ಶಾರುಖ್ ಖಾನ್ ಯಾ ರಜನಿಕಾಂತ್ ಯಾರು ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟ?
ಶಾರುಖ್ ಖಾನ್ ಮತ್ತು ರಜನಿಕಾಂತ್ ಭಾರತೀಯ ಚಿತ್ರರಂಗದ ಜನಪ್ರಿಯ ನಟರು. ಹಲವು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಈ ಇಬ್ಬರು ಕಲಾವಿದರು ದೇಶದಲ್ಲಿ ಮಾತ್ರವಲ್ಲದೆ ಹೊರದೇಶಗಳಲ್ಲೂ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಶಾರುಖ್ ಖಾನ್ ಮತ್ತು ರಜನಿಕಾಂತ್ ಇವರಲ್ಲಿ ಯಾರು ಹೆಚ್ಚು ಸಂಭಾವನೆ ಪಡೆಯುವ ನಟರು ?

ಶಾರುಖ್ ಖಾನ್ ಮತ್ತು ರಜನಿಕಾಂತ್ ಅವರನ್ನು ತಮ್ಮ ದೇಶದ ಅತ್ಯುತ್ತಮ ಮತ್ತು ಶ್ರೀಮಂತ ನಟರಲ್ಲಿ ಒಬ್ಬರು ಎಂದು ಕರೆಯಲಾಗುತ್ತದೆ.
ಹಾಗಾದರೆ ಇವರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರು ಯಾರು? 2024ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ವರದಿ ಫೋರ್ಬ್ಸ್ ಬಹಿರಂಗ ಪಡಿಸಿದೆ.
ಚಿತ್ರಕ್ಕೆ ಶಾರುಖ್ ಖಾನ್ ಪಡೆಯುವ ಶುಲ್ಕ: ಶಾರುಖ್ ಖಾನ್ ಪ್ರತಿ ಚಿತ್ರಕ್ಕೆ 150 ರಿಂದ 250 ಕೋಟಿ ಚಾರ್ಜ್ ಮಾಡುತ್ತಾರೆ ಎಂದು ವರದಿಯಾಗಿದೆ.
ಚಿತ್ರಕ್ಕೆ ರಜನಿಕಾಂತ್ ಶುಲ್ಕ: ಪ್ರತಿ ಚಿತ್ರಕ್ಕೆ ರಜನಿಕಾಂತ್ ಪಡೆಯುವ ಮೊತ್ತ 150 ರಿಂದ 210 ಕೋಟಿ ರೂ ಎಂದು ಹೇಳಲಾಗುತ್ತದೆ..
ಬಾಲಿವುಡ್‌ನ ಕಿಂಗ್ ಖಾನ್ ಎಂದೇ ಫೇಮಸ್ ಆಗಿರುವ ಶಾರುಖ್ ಖಾನ್ ಅವರ ನೆಟ್ ವರ್ತ್ (New Worth) 6300 ಕೋಟಿ ಎಂದು ಅಂದಾಜಿಸಲಾಗಿದೆ.
ಅದೇ ಸಮಯದಲ್ಲಿ, ಲೆಜೆಂಡ್ ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್ ಅವರ ನಿವ್ವಳ ಮೌಲ್ಯ 430 ಕೋಟಿ ರೂ ಎಂದು ವರದಿಗಳು ಹೇಳುತ್ತವೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.