Asianet Suvarna News Asianet Suvarna News

ಸ್ವರ್ಣ ಮಂದಿರಕ್ಕೆ ವಿದೇಶಿ ಅನುದಾನ, ಸೈನಿಕರ ಜಮಾವಣೆಗೊಳಿಸಿದ ಚೀನಾ; ಸೆ.10ರ ಟಾಪ್ 10 ಸುದ್ದಿ!

ಸ್ವರ್ಣ ಮಂದಿರಕ್ಕೆ ವಿದೇಶಿ ಅನುದಾನಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ರಸ್ತೆ ಬದಿಯಲ್ಲಿ ರುಚಿಕರವಾದ ಖಾದ್ಯಗಳನ್ನು ಆನ್‌ಲೈನ್ ಮೂಲಕ ಡೆಲಿವರಿ ಮಾಡಲು ಸರ್ಕಾರ ಮಹತ್ವದ ಯೋಜನೆ ಜಾರಿಗೊಳಿಸಲು ಮುಂದಾಗಿದೆ.  ಗಡಿ ಪ್ರದೇಶದಲ್ಲಿ ಚೀನಾ ಹೆಚ್ಚಿನ ಸೈನಿಕರ ಜಮಾವಣೆಗೊಳಿಸೋ ಮೂಲಕ ಯುದ್ಧದ  ಸನ್ನಿವೇಷ ನಿರ್ಮಿಸಿದೆ. ನಟಿ ಸಂಜನಾ ಹಾಗೂ ರಾಗಿಣಿಗೆ ಮೇಲೆ ಇಡಿ ತನಿಖೆ, ಹೊಸ ಕಾರು ಖರೀದಿಸಿದ ಸನ್ನಿ ಲಿಯೋನ್ ಸೇರಿದಂತೆ ಸೆಪ್ಟೆಂಬರ್ 10ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Amritsar golden temple to india china standoff top 10 news of September 10
Author
Bengaluru, First Published Sep 10, 2020, 4:54 PM IST

ಮೋದಿ ಸರ್ಕಾರದ ಮಹತ್ವದ ನಿರ್ಧಾರ, ಸ್ವರ್ಣ ಮಂದಿರಕ್ಕೆ ವಿದೇಶೀ ಅನುದಾನ!...

Amritsar golden temple to india china standoff top 10 news of September 10

ಗೃಹ ಸಚಿವಾಲಯದ ವಿದೇಶೀ ಅನುದಾನ ಅಧಿನಿಯಮ(FCRA)2010ರ ಅನ್ವಯ ಅಮೃತಸರದ ಸ್ವರ್ಣ ಮಂದಿರ ಎಂದೇ ಖ್ಯಾತಿ ಗಳಿಸಿರುವ ಶ್ರೀ ಹರ್ಮಂದಿರ್ ಸಾಹಿಬ್- ದರ್ಬಾರ್ ಸಾಹಿಬ್ ಪಂಜಾಬ್‌ನ್ನು ನೋಂದಾವಣೆಗೊಳಿಸಲು ಅನುಮತಿ ನೀಡಲಾಗಿದೆ. ಅಲ್ಲದೇ ಈ ನಿರ್ಧಾರದಿಂದ ನಮ್ಮ ಸಿಖ್ ಸಹೋದರಿ ಹಾಗೂ ಸಹೋದರರ ಸೇವಾ ಮನೋಭಾವಕ್ಕೆ ಮತ್ತಷ್ಟು ಬಲ ತುಂಬಲಿದೆ ಎಂದು ಗೃಹ ಅಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಡ್ರಗ್ಸ್‌ ಆಯ್ತು, ಹವಾಲಾ ಕೇಸ್‌ನಲ್ಲಿಯೂ ತಗ್ಲಾಕೋತಾರಾ ರಾಗಿಣಿ, ಸಂಜನಾ?...

