UPSC ಪರೀಕ್ಷೆಯಲ್ಲಿ 93ನೇ ರ‍್ಯಾಂಕ್‌; IAS ಅಧಿಕಾರಿಯಾಗುತ್ತಿದ್ದಾರೆ ಮಾಡೆಲ್ ಐಶ್ವರ್ಯ!

ಫೆಮಿನಾ ಮಿಸ್ ಇಂಡಿಯಾ,  ಕ್ಯಾಂಪಸ್ ಫೇಸಸ್ ಡೆಲ್ಲಿ, ಫ್ರೆಶ್ ಫೇಸ್ ವಿನ್ನರ್ ಡೆಲ್ಲಿ ಸೇರಿದಂತೆ ಹಲವು ಪ್ರಶಸ್ತಿ ಮುಡಿಗೇರಿಸಿಕೊಂಡ ಐಶ್ವರ್ಯ ಶೆರಾನ್, ಮಾಡಲಿಂಗ್ ಕ್ಷೇತ್ರದಲ್ಲಿ ಸಕ್ರಿಯ ಹಾಗೂ ಜನಪ್ರಿಯ. ಮಿಸ್ ಇಂಡಿಯಾ ಹಾಗೂ ಮಿಸ್ ವರ್ಲ್ಡ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಹುಡುಗಿ ಎಂದೇ ಕರೆಯಿಸಿಕೊಂಡಿದ್ದ ಐಶ್ವರ್ಯ ಇದೀಗ IAS ಅಧಿಕಾರಿಯಾಗುತ್ತಿದ್ದಾರೆ.

Former Miss India finalist Aishwarya Sheoran qualified UPSC Civil Services Exam

ನವದೆಹಲಿ(ಆ.05): ಪೋಷಕರ ಆಸೆ, ತನ್ನ ಕನಸು ಎರಡೆರಡನ್ನು ಸಾಧಿಸುವುದು ವಿರಳ. ಒಂದು ಗುರಿಯಿಟ್ಟು ಮುಂದೆ ಸಾಗಿದರೆ ಮಾತ್ರ ಯಶಸ್ಸು ಸಾಧ್ಯ. ಆದರೆ ಪೋಷಕರ ಹಾಗೂ ತನ್ನ ಕನಸನ್ನು ಸಾಕಾರಗೊಳಿಸುವಲ್ಲಿ ಐಶ್ವರ್ಯ ಶೆರಾನ್ ಯಶಸ್ವಿಯಾಗಿದ್ದಾರೆ.  ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಐಶ್ವರ್ಯ ಶೆರಾನ್ ಇದೀಗ IAS ಅಧಿಕಾರಿಯಾಗುತ್ತಿದ್ದಾರೆ. UPSC CSE ಪರೀಕ್ಷೆಯಲ್ಲಿ 93ನೇ ರ‍್ಯಾಂಕ್‌ನೊಂದಿಗೆ ತೇರ್ಗಡೆಯಾಗಿರುವ ಐಶ್ವರ್ಯ ಇದೀಗ IAS ಅಧಿಕಾರಿಯಾಗುವತ್ತ ಹೆಜ್ಜೆ ಇಟ್ಟಿದ್ದಾರೆ.

