ಕೊಪ್ಪಳ(ಸೆ.10):ಭಾರತೀಯ ವಾಯುಸೇನೆಯಲ್ಲಿ ಸೆ. 23ರಿಂದ ಅ. 4ರ ವರೆಗೆ ಗ್ರೂಪ್‌-ಎಕ್ಸ್‌ ಏರ್‌ಮನ್‌ (ತಾಂತ್ರಿಕ ಟ್ರೇಡ್‌) ಹುದ್ದೆಗಳಿಗೆ ಬೆಂಗಳೂರಿನಲ್ಲಿ ರ‌್ಯಾಲಿ ಏರ್ಪಡಿಸಿದ್ದು, ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಕರ್ನಾಟಕ ರಾಜ್ಯಕ್ಕೆ ಸೇರಿದ ಭಾರತೀಯ ಅವಿವಾಹಿತ ಪುರುಷ ನಾಗರಿಕರು ಅರ್ಜಿ ನೋಂದಣಿ ಮಾಡಿಕೊಳ್ಳಬಹುದು.

ಸಿಓಬಿಎಸ್‌ಇಯು ಮಾನ್ಯತೆ ನೀಡಿದ ಶೈಕ್ಷಣಿಕ ಮಂಡಳಿಗಳಿಂದ ಕಡ್ಡಾಯ ವಿಷಯಗಳಾಗಿರುವ ಗಣಿತಶಾಸ್ತ್ರ, ಭೌತಶಾಸ್ತ್ರ ಮತ್ತು ಇಂಗ್ಲಿಷ್‌ನೊಂದಿಗೆ ಇಂಟರ್‌ಮೀಡಿಯೆಟ್‌/ 12ನೇ (ಪಿಯುಸಿ) ತತ್ಸಮಾನ ಪರೀಕ್ಷೆಯಲ್ಲಿ ಸರಾಸರಿ ಕನಿಷ್ಠ ಶೇ.50 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಪಾಲಿಟೆಕ್ನಿಕ್‌ ಸಂಸ್ಥೆಯಿಂದ ಎಂಜಿನಿಯರಿಂಗ್‌(ಮೆಕ್ಯಾನಿಕಲ್‌/ಎಲೆಕ್ಟ್ರಿಕಲ್‌/ಎಲೆಕ್ಟ್ರಾನಿಕ್ಸ್‌/ಆಟೋಮೋಬೈಲ್‌/ಕಂಪ್ಯೂಟರ್‌ ಸೈನ್ಸ್‌/ಇನ್ಸ್‌ಟ್ರೂಮೆಂಟೇಷನ್‌ ಟೆಕ್ನಾಲಜಿ/ಇನ್‌ಫಾರಮೇಷನ್‌ ಟೆಕ್ನಾಲಜಿಯಲ್ಲಿ 3 ವರ್ಷಗಳ ಡಿಪ್ಲೊಮಾ ಕೋರ್ಸನ್ನು ಸರಾಸರಿ 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಆನ್‌ಲೈನ್‌ ನೋಂದಣಿಗೆ ಸೆಪ್ಟೆಂಬರ್‌ 10 ಕೊನೆಯ ದಿನವಾಗಿದೆ.

ಸರ್ಕಾರಿ ಉದ್ಯೋಗ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಮಾಣಿಕ್‌ ಶಾ ಪರೇಡ್‌ ಗ್ರೌಂಡ್‌, ಕಬ್ಬನ್‌ ರೋ​ಡ್‌ ಬೆಂಗಳೂರು, ಕರ್ನಾಟಕ-560001ದಲ್ಲಿ ರ‌್ಯಾಲಿ ನಡೆಯಲಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.