Amritsar golden temple to india china standoff top 10 news of September 10

ಶ್ರೀಲಂಕಾದ ಕ್ಯಾಸಿನೋಗಳಲ್ಲಿ ಅಕ್ರಮ ಹಣ ಹೂಡಿಕೆ ಮಾಡಲಾಗುತ್ತಿದೆ ಎಂದು ಪ್ರಶಾಂತ್ ಸಂಬರಗಿ ಆರೋಪ ಮಾಡಿದ್ದಾರೆ. ಕೊಲಂಬೋದ ಕ್ಯಾಸಿನೋದಲ್ಲಿ ಅಕ್ರಮ ಹಣ ಹೂಡಿಕೆ ಮಾಡಲಾಗಿದೆ ಎನ್ನುವ ಆರೋಪ ಬಗ್ಗೆ ಇಡಿ ವಿಚಾರಣೆಗೆ ಇಳಿದಿದೆ. 

ಭಾರತ- ಚೀನಾ ಸೈನಿಕರ ಜಮಾವಣೆ: ಗಡಿಯಲ್ಲಿ ಯುದ್ಧಾಂತಕ ತೀವ್ರ!...

Amritsar golden temple to india china standoff top 10 news of September 10

ಭಾರತದ ಭೂಭಾಗ ಅತಿಕ್ರಮಿಸುವ ಗುರಿಯೊಂದಿಗೆ 45 ವರ್ಷಗಳ ಬಳಿಕ ಚೀನಾ ಯೋಧರು ಗುಂಡು ಹಾರಿಸಿ ಬೆದರಿಕೆಯೊಡ್ಡಿದ ನಂತರ ಗಡಿಯಲ್ಲಿ ನಿರ್ಮಾಣವಾಗಿದ್ದ ತ್ವೇಷಮಯ ಪರಿಸ್ಥಿತಿ ಮತ್ತಷ್ಟುವಿಕೋಪಕ್ಕೆ ಹೋಗಿದೆ. ಭಾರತ ಹಾಗೂ ಚೀನಾ ಯೋಧರು ಕೆಲವೇ 100 ಮೀಟರ್‌ಗಳ ಅಂತರದಲ್ಲಿ ಮುಖಾಮುಖಿಯಾಗಿ ಜಮಾವಣೆಯಾಗಿದ್ದು, ‘ಏನು ಬೇಕಾದರೂ’ ಆಗಬಹುದು ಎಂಬ ಸನ್ನಿವೇಶ ನಿರ್ಮಾಣವಾಗಿದೆ.

IPL 2020: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ ಪ್ರಕಟ..!

Amritsar golden temple to india china standoff top 10 news of September 10

ಕಳೆದ 12 ಆವೃತ್ತಿಗಳಿಂದಲೂ ಕಪ್‌ ಗೆಲ್ಲಲು ವಿಫಲವಾಗಿರುವ ಬೆಂಗಳೂರು ಮೂಲದ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಬಲಿಷ್ಠ ತಂಡವಾಗಿ ರೂಪುಗೊಂಡಿದೆ.  ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಸಂಭಾವ್ಯ ತಂಡವನ್ನು ಪ್ರಕಟಿಸಿದೆ. 

ಸಂಜನಾ ಸೀಕ್ರೆಟ್ ಮದುವೆ ಬಯಲು; ಮುಸ್ಲಿಂ ಸಂಪ್ರದಾಯದಂತೆ ಆದ್ರಾ ಮದುವೆ?...

Amritsar golden temple to india china standoff top 10 news of September 10

ಗಂಡ ಹೆಂಡತಿ ನಟಿ ಸಂಜನಾ ಕೆಲ ತಿಂಗಳ ಹಿಂದೆ ರಹಸ್ಯವಾಗಿ ಮದುವೆಯಾಗಿದ್ದಾರೆ. ಯಾರಿಗೂ ಹೇಳದೆ ಆದ ಮದುವೆ ಫೋಟೋ ಈಗ ವೈರಲ್ ಆಗುತ್ತಿದೆ.

ಬೀದಿಯಲ್ಲಿ ಸಿಗುವ ತಿನಿಸು ಇನ್ನು ಆನ್‌ಲೈನ್‌ ಡೆಲಿವರಿ!...

