ಅಮೃತಸರದ ಸ್ವರ್ಣ ಮಂದಿರ ಎಂದೇ ಖ್ಯಾತಿ ಗಳಿಸಿರುವ ಶ್ರೀ ಹರ್ಮಂದಿರ್ ಸಾಹಿಬ್‌ಗೆ ಇನ್ಮುಂದೆ ಸಿಗಲಿದೆ ವಿದೇಶೀ ಅನುದಾನ| ಮೋದಿ ಸರ್ಕಾರದ ಹತ್ವದ ನಿರ್ಧಾರ| ಟ್ವೀಟ್ ಮಾಡಿ ಮಾಹಿತಿ ನೀಡಿದ ಗೃಹ ಸಚಿವ ಅಮಿತ್ ಶಾ

ಅಮೃತಸರ(ಸೆ.10): ಗೃಹ ಸಚಿವಾಲಯದ ವಿದೇಶೀ ಅನುದಾನ ಅಧಿನಿಯಮ(FCRA)2010ರ ಅನ್ವಯ ಅಮೃತಸರದ ಸ್ವರ್ಣ ಮಂದಿರ ಎಂದೇ ಖ್ಯಾತಿ ಗಳಿಸಿರುವ ಶ್ರೀ ಹರ್ಮಂದಿರ್ ಸಾಹಿಬ್- ದರ್ಬಾರ್ ಸಾಹಿಬ್ ಪಂಜಾಬ್‌ನ್ನು ನೋಂದಾವಣೆಗೊಳಿಸಲು ಅನುಮತಿ ನೀಡಲಾಗಿದೆ. ಅಲ್ಲದೇ ಈ ನಿರ್ಧಾರದಿಂದ ನಮ್ಮ ಸಿಖ್ ಸಹೋದರಿ ಹಾಗೂ ಸಹೋದರರ ಸೇವಾ ಮನೋಭಾವಕ್ಕೆ ಮತ್ತಷ್ಟು ಬಲ ತುಂಬಲಿದೆ ಎಂದು ಗೃಹ ಅಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಈ ನೋಂದಾವಣೆ ಮುಂದಿನ ಐದು ವರ್ಷದವರೆಗೆ ಮಾನ್ಯವಾಗಿರುತ್ತದೆ. ಈ ವೇಳೆ ಅಮೃತಸರದ ಸ್ವರ್ಣ ಮಂದಿರ ವಿದೇಶೀ ಅನುದಾನವೂ ಪಡೆಯಲು ಅರ್ಹವಾಗಿರುತ್ತದೆ. ಇದು ಅಲ್ಲಿ ಸಿಗುವ ಸೇವೆಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಲಿದೆ.

Scroll to load tweet…

ಈ ಸಂಬಂಧ ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದು, ಶ್ರೀ ದರ್ಬಾರ್‌ ಸಾಹಿಬ್‌ನ ದಿವ್ಯತೆ ನಮಗೆ ಶಕ್ತಿ ಒದಗಿಸುತ್ತದೆ. ದಶಕಗಳಿಂದ ವಿಶ್ವದ ಮೂಲೆ ಮೂಲೆಯಲ್ಲಿರುವ ಶ್ರದ್ಧಾಳುಗಳು ಅಲ್ಲಿ ತಮ್ಮ ಸೇವೆ ನೀಡಲು ಅಸಮರ್ಥರಾಗಿದ್ದರು. ಆದರೀಗ ಶ್ರೀ ಹರ್ಮಂದಿರ್‌ ಸಾಹಿಬ್‌ಗೆ FCRA ಅನುಮತಿ ನೀಡುವ ಪಿಎಂ ಮೋದಿ ಸರ್ಕಾರದ ನಿರ್ಧಾರದಿಂದ ವಿಶ್ವ ಹಾಗೂ ದರ್ಬಾರ್‌ ಸಾಹಿಬ್‌ ನಡುವಿನ ಸೇವಾ ಸಂಬಂಧ ಮತ್ತಷ್ಟು ಆಳವಾಗಲಿದೆ ಎಂದಿದ್ದಾರೆ.