ವಿದೇಶಿ ಕಂಪನಿಗೆ ಪ್ಯಾಸೆಂಜರ್ ವಾಹನ ಮಾರಾಟವಿಲ್ಲ: ಟಾಟಾ ಸ್ಪಷ್ಟನೆ
ಟಾಟಾ ಮೋಟಾರ್ಸ್ ಕಳೆದ ಹಲವು ವರ್ಷಗಳಿಂದ ಪ್ಯಾಸೆಂಜರ್ ವಾಹನ ಕಡೆಗೂ ಹೆಚ್ಚಿನ ಒಲವು ತೋರಿದೆ. ಈ ಮೂಲಕ ಅತ್ಯುತ್ತಮ ಕಾರುಗಳಾದ ಟಾಟಾ ನೆಕ್ಸಾನ್, ಹ್ಯಾರಿಯರ್, ಟಿಯಾಗೋ ಸೇರದಂತೆ ಹಲವು ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಆದರೆ ಇತ್ತೀಚೆಗೆ ಪ್ಯಾಸೆಂಜರ್ ವೆಹಿಕಲ್ ವಿಭಾಗದ ಶೇಕಡಾ 49 ರಷ್ಟು ಪಾಲು ಮಾರಾಟ ಮಾಡುವ ಕುರಿತು ಹಲವು ಮಾಧ್ಯಗಳಲ್ಲಿ ಸುದ್ದಿ ಹರಿದಾಡಿತ್ತು. ಇದರ ಬೆನ್ನಲ್ಲೇ ಟಾಟಾ ಮೋಟಾರ್ಸ್ ಸ್ಪಷ್ಟನೆ ನೀಡಿದೆ.
ಮುಂಬೈ(ಆ.05): ಭಾರತದ ಸೇರಿದಂತೆ ಏಷ್ಯಾದಲ್ಲಿ ಟಾಟಾ ಮೋಟಾರ್ಸ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಭಾರತದಲ್ಲಿ ಮೇಡ್ ಇನ್ ಇಂಡಿಯಾಗೆ ಪ್ರಾಮುಖ್ಯತೆ ಹೆಚ್ಚಾಗುತ್ತಿದೆ. ಕಳೆದ ಕೆಲ ವರ್ಷಗಳಿಂದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ಕಾರುಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಟಾಟಾ ಟಿಯಾಗೋ, ಟಾಟಾ ಟಿಗೋರ್, ಟಾಟಾ ನೆಕ್ಸಾನ್, ಟಾಟಾ ಹ್ಯಾರಿಯರ್, ಟಾಟಾ ಹೆಕ್ಸಾ ಸೇರಿದಂತೆ ಒಂದರ ಮೇಲೊಂದರಂತೆ ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಆದರೆ ಈ ಪ್ಯಾಸೆಂಜರ್ ವಿಭಾಗದ ಶೇ.49 ರಷ್ಟು ಷೇರುಗಳನ್ನು ವಿದೇಶಿ ಕಂಪನಿಗೆ ಮಾರಾಟ ಮಾಡಲು ಟಾಟಾ ಮೋಟಾರ್ಸ್ ಮುಂದಾಗಿದೆ ಎಂಬ ಸುದ್ದಿ ಹರಡಿತ್ತು. ಆದರೆ ಈ ಮಾತನ್ನು ಟಾಟಾ ಅಲ್ಲಗೆಳೆದಿದೆ. ಇಷ್ಟೇ ಅಲ್ಲ ಸ್ಪಷ್ಟನೆ ನೀಡಿದೆ.
ಡೌನ್ ಪೇಮೆಂಟ್ ಇಲ್ಲ, 6 ತಿಂಗಳು EMI ಇಲ್ಲ, ಭರ್ಜರಿ ಆಫರ್ ಘೋಷಿಸಿದ ಟಾಟಾ!
ಭಾರತದ ವಿಶ್ವಾಸಾರ್ಹ ಹಾಗೂ ಅತ್ಯಂತ ಸುರಕ್ಷತೆ ಕಾರುಗಳನ್ನು ನೀಡುತ್ತಿರುವ ಟಾಟಾ ಮೋಟಾರ್ಸ್ ತನ್ನ ಪ್ಯಾಸೆಂಜರ್ ವಾಹನ ವಿಭಾಗ ಮಾತ್ರವಲ್ಲ ಯಾವುದೇ ಘಟಕದ ಷೇರುಗಳನ್ನು ಮಾರಾಟ ಮಾಡಲು ಉದ್ದೇಶಿಸಿಲ್ಲ ಎಂದು ಟಾಟಾ ಮೋಟಾರ್ಸ್ ಸ್ಪಷ್ಟಪಡಿಸಿದೆ.
ಸುರಕ್ಷತೆಯಲ್ಲಿ ಭಾರತದ ಕಾರುಗಳಿಗೆ ಅಗ್ರಸ್ಥಾನ, ವಿದೇಶಿ ಕಾರುಗಳಿಗಿಲ್ಲ ಸ್ಥಾನ!
ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವಾಹನದ ಶೇಕಡಾ 49 ರಷ್ಟು ಪಾಲು ಹಾಗೂ ಜಾಗ್ವಾರ್ ಲ್ಯಾಂಡ್‌ರೋವರ್ ಕಂಪನಿಯ ಶೇಕಡಾ 50 ರಷ್ಟು ಪಾಲನ್ನು ವಿದೇಶಿ ಆಟೋಮೊಬೈಲ್ ಕಂಪನಿಗಳು ಮಾರಾಟ ಮಾಡಲು ಉದ್ದೇಶಿಸಿದೆ. ಇದಕ್ಕಾಗಿ ಚೀನಾದ ಗೀಲೆ ಸೇರಿದಂತೆ ಇತರ ಕೆಲ ಕಂಪನಿಗಳನ್ನು ಸಂಪರ್ಕಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಇದೆಲ್ಲ ಸತ್ಯಕ್ಕೆ ದೂರವಾದ ಮಾತು ಎಂದು ಟಾಟಾ ಹೇಳಿದೆ.