Amritsar golden temple to india china standoff top 10 news of September 10

ರಸ್ತೆ ಬದಿಯಲ್ಲಿ ರುಚಿಕರವಾದ ಖಾದ್ಯಗಳನ್ನು ತಯಾರಿಸಿ ಉಣಬಡಿಸುವ ವ್ಯಾಪಾರಿಗಳಿಗೆ ದೊಡ್ಡ ರೆಸ್ಟೋರೆಂಟ್‌ಗಳ ಮಾದರಿಯ ಆನ್‌ಲೈನ್‌ ಡೆಲಿವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಸನ್ನಿ ಲಿಯೋನ್ ಖರೀದಿಸಿದ ಮಸರಾಟಿ ಘಿಬ್ಲಿ ಕಾರಿನ ವಿಶೇಷತೆ ಏನು?

Amritsar golden temple to india china standoff top 10 news of September 10

ಬಾಲಿವುಡ್ ನಟಿ ಸನ್ನಿ ಲಿಯೋನ್ ಹೆಚ್ಚು ಇಡಪಡುವ ದುಬಾರಿ ಹಾಗೂ ಐಷಾರಾಮಿ ಕಾರುಗಳ ಪೈಕಿ  ಮಸರಾಟಿ ಬ್ರ್ಯಾಂಡ್‌ಗೆ ಮೊದಲ ಸ್ಥಾನ. ಕಾರಣ ಇದೀಗ ಸನ್ನಿ ಲಿಯೋನ್ ಹೊಚ್ಚ ಹೊಸಸ ಮಸರಾತಿ ಘಿಬ್ಲಿ ಕಾರು ಖರೀದಿಸಿದ್ದಾರೆ. ಇದು ಸನ್ನಿ ಖರೀದಿಸಿದ 3ನೇ ಮಸರಾತಿ ಕಾರು ಅನ್ನೋದು ವಿಶೇಷ.  

ನಿರುದ್ಯೋಗಿಗಳಿಗೆ ಸಿಹಿ ಸುದ್ದಿ: ಭಾರತೀಯ ವಾಯುಸೇನೆ ನೇಮಕಾತಿ

Amritsar golden temple to india china standoff top 10 news of September 10

ಭಾರತೀಯ ವಾಯುಸೇನೆಯಲ್ಲಿ ಸೆ. 23ರಿಂದ ಅ. 4ರ ವರೆಗೆ ಗ್ರೂಪ್‌-ಎಕ್ಸ್‌ ಏರ್‌ಮನ್‌ (ತಾಂತ್ರಿಕ ಟ್ರೇಡ್‌) ಹುದ್ದೆಗಳಿಗೆ ಬೆಂಗಳೂರಿನಲ್ಲಿ ರ‌್ಯಾಲಿ ಏರ್ಪಡಿಸಿದ್ದು, ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಕರ್ನಾಟಕ ರಾಜ್ಯಕ್ಕೆ ಸೇರಿದ ಭಾರತೀಯ ಅವಿವಾಹಿತ ಪುರುಷ ನಾಗರಿಕರು ಅರ್ಜಿ ನೋಂದಣಿ ಮಾಡಿಕೊಳ್ಳಬಹುದು.

ಅಶ್ಲೀಲ ಜಾಲತಾಣ : ಕೇಂದ್ರದಿಂದ ಕಠಿಣ ಕ್ರಮ...

Amritsar golden temple to india china standoff top 10 news of September 10

ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋದ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಿರುವುದನ್ನು ಭಾರತೀಯ ಜನಸೇವಾ ಟ್ರಸ್ಟ್‌ ಸ್ವಾಗತಿಸಿದೆ.

ಪಾರ್ಕಿಂಗ್‌ ಸ್ಥಳವೀಗ ಟೂರಿಸ್ಟ್‌ ಸ್ಪಾಟ್‌!...

Amritsar golden temple to india china standoff top 10 news of September 10

ಕೇರಳ ಮೂಲದ ಪಿ.ಜೆ.ಬಿಜು ಎಂಬುವವರು ಪುದುಚೇರಿಯ ರಸ್ತೆಯೊಂದರ ಕಿರಿದಾದ ಜಾಗದಲ್ಲಿ ದೊಡ್ಡ ಕಾರನ್ನು ಅತ್ಯಂತ ನಾಜೂಕಾಗಿ ಪಾರ್ಕ್ ಮಾಡುವ ಮತ್ತು ಕಾರನ್ನು ತೆಗೆಯುವ ವಿಡಿಯೋವೊಂದು ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Follow Us:
Download App:
  • android
  • ios