ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಆತಂಕ, ದುಗುಡದಲ್ಲಿ ಇಡೀ ದೇಶ ಇದೀಗ ಸಂಭ್ರಮಿಸುತ್ತಿದೆ. ಶತಮಾನಗಳ ವಿವಾದ ಬಗೆಹರಿದು ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ನಡೆದಿದೆ. ಆದರೆ ಆಲ್ ಇಂಡಿಯಾ ಮುಸ್ಲಿಂ ಲಾ ಬೋರ್ಡ್ ಭೂಮಿ ಪೂಜೆಗೆ ಅಸಮಧಾನ ಹೊರಹಾಕಿದೆ. ಇಷ್ಟೇ ಅಲ್ಲ ಕಾಲ ಚಕ್ರ ತಿರುಗಲಿದೆ ಎಂಬ ಎಚ್ಚರಿಕೆ ಸಂದೇಶವನ್ನು ಸಾರಿಸಿದೆ.

ನವದೆಹಲಿ(ಆ.05): ಶತ ಶತಮಾನಗಳ ವಿವಾದ ಬಗೆ ಹರಿದು ಇದೀಗ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಇಡೀ ದೇಶ ಸಂಭ್ರಮಿಸುತ್ತಿರುವ, ಕೊಂಡಾಡುತ್ತಿರುವ ದಿನವೊಂದು ಬಂದಿದೆ. ಮಾತುಕತೆ, ಹೋರಾಟ, ರಕ್ತಪಾತ, ಕಾನೂನು ಹೋರಾಟ ಸೇರಿದಂತೆ ಹಲವು ಮಜಲುಗಳನ್ನು ಎದುರಿಸಿದ ರಾಮ ಜನ್ಮ ಭೂಮಿ ವಿವಾದ ಸುಪ್ರೀಂ ಕೋರ್ಟ್ ತೀರ್ಪಿನೊಂದಿಗೆ ಸುಖಾಂತ್ಯಗೊಂಡಿತ್ತು. ಹೀಗಾಗಿ ಮಂದಿರ ನಿರ್ಮಾಣ ಕಾರ್ಯಗಳು ಆರಂಭಗೊಂಡಿದೆ. ಆದರೆ ಆಲ್ ಇಂಡಿಯಾ ಮುಸ್ಲಿಂ ಬೋರ್ಡ್(AIMPLB) ರಾಮ ಮಂದಿರ ಭೂಮಿ ಪೂಜೆಗೆ ಅಸಮಧಾನ ವ್ಯಕ್ತಪಡಿಸಿದೆ.

"

ರಾಮಲಲ್ಲಾನಿಗೆ ದೀರ್ಘದಂಡ ನಮಸ್ಕಾರ, ರಾಮ ಮಂದಿರಕ್ಕೆ ಮೋದಿ ಶಿಲಾನ್ಯಾಸ!

AIMPLB ಟ್ವೀಟ್ ಮೂಲಕ ತನ್ನ ವಿರೋಧ, ಆಕ್ರೋಶವನ್ನು ಹೊರಹಾಕಿದೆ. ಬಾಬ್ರಿ ಮಸೀದಿ ಯಾವಾಗಲೂ ಮಸೀದಿಯಾಗಿ ಉಳಿಯಲಿದೆ. ಟರ್ಕಿಯ ಹಗಿಯಾ ಸೋಫಿಯಾ ನಮಗೆ ಊದಾಹರಣೆಯಾಗಿದೆ. ಅನ್ಯಾಯದ, ದಬ್ಬಾಳಿಕೆಯ, ನಾಚಿಕೆಗೇಡಿನ ಮತ್ತು ಬಹುಮತರನ್ನು ಮನವೊಲಿಸುವ ತೀರ್ಪಿನಿಂದ ಭೂಮಿಯನ್ನು ಆಕ್ರಮಿಸಿಕೊಳ್ಳಲಾಗಿದೆ. ಆದರರೆ ವಾಸ್ತವ ಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಎದೆಗುಂದುವ ಅಗತ್ಯವಿಲ್ಲ. ಕಾರಣ ಕಾಲ ಚಕ್ರ ತಿರುಗಲಿದೆ. ಪರಿಸ್ಥಿತಿ ಶಾಶ್ವತವಾಗಿ ಉಳಿಯುವುದಿಲ್ಲ ಎಂದು AIMPLB ಟ್ವೀಟ್ ಮಾಡಿದೆ.

Scroll to load tweet…

ಆಲ್ ಇಂಡಿಯಾ ಮುಸ್ಲಿಂ ಲಾ ಬೋರ್ಡ್ ಟ್ವೀಟ್ ಬೆನ್ನಲ್ಲೇ AIMIM ನಾಯಕ ಅಸಾದುದ್ದೀನ್ ಒವೈಸಿ ರಾಮ ಮಂದಿರ ಭೂಮಿ ಪೂಜೆ ಹಾಗೂ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಾಬ್ರಿ ಮಸೀದಿ ಇತ್ತು, ಮುಂದೆಯು ಇರಲಿದೆ ಇನ್ಶಾಲ್ಲ. #BabriZindaHai ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…

ನವೆಂಬರ್ 9 ರಂದು ಸುಪ್ರೀಂ ಕೋರ್ಟ್ ವಿವಾದಿತ 2.7 ಏಕರೆ ಭೂಮಿಯನ್ನು ರಾಮ ಮಂದಿರ ನಿರ್ಮಾಣಕ್ಕೆ ಹಸ್ತಾಂತರ ಮಾಡಬೇಕು ಎಂದು ತೀರ್ಪು ನೀಡಿತು. ಇಷ್ಟೇ ಅಲ್ಲ ಬಾಬ್ರಿ ಮಸೀದಿ ನಿರ್ಮಾಣಕ್ಕ ಇತರೆಡೆ 5 ಏಕರೆ ಜಾಗ ಗುರುತಿಸಿ ಸುನ್ನಿ ವಕ್ಫ್ ಬೋರ್ಡ್‌ಗೆ ನೀಡಬೇಕು ಎಂದು ಆದೇಶಿಸಿತ್ತು.

ಸುಪ್ರೀಂ ಕೋರ್ಟ್ ತೀರ್ಪಿಗೆ ಅಸಮಧಾನ ವ್ಯಕ್ತಪಡಿಸಿದ ಆಲ್ ಇಂಡಿಯಾ ಮುಸ್ಲಂ ಲಾ ಬೋರ್ಡ್ ತೀರ್ಪು ಮರುಪರಿಶೀಲನೆಗೆ ಡಿಸೆಂಬರ್ ಮೊದಲ ವಾರದೊಳಗೆ ಮನವಿ ಮಾಡುವವುದಾಗಿ ಹೇಳಿತ್ತು. ಆದರೆ 5 ಸದಸ್ಯರ ಪೀಠ ನೀಡಿದ ತೀರ್ಪು ಮರುಪರಿಶೀಲಿಸಿವುದು ವ್ಯರ್ಥ ಎಂಬ ಅಭಿಪ್ರಾಯ ವ್ಯಕ್ತವಾದ ಕಾರಣ ಮರುಪರಿಶೀಲನೆಯಿಂದ ಹಿಂದೆ ಸರಿದಿತ್ತು.