ಕುಡ್ಲದ ಬೆಡಗಿಗೆ ಫುಲ್ ಡಿಮ್ಯಾಂಡ್, ಬಣ ರಾಜಕೀಯಕ್ಕೆ ಸುಸ್ತಾದ ಹೈಕಮಾಂಡ್; ಜ.25ರ ಟಾಪ್ 10 ಸುದ್ದಿ!
ಕರ್ನಾಟಕ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಮುಂದುವರಿದಿದೆ. ದೆಹಲಿಯಲ್ಲಿ ಡೆಕೆ ಶಿವಕುಮಾರ್ ಪರ ಮೂಲ ಕಾಂಗ್ರೆಸ್ಸಿಗರು ಹೋರಾಟ ಆರಂಭಿಸಿದರೆ, ಇತ್ತ ಸಿದ್ದರಾಮಯ್ಯ ಜೊತೆ ಮತ್ತೊಂದು ಬಣ ಮೀಟಿಂಗ್ ಶುರುಮಾಡಿದೆ. ಮಂಗಳೂರು ಬೆಡಗಿ ಪೂಜಾ ಹೆಗ್ಡೆ ಬಾಲಿವುಡ್ ಬಳಿಕ ಟಾಲಿವುಡ್‌ನಲ್ಲಿ ಫುಲ್ ಡಿಮ್ಯಾಂಡ್ ಶುರುವಾಗಿದೆ. ನಿರ್ಭಯಾ ಹತ್ಯಾಚಾರಿಗಳು ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅಂತಿಮ ಅಸ್ತ್ರ ಬಳಸಿದ್ದಾರೆ. ಜನವರಿ 25ರ ಟಾಪ್ 10 ಸುದ್ದಿ ಇಲ್ಲಿವೆ.
ಖತರ್ನಾಕ್ ಕಿರಾತಕರು: ರಾಷ್ಟ್ರಪತಿಗಳ ವಿರುದ್ಧವೇ ಸುಪ್ರೀಂ ಮೊರೆ ಹೋದರು!
ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ, ಗಲ್ಲು ಶಿಕ್ಷೆಯಿಂದ ಪಾರಾಗಳು ದೋಷಿಗಳು ಭಿನ್ನ ವಿಭಿನ್ನ ದಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈಗಾಗಲೇ ದೋಷಿ ಮುಕೇಶ್ ಕ್ಯುರೇಟಿವ್ ಅರ್ಜಿ ಹಾಗೂ ಕ್ಷಮಾದಾನ ಅರ್ಜಿ ವಜಾಗೊಂಡಿದೆ. ಹೀಗಿದ್ದರೂ ಸುಮ್ಮನಾಗದ ಮುಖೇಶ್ ಸದ್ಯ ಕ್ಷಮಾದಾನ ಅರ್ಜಿ ವಜಾಗೊಳಿಸಿದ ರಾಷ್ಟ್ರಪತಿಗಳ ನಿರ್ಧಾರ ಪ್ರಶ್ನಿಸಿ, ತನ್ನ ವಕೀಲ ವೃಂದಾ ಗ್ರೋವರ್ ಮೂಲಕ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾನೆ.
ಅತ್ತ ದೆಹಲಿಯಲ್ಲಿ ಡಿಕೆಶಿ ಬ್ಯಾಟಿಂಗ್: ಇತ್ತ ಬೆಂಗ್ಳೂರಲ್ಲಿ ಸಿದ್ದು ಬಣ ಮೀಟಿಂಗ್
ಕೆಪಿಸಿಸಿ ಅಧ್ಯಕ್ಷ ಆಯ್ಕೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಶುರುವಾಗಿದೆ. ಒಂದು ಕಡೆ ಮೂಲ ಕಾಂಗ್ರೆಸ್ಸಿಗರು ಡಿಕೆಶಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ಸಂಕಷ್ಟ ಶುರುವಾಗಿದೆ.
ಪಾಕ್, ಬಾಂಗ್ಲಾ ಮುಸ್ಲಿಮರನ್ನು ದೇಶದಿಂದ ಹೊರಗಟ್ಟಿ: ಶಿವಸೇನಾ ಅಭಿಮತ
ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶದಿಂದ ನಮ್ಮ ದೇಶಕ್ಕೆ ಬಂದಿರುವ ಮುಸ್ಲಿಮರನ್ನು ಹೊರಗೆ ಹಾಕಲೇಬೇಕು ಎಂದು ಶಿವಸೇನೆ ಹೇಳಿದೆ. ಈ ಮೂಲಕ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ಸೂಚಿಸಿದೆ.
ಮೋದಿ ಹತ್ಯೆ ಸಂಚಿನ ಕೇಸ್ NIA ತೆಕ್ಕೆಗೆ!
ಮಹಾರಾಷ್ಟ್ರದಲ್ಲಿ ನಡೆದ 2018ರ ಭೀಮಾ ಕೋರೆಗಾಂವ್ ಹಿಂಸಾಚಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ನಡೆಸಿದ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಲು ಕೇಂದ್ರ ಗೃಹ ಸಚಿವಾಲಯ ತೀರ್ಮಾನಿಸಿದೆ. ಈವರೆಗೆ ಈ ಪ್ರಕರಣದ ತನಿಖೆಯನ್ನು ಪುಣೆ ಪೊಲೀಸರು ನಡೆಸುತ್ತಿದ್ದರು. ಕೇಂದ್ರದ ನಿರ್ಧಾರದಿಂದ ಇವರು ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಬೇಕಾಗುತ್ತದೆ.
