IPL 2020: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ ಪ್ರಕಟ..!
ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಕಾವು ದಿನದಿಂದ ದಿನಕ್ಕೆ ಜೋರಾಗಲಾರಂಭಿಸಿದೆ. ಈ ಬಾರಿಯ ಐಪಿಎಲ್ ಟೂರ್ನಿಗೆ ಯುಎಇ ಆತಿಥ್ಯವನ್ನು ವಹಿಸಿದ್ದು, ಎಲ್ಲಾ 8 ತಂಡಗಳು ಅಭ್ಯಾಸ ನಡೆಸಲಾರಂಭಿಸಿದೆ.
ಕಳೆದ 12 ಆವೃತ್ತಿಗಳಿಂದಲೂ ಕಪ್ ಗೆಲ್ಲಲು ವಿಫಲವಾಗಿರುವ ಬೆಂಗಳೂರು ಮೂಲದ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಬಲಿಷ್ಠ ತಂಡವಾಗಿ ರೂಪುಗೊಂಡಿದೆ. ಫಿಂಚ್ RCB ತಂಡ ಕೂಡಿಕೊಂಡಿದ್ದು ವಿರಾಟ್ ಪಡೆಯ ಬಲವನ್ನು ಮತ್ತಷ್ಟು ಹೆಚ್ಚು ಮಾಡಿದೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಸಂಭಾವ್ಯ ತಂಡವನ್ನು ಪ್ರಕಟಿಸಿದೆ. ಸುವರ್ಣ ನ್ಯೂಸ್.ಕಾಂ ಸಂಭಾವ್ಯ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
1. ಆ್ಯರೋನ್ ಫಿಂಚ್ (ಆರಂಭಿಕ ಬ್ಯಾಟ್ಸ್‌ಮನ್)
ಆ್ಯರೋನ್ ಫಿಂಚ್ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್, ದೊಡ್ಡ ಇನಿಂಗ್ಸ್ ಕಟ್ಟಬಲ್ಲ ಆಟಗಾರ. ಇದರ ಜತೆಗೆ ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ ಫಿಂಚ್
2. ದೇವದತ್ ಪಡಿಕ್ಕಲ್(ಎಡಗೈ ಬ್ಯಾಟ್ಸ್‌ಮನ್)
ಕರ್ನಾಟಕದ ಯುವ ಪ್ರತಿಭೆ. ಈಗಾಗಲೇ ದೇಸಿ ಕ್ರಿಕೆಟ್‌ನಲ್ಲಿ ರನ್ ಹೊಳೆ ಹರಿಸುವ ಮೂಲಕ ಬೆಂಗಳೂರು ಫ್ರಾಂಚೈಸಿ ಪಾಲಿನ ನೀಲಿಗಣ್ಣಿನ ಹುಡುಗ ಕನ್ನಡಿಗ ದೇವದತ್ ಪಡಿಕ್ಕಲ್.
3. ವಿರಾಟ್ ಕೊಹ್ಲಿ(ನಾಯಕ)
ರಾಯಲ್ ಚಾಲೆಂಜರ್ಸ್ ತಂಡದ ಆಧಾರಸ್ತಂಭ. ರನ್ ಮಷೀನ್, ಆಕ್ರಮಣಕಾರಿ ನಾಯಕತ್ವ ಗುಣ. ಏಕಾಂಗಿಯಾಗಿ ಹೊರಾಡಬಲ್ಲ ಕೆಚ್ಚೆದೆಯ ನಾಯಕ
4. ಎಬಿ ಡಿವಿಲಿಯರ್ಸ್(ವಿಕೆಟ್ ಕೀಪರ್ ಬ್ಯಾಟ್ಸ್‌ಮನ್)
RCB ಪಾಲಿನ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್. ಮಿಸ್ಟರ್ 360 ಖ್ಯಾತಿಯ ಎಬಿಡಿ ಕೂಡಾ ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ವಿಧ್ವಂಸಕ ಬ್ಯಾಟ್ಸ್‌ಮನ್. ತಂಡಕ್ಕೆ ವಿಕೆಟ್ ಕೀಪಿಂಗ್ ಮಾಡಲು ಸಿದ್ಧ
5. ಮೊಯಿನ್ ಅಲಿ (ಆಲ್ರೌಂಡರ್)
ಪ್ರತಿಭಾನ್ವಿತ ಆಲ್ರೌಂಡರ್. ತಂಡಕ್ಕೆ ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಉಪಯುಕ್ತ ಸಂದರ್ಭದಲ್ಲಿ ಸ್ಪಿನ್ ಬೌಲಿಂಗ್ ಮೂಲಕ ನೆರವಾಗಬಲ್ಲ ಇಂಗ್ಲೆಂಡ್ ಆಟಗಾರ.
