ಪ್ರಧಾನಿ ಮೋದಿ ತಮ್ಮ ಮನ್ ಕಿಬಾತ್‌ನಲ್ಲಿ ಕರ್ನಾಟಕವನ್ನು ಉಲ್ಲೇಘಿಸಿದ್ದಾರೆ. ಇತ್ತ ರೈತರು ಪ್ರತಿಭಟನೆ ನಡುವೆ ಕೇಂದ್ರದ ಜೊತೆಗೆ ಮಾತುಕತೆಗೆ ಒಪ್ಪಿಕೊಂಡಿದ್ದಾರೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ನಾಯಕ ಅಜಿಂಕ್ಯ ರಹಾನೆ ಶತಕ ಸಿಡಿಸಿ ಆಸರೆಯಾಗಿದ್ದಾರೆ. ರಶ್ಮಿಕಾ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ರಕ್ಷಿತ್ ಶೆಟ್ಟಿ, ಆಲಿಯಾ ವಿರುದ್ಧ ಕೇಸ್ ಸೇರಿದಂತೆ ಡಿಸೆಂಬರ್ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ನೇಪಾಳ ಸರ್ಕಾರದ ಬಿಕ್ಕಟ್ಟು ಪರಿಹರಿಸಲು ಚೀನಾ ಮಧ್ಯಪ್ರವೇಶ...
ಅಧಿಕಾರ ಸಂಬಂಧ ನೇಪಾಳದ ಆಡಳಿತಾರೂಢ ಎನ್‌ಸಿಪಿ ಪಕ್ಷದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಶಮನಕ್ಕೆ ಖುದ್ದು ಚೀನಾ ಸರ್ಕಾರವೇ ಮುಂದಾಗಿದೆ.
ಮನ್ ಕಿ ಬಾತ್ ಸುದ್ದಿ : ಕರ್ನಾಟಕದ ವೀರಭದ್ರ ಸ್ವಾಮಿ ದೇವಸ್ಥಾನ, ಯುವಬ್ರಿಗೇಡ್ ಉಲ್ಲೇಖಿಸಿದ ಮೋದಿ!...
ಪ್ರಧಾನಿ ಮೋದಿ ವರ್ಷದ ತಮ್ಮ ಕೊನೆಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಕರ್ನಾಟಕ ಕೆಲ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಸ್ವಚ್ಚತಾ ಕಾರ್ಯದಲ್ಲಿ ಕರ್ನಾಟಕದ ಯುವ ದಂಪತಿಗಳಾದ ಅನುದೀಪ್ ಹಾಗೂ ಮಿನೀಶಾ ಕಾರ್ಯವನ್ನು ಹೊಗಳಿದ್ದಾರೆ. ಇನ್ನು ಶ್ರೀರಂಗ ಪಟ್ಟಣದ ವಿರಭದ್ರ ದೇವಸ್ಥಾನ ಹಾಗೂ ಯುವ ಬ್ರಿಗೇಡ್ ಕಾರ್ಯವನ್ನು ಪ್ರಶಂಸಿದ್ದಾರೆ.
ಸಂಧಾನಕ್ಕೆ ರೈತರ ಸಮ್ಮತಿ: ಕೃಷಿ ಕಾಯ್ದೆ ವಾಪಸ್‌ಗೆ ಬಿಗಿಪಟ್ಟು...
ಡಿಸೆಂಬರ್ 29ರಂದು ಸರ್ಕಾರದ ಜೊತೆ ಮುಂದಿನ ಹಂತದ ಮಾತುಕತೆಗೆ ಸಿದ್ಧರಿರುವುದಾಗಿ 40 ರೈತ ಸಂಘಟನೆಗಳನ್ನು ಒಳಗೊಂಡಿರುವ ಸಂಯುಕ್ತ ಕಿಸಾನ್ ಮೋರ್ಚಾ ಶನಿವಾರ ಹೇಳಿದೆ.
ದೇಶದಲ್ಲಿ ಕಾಂಡೋಂಗೆ ಭರ್ಜರಿ ಡಿಮ್ಯಾಂಡ್: ರಾತ್ರಿಗಿಂತ ಹಗಲೇ ಹೆಚ್ಚು ಬುಕ್ಕಿಂಗ್...
ಕೊರೋನಾ ನಿಯಂತ್ರಣಕ್ಕಾಗಿ ವಿಧಿಸಲಾಗಿದ್ದ ದೇಶವ್ಯಾಪಿ ಲಾಕ್‌ಡೌನ್ ವೇಳೆ ಕಾಂಡೋಮ್ ಮಾರಾಟ ಭರ್ಜರಿಯಾಗಿ ನಡೆದಿದೆ. ಅದರಲ್ಲೂ ರಾತ್ರಿಗಿಂತ ಹಗಲಿನ ವೇಳೆಯೇ ಭಾರತೀಯರು ಹೆಚ್ಚು ಕಾಂಡೋಮ್‌ಗಳನ್ನು ಖರೀದಿಸಿದ್ದಾರೆ!