ಬಿಸಿಸಿಐ ಆಯ್ಕೆಗಾರ ಹುದ್ದೆಗೆ ಅರ್ಗಕರ್, ವೆಂಕಿ ಅರ್ಜಿ
ಭಾರತ ತಂಡದ ಮಾಜಿ ವೇಗಿಗಳಾದ ಅಜಿತ್ ಅಗರ್ಕರ್ ಹಾಗೂ ವೆಂಕಟೇಶ್ ಪ್ರಸಾದ್ ಬಿಸಿಸಿಐ ರಾಷ್ಟ್ರೀಯ ಆಯ್ಕೆಗಾರರ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ವಿಕೆಟ್ ಕೀಪರ್ ನಯಾನ್ ಮೋಂಗ್ಯಾ ಸಹ ಸ್ಪರ್ಧೆಯಲ್ಲಿದ್ದಾರೆ.
ಕುಡ್ಲದ ಬೆಡಗಿಗೆ ಟಾಲಿವುಡ್‌ನಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡು...!
ಟಾಲಿವುಡ್- ಬಾಲಿವುಡ್ ಲೋಕದ ಸುಂದರ ಚೆಲುವೆ, ಕರಾವಳಿ ಬೆಡಗಿ ಪೂಜಾ ಹೆಗ್ಡೆ ಈಗ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ. ಅದರಲ್ಲೂ 'ಅಲ ವೈಕುಂಠಪುರಂ ಲೋ' ಹಿಟ್ ನಂತರ ಪೂಜಾಗೆ ಫ್ಯಾನ್ಸ್ ಬಿಗ್ ಡಿಮ್ಯಾಂಡ್ ಇಡುತ್ತಿದ್ದಾರೆ.
ಚಿನ್ನ ಹಾಗೂ ಬೆಳ್ಳಿಗೆ ತಗುಲದ ‘ಶನಿ: ವಾರ’ದಲ್ಲಿ ಮೊದಲ ಬಾರಿಗೆ ಇಳಿಕೆ!
ನಿರಂತರವಾಗಿ ಏರಿಕೆಯತ್ತಲೇ ಮುಖ ಮಾಡಿದ್ದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಶೇ.0.52ರಷ್ಟು ಇಳಿಕೆ ಕಂಡು ಬಂದಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 40,075 ರೂ. ಆಗಿದೆ.
ನೆನಪಿರಲಿ ಪ್ರೇಮ್ ಫ್ಯಾಮಿಲಿ ಇದು, ತಂದೆ, ನಡೆದು ಬಂದ ದಾರಿ.
2004ರಲ್ಲಿ 'ಪ್ರಾಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರೇಮ್ ಕುಮಾರ್ ಕ್ಯೂಟ್ ಫ್ಯಾಮಿಲಿ ನೋಡಿದ್ದೀರಾ? ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅವರು ಶೇರ್ ಮಾಡಿಕೊಂಡಿರುವ ಅವರ ಫೋಟೋಗಳು ಪ್ರೇಮ್ ಹೆಜ್ಜೆ ಗುರುತು ಹೇಳುತ್ತಿವೆ.
ಅತ್ಯಂತ ದುಬಾರಿ ರೋಲ್ಸ್ ರಾಯ್ಸ್ ಕಾರು ಭಾರತದಲ್ಲಿ ಬಿಡುಗಡೆ!
ವಿಶ್ವದ ಅತ್ಯಂತ ದುಬಾರಿ ಕಾರು ಎಂದೇ ಗುರುತಿಸಿಕೊಂಡಿರುವ ರೋಲ್ಸ್ ರಾಯ್ಸ್ ಇದೀಗ ಗರಿಷ್ಠ ಬೆಲೆಯ ಕಲ್ಲಿನಾನ್ ಬ್ಯಾಡ್ಜ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು ವಿಶ್ವದ ಅತ್ಯಂತ ದುಬಾರಿ ಕಾರು. ಇದೀಗ ಅಪ್‌ಗ್ರೇಡ್ ವರ್ಶನ್ ಕಲ್ಲಿನಾನ್ ಬ್ಯಾಡ್ಜ್ ಕಾರು ಮತ್ತಷ್ಟು ದುಬಾರಿಯಾಗಿದೆ.
ಬೆಂಗಳೂರಲ್ಲಿ ಬಜೆಟ್ ಫ್ರೆಂಡ್ಲಿ ವೀಕೆಂಡ್: ಇಷ್ಟೆಲ್ಲಾ ಮಾಡ್ಬಹುದಾ?
ಗ್ರೀನ್ ಸಿಟಿ ಆಗಿದ್ದ ಬೆಂಗಳೂರು ಈಗಾ ಐಟಿ ಸಿಟಿಯೂ ಹೌದು. ಫರ್ಸ್ಟ್ ಟೈಂ ಬೆಂಗಳೂರಿಗೆ ಬಂದವರಿಗಂತೂ ಸ್ವರ್ಗ. ಬೆಳಗ್ಗೆ 9ರಿದಂ ಸಂಜೆ 5ರ ತನಕ ನಾನ್ ಸ್ಟಾಪ್ ಕೆಲಸ ಮಾಡುತ್ತಾ, ವೀಕೆಂಡ್‌ನ ಡಿಫರೆಂಟ್ ಆಗಿ ಕಳೆಯಬೇಕು ಎಂದು ಕಾಯುವವರಿಗೆ ಕಡಿಮೆ ಬಜೆಟ್‌ನ ಅಮೇಜಿಂಗ್ ವೀಕೆಂಟ್ ಪ್ಲ್ಯಾನ್ ವಿವರ ಈ ಸ್ಟೋರಿಯಲ್ಲಿದೆ.