ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಐದು ಶತಮಾನಗಳ ರಾಮ ಮಂದಿರ ಕನಸನ್ನು ಸಾಕಾರಗೊಳಿಸಿದ್ದಾರೆ.
ರೇಷ್ಮೆ ಧೋತಿ ಹಾಗೂ ಬಂಗಾರ ಬಣ್ಣದ ಕುರ್ತಾ, ಹೀಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಅಯೋಧ್ಯೆಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹನುಮಾನ್ ಗಢಿಗೆ ಭೇಟಿ ನೀಡಿ ಏಳು ನಿಮಿಷದ ವಿಶೇಷ ಪೂಜೆ ಸಲ್ಲಿಸಿದರು. ಇದಾದ ಬಳಿಕ ರಾಮ ಲಲ್ಲಾ ಪ್ರತಿಮೆ ಬಳಿ ತೆರಳಿದ ಪಿಎಂ ಮೋದಿ, ದೀರ್ಘದಂಡ ನಮಸ್ಕಾರ ಮಾಡಿ ರಾಮಲಲ್ಲಾ ದರ್ಶನ ಪಡೆದರು.
ಇಲ್ಲಿಂದ ಶಿಲಾನ್ಯಾಸ ನಡೆಯುವ ಸ್ಥಳಕ್ಕೆ ತೆರಳಿದ ಮೋದಿ ಎಲ್ಲಾ ವಿಧಿ ವಿಧಾನಗಳ ಬಳಿಕ ಬೆಳ್ಳಿ ಇಟ್ಟಿಗೆ ಇಟ್ಟು ಭವ್ಯ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ.
ಇನ್ನು ಈ ವಿಶೇಷ ಕ್ಷಣಕ್ಕಾಗಿ ದೀರ್ಘ ಕಾಲದ ಹೋರಾಟ ನಡೆಸಿದ್ದ ಮುರಳಿ ಮನೋಹರ್ ಜೋಷಿ ಹಾಗೂ ಎಲ್. ಕೆ. ಅಡ್ವಾಣಿ ಕೊರೋನಾತಂಕ ಹಿನ್ನೆಲೆ ವಿಡಿಯೋ ಕಾನ್ಫರೆನನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ರಾಮಮಂದಿರ ನಿರ್ಮಾಣದ ಹೆಜ್ಜೆಗುರುತುಗಳು
"