ಪರಪ್ಪನ ಅಗ್ರಹಾರದಲ್ಲಿ ಸಂಜನಾ ಹೈಡ್ರಾಮಾ; ಇವೆಲ್ಲಾ ನಡೆಯಲ್ಲಮ್ಮಾ..!...

ಪರಪ್ಪನ ಅಗ್ರಹಾರ ಸೇರಿರುವ ನಟಿ ಸಂಜನಾ ಗರ್ಲಾನಿಗೆ ನಿದ್ದೆಯೇ ಬರುತ್ತಿಲ್ಲವಂತೆ. ನನಗೆ ತಲೆನೋವು ಹೆಚ್ಚಾಗ್ತಾ ಇದೆ. ನಿದ್ದೆಯೇ ಬರುತ್ತಿಲ್ಲ. ನನ್ನನ್ನು ಆಸ್ಪತ್ರೆಗೆ ಕಳುಹಿಸಿ' ಎಂದು ಗರ್ಲಾನಿ ಹೈಡ್ರಾಮಾ ಮಾಡಿದ್ದಾರೆ. 

ಗಡಿಯಲ್ಲಿ ಯುದ್ಧದ ಕಾರ್ಮೋಡ, ಲಡಾಖ್‌ನಲ್ಲಿ ಒಂದು ಲಕ್ಷ ಯೋಧರು!...

ಇತ್ತೀಚೆಗಷ್ಟೇ ಪೂರ್ವ ಲಡಾಖ್‌ನ ಪ್ಯಾಂಗಾಂಗ್‌ ಸರೋವರದ ದಕ್ಷಿಣ ದಂಡೆಯನ್ನು ವಶಪಡಿಸಿಕೊಳ್ಳಲು ವಿಫಲ ಯತ್ನ ನಡೆಸಿದ್ದ ಚೀನಾದ ಸೇನೆ ಇದೀಗ ಅಲ್ಲಿ 10 ಸಾವಿರ ಯೋಧರನ್ನು ಜಮಾವಣೆ ಮಾಡಿದೆ. ಭಾರತ ಕೂಡ ಇದಕ್ಕೆ ಸರಿಸಮ ಪ್ರಮಾಣದಲ್ಲೇ ಸೇನೆಯನ್ನು ನಿಯೋಜಿಸಿದ್ದು, ಗಡಿಯಲ್ಲಿ ಯುದ್ಧಸದೃಶ ವಾತಾವರಣ ಇನ್ನಷ್ಟುಕಾವು ಪಡೆದಿದೆ ಎಂದು ಮೂಲಗಳು ತಿಳಿಸಿವೆ.

ಐಪಿಎಲ್‌ ಕಣದಲ್ಲಿ ‘ಧಾರವಾಡದ ಹುಡುಗ’: ಅಪ್ಪಟ ಉತ್ತರ ಕರ್ನಾಟಕದ ಪ್ರತಿಭೆ...

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ 13ನೇ ಆವೃತ್ತಿಯ ಪ್ರಾರಂಭಕ್ಕೆ ಒಂದೇ ದಿನ ಬಾಕಿಯಿದ್ದು, ಕೊರೋನಾ ಮಧ್ಯೆಯೂ ‘ಕ್ರಿಕೆಟ್‌ ಕಾವು’ ಏರತೊಡಗಿದೆ. ಕೊರೋನಾ ಹಿನ್ನೆಲೆ ದೂರದ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ಐಪಿಎಲ್‌ ನಡೆಯುತ್ತಿದ್ದು, ಧಾರವಾಡದ ಹುಡುಗ ಪವನ ದೇಶಪಾಂಡೆ, ವಿರಾಟ್‌ ಕೊಹ್ಲಿ ನಾಯಕತ್ವದ ರಾಯಲ್‌ ಚಾಲೆಂಜರ್ಸ್‌ (ಆರ್‌ಸಿಬಿ) ಪರ ಆಡುತ್ತಿರುವುದು ಹೆಮ್ಮೆಯ ಸಂಗತಿ.

IPL 2020 ಟ್ರೋಫಿ ಗೆಲ್ಲುವ ತಂಡ ಯಾವುದು? ಭವಿಷ್ಯ ನುಡಿದ ಗವಾಸ್ಕರ್!

2020ರ ಐಪಿಎಲ್ ಟ್ರೋಫಿ ಗೆಲ್ಲಲು 8 ತಂಡ ಕಠಿಣ ಅಭ್ಯಾಸ ಮಾಡುತ್ತಿದೆ. ಕೊರೋನಾ ವೈರಸ್ ಕಾರಣ ದುಬೈನಲ್ಲಿ ಐಪಿಎಲ್ ಟೂರ್ನಿ ಆಯೋಜನೆಯಾಗಿದೆ. ಹೀಗಾಗಿ ದುಬೈ ಪಿಚ್‌ನಲ್ಲಿ ಪ್ರಸಕ್ತ ವರ್ಷದ ಐಪಿಎಲ್ ಟ್ರೋಫಿ ಗೆಲ್ಲುವ ತಂಡ ಯಾವುದು ಅನ್ನೋ ಚರ್ಚೆ ಆರಂಭಗೊಂಡಿದೆ. ಇದೀಗ ಮಾಜಿ ನಾಯಕ, ಐಪಿಎಲ್ ವೀಕ್ಷಕ ವಿವರಣೆಗಾರ ಸುನಿಲ್ ಗವಾಸ್ಕರ್ ಈ ಬಾರಿ ಟ್ರೋಫಿ ಗೆಲ್ಲುವ ತಂಡ ಯಾವುದು ಎಂದು ಭವಿಷ್ಯ ನುಡಿದಿದ್ದಾರೆ.