6. ಶಿವಂ ದುಬೆ (ಆಲ್ರೌಂಡರ್)
ಮತ್ತೋರ್ವ ದೇಸಿ ಪ್ರತಿಭೆ. ಹಾರ್ಡ್ ಹಿಟ್ಟಿಂಗ್ ಮೂಲಕ ಗಮನ ಸೆಳೆಯಬಲ್ಲ ಆಟಗಾರ. ಅಲಿ ಜತೆ ದುಬೆ ಮ್ಯಾಚ್ ಫಿನಿಷರ್ ಪಾತ್ರ ನಿಭಾಯಿಸುವ ಸಾಮರ್ಥ್ಯವಿರುವ ಆಟಗಾರನೀತ. ಮಧ್ಯಮ ವೇಗದ ಬೌಲಿಂಗ್ ಮೂಲಕವು ತಂಡಕ್ಕೆ ಆಸರೆಯಾಗಬಲ್ಲ ಕ್ರಿಕೆಟಿಗ
7. ವಾಷಿಂಗ್ಟನ್ ಸುಂದರ್
RCB ತಂಡದ ಮತ್ತೋರ್ವ ಆಲ್ರೌಂಡರ್. ಪವರ್ ಪ್ಲೇ ಓವರ್‌ನಲ್ಲೇ ಬೌಲಿಂಗ್ ಮಾಡಿ ವಿಕೆಟ್ ಕಬಳಿಸುವ ಸಾಮರ್ಥ್ಯವಿರುವ ಆಟಗಾರ. ಇನ್ನು ಕೆಳ ಕ್ರಮಾಂಕದಲ್ಲಿ ಉಪಯುಕ್ತ ರನ್ ಕಾಣಿಕೆ ನೀಡಬಲ್ಲ ಆಟಗಾರ.
8. ಉಮೇಶ್ ಯಾದವ್ (ವೇಗದ ಬೌಲರ್)
ಬೆಂಗಳೂರು ತಂಡದ ಅನುಭವಿ ಬೌಲರ್. ತಮ್ಮ ಮಾರಕ ಬೌನ್ಸರ್ ಹಾಗೂ ಶಾಟ್ ಪಿಚ್ ಬೌಲಿಂಗ್ ಮೂಲಕ ಎದುರಾಳಿ ತಂಡಕ್ಕೆ ಭೀತಿ ಹುಟ್ಟಿಸಬಲ್ಲ ನಾಗ್ಪುರ ವೇಗಿ.
9. ನವದೀಪ್ ಸೈನಿ (ವೇಗದ ಬೌಲರ್)
ಡೆತ್ ಓವರ್ ಸ್ಪೆಷಲಿಸ್ಟ್. ತಮ್ಮ ಕರಾರುವಕ್ಕಾದ ಯಾರ್ಕರ್ ಬೌಲಿಂಗ್ ಮೂಲಕ ವಿಕೆಟ್ ಕಬಳಿಸಬಲ್ಲ ಮತ್ತೋರ್ವ ಮಾರಕ ವೇಗಿ.
10. ಡೇಲ್ ಸ್ಟೇನ್(ವೇಗದ ಬೌಲರ್)
ಅತ್ಯಂತ ಅನುಭವಿ ಹಾಗೆಯೇ ಚಾಣಾಕ್ಷ ವೇಗದ ಬೌಲರ್. ಲೈನ್ ಅಂಡ್ ಲೆಂಗ್ತ್ ಬೌಲಿಂಗ್ ಮೂಲಕ ಪರಿಣಾಮಕಾರಿ ಬೌಲಿಂಗ್ ದಾಳಿ ಸಂಘಟಿಸಬಲ್ಲ ವೇಗಿ
11. ಯುಜುವೇಂದ್ರ ಚಹಲ್ (ಲೆಗ್ ಸ್ಪಿನ್ನರ್)
ಮಣಿಕಟ್ಟು ಸ್ಪಿನ್ನರ್. ರಾಯಲ್ ಚಾಲೆಂಜರ್ಸ್ ತಂಡದ ವಿಕೆಟ್ ಟೇಕಿಂಗ್ ಬೌಲರ್. ಉಪಯುಕ್ತ ಸಂದರ್ಭದಲ್ಲಿ ರನ್ಗೆ ಕಡಿವಾಣ ಹಾಕಿ ವಿಕೆಟ್ ಕಬಳಿಸಬಲ್ಲ ಲೆಗ್ ಸ್ಪಿನ್ನರ್.