ಪುದುಚೇರಿ(ಸೆ.10): ಕೇರಳ ಮೂಲದ ಪಿ.ಜೆ.ಬಿಜು ಎಂಬುವವರು ಪುದುಚೇರಿಯ ರಸ್ತೆಯೊಂದರ ಕಿರಿದಾದ ಜಾಗದಲ್ಲಿ ದೊಡ್ಡ ಕಾರನ್ನು ಅತ್ಯಂತ ನಾಜೂಕಾಗಿ ಪಾರ್ಕ್ ಮಾಡುವ ಮತ್ತು ಕಾರನ್ನು ತೆಗೆಯುವ ವಿಡಿಯೋವೊಂದು ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಡಿಯೋ ವೈರಲ್‌ ಬಳಿಕ ಪುದುಚೇರಿಯ ಮಾಹೆ ರೈಲ್ವೆ ನಿಲ್ದಾಣದ ರಸ್ತೆಯಲಿ ಬಿಜು ಕಾರು ಪಾರ್ಕಿಂಗ್‌ ಸರ್ಕಸ್‌ ಮಾಡಿದ ಸ್ಥಳವೀಗ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ.

ಸ್ಥಳೀಯರು ಭಾರೀ ಸಂಖ್ಯೆಯಲ್ಲಿ ಆ ಸ್ಥಳಕ್ಕೆ ಆಗಮಿಸಿ ಕಾರು ನಿಲ್ಲಿಸಿದ ಜಾಗ ಪರಿಶೀಲನೆ ಮಾಡುತ್ತಿದ್ದಾರೆ. ಇನ್ನೊಂದಿಷ್ಟುಜನ ತಾವೂ ಇಂಥದ್ದೊಂದು ಸಾಹಸ ಮಾಡಿ ವಿಫಲರಾಗುತ್ತಿದ್ದಾರೆ.