ನಶೆಯಲ್ಲಿದ್ರಾ ಸೆಲೆಬ್ರಿಟಿಗಳು; ಕರಣ್ ಮನೆಯ ಪಾರ್ಟಿ ವಿಡಿಯೋ ಸತ್ಯ!

ಶಿರೋಮಣಿ ಅಕಾಲಿದಳದ ಮಾಜಿ ಎಂಎಲ್‌ಎ ಮಜೀಂದರ್ ಸಿಂಗ್ ಸಿರ್ಸಾ ಒಂದು ವಿಚಾರವನ್ನು ಎತ್ತಿದ್ದಾರೆ.  ಬಾಲಿವುಡ್ ಡ್ರಗ್ಸ್ ಘಾಟಿನ ಬಗ್ಗೆ ಬೆಳಕು ಚೆಲ್ಲುವ ಯತ್ನ ಮಾಡಿದ್ದು ನಿರ್ದೇಶಕ ಕರಣ್ ಜೋಹರ್ ಅವರನ್ನು ಎಳೆದು ತಂದಿದ್ದಾರೆ.

ಮದ್ಯ ಮಾರಾಟಕ್ಕೆ ಬಿತ್ತು ಬ್ರೇಕ್ :ಕಟ್ಟುನಿಟ್ಟಿನ ಆದೇಶ

ಮದ್ಯ ಮಾರಾಟಕ್ಕೆ ಬಿತ್ತು ಬ್ರೇಕ್, ಯಾವುದೆ ಕಾರಣಕ್ಕೂ ಮದ್ಯ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಮಾರಾಟ ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ದೇಶದ ದಿಕ್ಕು, ಜನರ ಲಕ್ಕು ಬದಲಿಸಿದ ಡಿಬಿಟಿ; ತೆರಿಗೆ ಹಣ ಸೋರಿಕೆಯಾಗದಂತೆ ಮಾಡಿದ ಮೋದಿ!...

ನೇರ ಫಲಾನುಭಗಳ ಖಾತೆಗೆ ಹಣ ತಲುಪಿಸುವ ಯೋಜನೆ 2014ರಲ್ಲಿ ಆರಂಭವಾದ ತರುವಾಯ ಕೇಂದ್ರ ಸರ್ಕಾರವು 7 ಲಕ್ಷ ಕೋಟಿ ಹಣವನ್ನು ಡಿಬಿಟಿ ಯೋಜನೆಯಡಿಯಲ್ಲಿ ವರ್ಗಾವಣೆ ಮಾಡಿ, ತನ್ಮೂಲಕ ಸೋರಿಕೆಯಾಗುತ್ತಿದ್ದ 1.70 ಲಕ್ಷ ಕೋಟಿ ರು. ಉಳಿತಾಯ ಮಾಡಿ ದೇಶದ ಆರ್ಥಿಕ ವ್ಯವಸ್ಥೆಗೆ ದೊಡ್ಡ ಕೊಡುಗೆ ನೀಡಿದೆ.

1-8ನೇ ತರಗತಿ ವಿದ್ಯಾರ್ಥಿಗಳಿಗೆ ಲೋಕಲ್‌ ಚಾನೆಲ್‌ ಮೂಲಕ ಕ್ಲಾಸ್‌...

ಒಂದರಿಂದ ಎಂಟನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಲೋಕಲ್‌ ಕೇಬಲ್‌ ಟಿವಿ ಚಾನೆಲ್‌ಗಳ ಮೂಲಕ ತರಗತಿಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಉದ್ಯಮಿ ಜೊತೆ ಪಲ್ಲಂಗದಾಟ; 'ಗಂಡಹೆಂಡತಿ' ಆಟ ಆಡುತ್ತಿದ್ರಾ ನಟಿ?...

ನಟಿ ಸಂಜನಾಗೆ ಒಂದೊಂದೇ ತನಿಖೆಯ ಉರುಳು ಸುತ್ತಿಕೊಳ್ಳುತ್ತಿದೆ. ಡ್ರಗ್ಸ್ ಜಾಲದಲ್ಲಿ ಸಂಜನಾ ಇದ್ದಾರೆ ಎನ್ನುವುದರ ಬಗ್ಗೆ ಸಿಸಿಬಿ ವಿಚಾರಣೆ ಮುಂದುವರೆದಿದೆ. ಈಗ ಹನಿ ಟ್ರ್ಯಾಪ್ ಆರೋಪ ಕೇಳಿ ಬಂದಿದೆ. ಸಂಜನಾ ಉದ್ಯಮಿಯೊಬ್ಬರ ಜೊತೆ ಇರುವ ವಿಡಿಯೋ ಇದು ಎನ್ನಲಾಗಿದ್ದು, ಇದು ವೈರಲ್ ಆಗಿದೆ.