UPSC ಫಲಿತಾಂಶ: ಆಯ್ಕೆಯಾದ ಕರ್ನಾಟಕದ 40 ಕುವರರು

UPSC ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ರ‍್ಯಾಂಕ್‌ನೊಂದಿಗೆ ಪಾಸ್ ಆಗಿರುವ ಐಶ್ವರ್ಯ ತನ್ನ ಕಸನ್ನು ಸಾಕಾರಗೊಳಿಸುತ್ತಿದ್ದಾರೆ. ನನ್ನ ತಾಯಿ ಐಶ್ವರ್ಯ ರೈಯಂತೆ ನಾನು ಕೂಡ ಮಿಸ್ ವರ್ಲ್ಡ್ ಆಗಬೇಕು ಎಂದು ಬಯಸಿದ್ದರು ಇದಕ್ಕಾಗಿ ನನಗೆ ಐಶ್ವರ್ಯ ಎಂದು ಹೆಸರಿಟ್ಟಿದ್ದಾರೆ. ಹೀಗಾಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೆ.  2016ರಲ್ಲಿ ಫೆಮಿನಾ ಮಿಸ್ ಇಂಡಿಯಾ ಫೈನಲಿಸ್ಟ್, 2016ರ ಕ್ಯಾಂಪಸ್ ಫೇಸಸ್ ಡೆಲ್ಲಿ, 2015ರ ಫ್ರೆಶ್ ಫೇಸ್ ವಿನ್ನರ್ ಡೆಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದೇನೆ. ಆದರೆ ನನ್ನ ಕನಸು ಐಎಎಸ್ ಅಧಿಕಾರಿಯಾಗಬೇಕು ಎಂದಾಗಿತ್ತು ಎಂದು ಐಶ್ವರ್ಯ ಹೇಳಿದ್ದಾರೆ.

IAS ಅಧಿಕಾರಿಯಾಗಲು ನಾನು ಮಾಡೆಲಿಂಗ್ ಕ್ಷೇತ್ರದಿಂದ ಕೊಂಚ ದೂರ ಉಳಿದು ಅಧ್ಯಯನದಲ್ಲಿ ತೊಡಗಿದ್ದೆ. ಶಾಲಾ ಕಾಲೇಜುಗಳಲ್ಲೇ ರ‍್ಯಾಂಕ್‌ ವಿದ್ಯಾರ್ಥಿಯಾಗಿದ್ದ ಐಶ್ವರ್ಯ, ಯಾವುದೇ ಕೋಂಚಿಂಗ್ ಕ್ಲಾಸ್, ಇತರ ತರಬೇತಿ ಪಡೆಯದೆ UPSC ಸಿವಿಲ್ ಸರ್ವೀಸ್ ಪರೀಕ್ಷೆ ಪಾಸ್ ಮಾಡಿದ್ದಾರೆ. ಮಾಡೆಲಿಂಗ್ ಹಾಗೂ ಅಧ್ಯಯನ ಎರಡನ್ನೂ ಹೇಗೆ ನಿಭಾಯಿಸಿದ್ದೀರಿ ಅನ್ನೋ ಪ್ರಶ್ನೆಗೆ ಮಾದರಿ ಉತ್ತರ ನೀಡಿದ್ದಾರೆ. ಅಧ್ಯಯನ ಆರಂಭಿಸಿದಾಗ ನಾನು ಮೊಬೈಲ್ ಸ್ವಿಚ್ ಆಫ್ ಮಾಡುತ್ತಿದ್ದೆ, ಸಾಮಾಜಿಕ ಜಾಲತಾಣದಿಂದ ದೂರವಿರುತ್ತಿದ್ದೆ. ಪರೀಕ್ಷಾ ತಯಾರಿಗೆ ಸಂಪೂರ್ಣ ಗಮನ ನೀಡುತ್ತಿದ್ದೆ ಎಂದು ಐಶ್ವರ್ಯ ಹೇಳಿದ್ದಾರೆ.

 

UPSC ಸಿವಿಲ್ ಸರ್ವೀಸ್ 2019ರ ಪರೀಕ್ಷಾ ರಿಸಲ್ಟ್ ಆಗಸ್ಟ್ 4, 2020ರಲ್ಲಿ ಪ್ರಕಟಗೊಂಡಿದೆ.  ಐಶ್ವರ್ಯ ಸಾಧನೆಗೆ ಮಿಸ್ ಇಂಡಿಯಾ ಟ್ವಿಟರ್ ಖಾತೆಯಲ್ಲಿ ಅಭಿನಂದನೆ ಹೇಳಿದೆ. ಇದರ ಜೊತೆಗೆ ಹಲವು ಅಭಿಮಾನಿಗಳು, ಮಾಡೆಲಿಂಗ್ ಕ್ಷೇತ್ರದ ದಿಗ್ಗಜರು ಶುಭಾಶಯ ಕೋರಿದ್ದಾರೆ.

Latest Videos
Follow Us:
Download App:
  • android
  • ios