ಬಾಕ್ಸಿಂಗ್ ಡೇ ಟೆಸ್ಟ್: ರಹಾನೆ ಶತಕ, ಭಾರತಕ್ಕೆ 82 ರನ್‌ಗಳ ಮುನ್ನಡೆ...
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ದ ಟೀಂ ಇಂಡಿಯಾ ಮೇಲುಗೈ ಸಾಧಿಸಿದ್ದು, ಮೊದಲ ಇನಿಂಗ್ಸ್‌ನಲ್ಲಿ 82 ರನ್‌ಗಳ ಮುನ್ನಡೆ ಪಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕೊನೆಗೂ ರಶ್ಮಿಕಾ ಪೋಸ್ಟ್‌ಗೆ ಕಾಮೆಂಟ್ ಮಾಡಿದ ರಕ್ಷಿತ್ ಶೆಟ್ಟಿ!...
ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ ತಮ್ಮ ಮೊದಲ ಹಿಟ್ ಸಾಂಗ್ ಬಗ್ಗೆ ಸಂತಸದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ನಿಶ್ಚಿತಾರ್ಥ ಮುರಿದು ಬಿದ್ದ ನಂತರ ರಕ್ಷಿತ್‌ನನ್ನು ಟ್ಯಾಗ್ ಮಾಡಿ ರಶ್ಮಿಕಾ ಮಾಡಿದ ಮೊದಲ ಟ್ಟೀಟ್‌ಗೆ ಬಂದ ಪ್ರತಿಕ್ರಿಯೆ ಏನು ಗೊತ್ತಾ?
Realme Watch S ಮತ್ತು Watch S Pro ಬಿಡುಗಡೆ, ಮಾರಾಟ ಶುರು...
ಭಾರತದಲ್ಲಿ ಬಜೆಟ್ ಹಾಗೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಪಾಲು ಹೊಂದಿರುವ ರಿಯಲ್‌ಮೀ ಇದೀಗ ಪ್ರೀಮಿಯಂ ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಬಿಡುಗಡೆ ಮಾಡಿದ ಸ್ಮಾರ್ಟ್‌ವಾಚ್‌ಗಳಿಗೆ ಅತ್ಯುತ್ತಮ ಪ್ರಕ್ರಿಯೆ ದೊರೆತ ಬೆನ್ನಲ್ಲೇ ಇದೀಗ 4,999 ರೂ. ಮತ್ತು 9,999 ರೂ. ಬೆಲೆ ವೀಯರ್‌ಬಲ್ ಗ್ಯಾಜೆಟ್‌ಗಳನ್ನು ಭಾರತದಲ್ಲಿ ಲಾಂಚ್ ಮಾಡಿದೆ.
ಯೆಲ್ಲೋ ಬಿಕಿನಿಯಲ್ಲಿ ಬಿಗ್‌ಬಾಸ್ ಬ್ಯೂಟಿ: ಫೋಟೋಸ್ ನೋಡಿ...
ಇನ್ಸ್ಟಾಗ್ರಾಮ್‌ನಲ್ಲಿ ಹಾಟ್ ಬಿಕಿನಿ ಲುಕ್‌ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಬಿಗ್‌ಬಾಸ್ ಬ್ಯೂಟಿ
ಜಾತಿ ಸ್ಟಿಕ್ಕರ್ ಅಂಟಿಸಿದರೆ ವಾಹನವೇ ಸೀಝ್; ಕಟ್ಟು ನಿಟ್ಟಿನ ಆದೇಶ ಜಾರಿ!...
ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ಭಾರತದಲ್ಲಿ ಸಾರಿಗೆ ನಿಯಮ ಕಠಿಣವಾಗಿದೆ. ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ತೆರಬೇಕಾಗುತ್ತದೆ. ಚಲ್ತಾ ಹೇ ಅನ್ನೋ ಧೋರಣೆ ಇದೀಗ ಇಲ್ಲ. ಎಲ್ಲವೂ ನಿಯಮದ ಚೌಕಟ್ಟಿನೊಳಗೆ ಇರಬೇಕು. ನಂಬರ್ ಪ್ಲೇಟ್ ಮೇಲೆ ಜಾತಿ, ಲವ್ ಯು ಚಿನ್ನು ಸೇರಿದಂತೆ ಹಲವು ರೀತಿಯ ಸ್ಟಿಕ್ಕರ್ ಕಾಣಬಹುದು. ಇಂತಹ ವಾಹನಗಳನ್ನು ಪೊಲೀಸರು ಸೀಝ್ ಮಾಡಲು ಮುಂದಾಗಿದ್ದಾರೆ.
ಬಾಲಿವುಡ್ ನಟಿ ಆಲಿಯಾ ಭಟ್ ವಿರುದ್ಧ ಕೇಸ್...
ಬಾಲಿವುಡ್ ನಟಿ ಆಲಿಯಾ ಭಟ್, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಕೇಸ್ ದಾಖಲಾಗಿದೆ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 27, 2020, 6:10 PM IST