ಜಾತಿ ಸ್ಟಿಕ್ಕರ್ ಅಂಟಿಸಿದರೆ ವಾಹನವೇ ಸೀಝ್; ಕಟ್ಟು ನಿಟ್ಟಿನ ಆದೇಶ ಜಾರಿ!
First Published Dec 27, 2020, 4:14 PM IST
ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ಭಾರತದಲ್ಲಿ ಸಾರಿಗೆ ನಿಯಮ ಕಠಿಣವಾಗಿದೆ. ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ತೆರಬೇಕಾಗುತ್ತದೆ. ಚಲ್ತಾ ಹೇ ಅನ್ನೋ ಧೋರಣೆ ಇದೀಗ ಇಲ್ಲ. ಎಲ್ಲವೂ ನಿಯಮದ ಚೌಕಟ್ಟಿನೊಳಗೆ ಇರಬೇಕು. ನಂಬರ್ ಪ್ಲೇಟ್ ಮೇಲೆ ಜಾತಿ, ಲವ್ ಯು ಚಿನ್ನು ಸೇರಿದಂತೆ ಹಲವು ರೀತಿಯ ಸ್ಟಿಕ್ಕರ್ ಕಾಣಬಹುದು. ಇಂತಹ ವಾಹನಗಳನ್ನು ಪೊಲೀಸರು ಸೀಝ್ ಮಾಡಲು ಮುಂದಾಗಿದ್ದಾರೆ.

ಮೋಟಾರು ವಾಹನ ನಿಯಮದಲ್ಲಿ ನಂಬರ್ ರಿಜಿಸ್ಟ್ರೇಶನ್ ಪ್ಲೇಟ್ ಕುರಿತು ಸ್ಪಷ್ಟವಾಗಿ ಹೇಳಲಾಗಿದೆ. ನಿಯಮದ ಪ್ರಕಾರ ಸರ್ಕಾರ ಹೇಳಿರುವ IND ನಂಬರ್ ಪ್ಲೇಟ್ ಹಾಕಿಸಬೇಕು.

ಇನ್ನು ನಂಬರ್ ಪ್ಲೇಟ್‌ನಲ್ಲಿ ವಾಹನದ ರಿಜಿಸ್ಟ್ರೇಶನ್ ಹೊರತುಪಡಿಸಿದರೆ ಇನ್ನೇನು ಇರಬಾರದು. ಹೆಚ್ಚಿನವರು ನಂಬರ್ ಪ್ಲೇಟ್‌ನಲ್ಲಿ ಚಿನ್ನು ಲವ್ ಯೂ, ಮಾಮ್ಸ್ ಗಿಫ್ಟ್, ತಮ್ಮ ಜಾತಿ ಸ್ಟಿಕ್ಕರ್ ಅಂಟಿಸಿರುತ್ತಾರೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?