ಮೋದಿ ಹತ್ಯೆ ಸಂಚಿನ ಕೇಸ್ NIA ತೆಕ್ಕೆಗೆ!
ಮೋದಿ ಹತ್ಯೆ ಸಂಚಿನ ಕೇಸ್ ಎನ್‌ಐಎ ತೆಕ್ಕೆಗೆ| ತನಿಖೆ ಎನ್‌ಐಎಗೆ ನೀಡಲು ಕೇಂದ್ರ ಗೃಹ ಸಚಿವಾಲಯ ನಿರ್ಧಾರ
ನವದೆಹಲಿ[ಜ.25] : ಮಹಾರಾಷ್ಟ್ರದಲ್ಲಿ ನಡೆದ 2018ರ ಭೀಮಾ ಕೋರೆಗಾಂವ್ ಹಿಂಸಾಚಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ನಡೆಸಿದ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಲು ಕೇಂದ್ರ ಗೃಹ ಸಚಿವಾಲಯ ತೀರ್ಮಾನಿಸಿದೆ. ಈವರೆಗೆ ಈ ಪ್ರಕರಣದ ತನಿಖೆಯನ್ನು ಪುಣೆ ಪೊಲೀಸರು ನಡೆಸುತ್ತಿದ್ದರು. ಕೇಂದ್ರದ ನಿರ್ಧಾರದಿಂದ ಇವರು ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಬೇಕಾಗುತ್ತದೆ.
ಮಂಗಳೂರು ಬಾಂಬ್: ಉಡುಪಿಯಲ್ಲೂ ಹೈ ಅಲರ್ಟ್
ಪ್ರಕರಣದ ತನಿಖೆಯನ್ನು ಪುಣೆ ಪೊಲೀಸರಿಂದ ಎಸ್‌ಐಟಿಗೆ ಹಸ್ತಾಂತರಿಸಿ ಕೇಸು ಮುಚ್ಚಿಹಾಕಲು ಮಹಾರಾಷ್ಟ್ರದ ಈಗಿನ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ ಎಂಬ ಆರೋಪಗಳ ನಡುವೆಯೇ ತನಿಖೆಯು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗೆ ಹಸ್ತಾಂತರವಾಗಿದೆ. ಇದು ಮಹಾರಾಷ್ಟ್ರ ಸರ್ಕಾರಕ್ಕಾದ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಮಂಗಳೂರು ಬಾಂಬ್: ಉಡುಪಿಯಲ್ಲೂ ಹೈ ಅಲರ್ಟ್
ಭೀಮಾ ಕೋರೆಗಾಂವ್ ಗಲಭೆ ಸಂಭವಿಸುವ 1 ದಿನ ಮುಂಚೆ ಎಲ್ಗಾರ್ ಪರಿಷತ್ ಎಂಬ ಸಂಘಟನೆಯ ಮುಖಂಡರು ಇಲ್ಲಿ ಭಾಷಣ ಮಾಡಿದ್ದರು. ಇವರ ಪ್ರಚೋದನಕಾರಿ ಭಾಷಣವೇ ಹಿಂಸೆಗೆ ಕಾರಣ ಎನ್ನಲಾಗಿತ್ತು. ಆಗ ಪರಿಷತ್‌ನ 10 ಸದಸ್ಯರ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದಾಗ ಅವರಿಗೂ ನಕ್ಸಲೀಯರಿಗೂ ಸಂಬಂಧವಿದೆ ಎಂದು ಕಂಡುಬಂದಿತ್ತು. ಅಲ್ಲದೆ, ದಿಲ್ಲಿಯಲ್ಲಿ ಪರಿಷತ್‌ನ ನಾಯಕ ರೋನಾ ವಿಲ್ಸನ್ ಅವರ ಮನೆ ಮೇಲೆ ದಾಳಿ ಮಾಡಿದಾಗ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದ ಪತ್ರ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ದೇಶವ್ಯಾಪಿ ಮಹತ್ವ ದೊರಕಿತ್ತು.
ಜನವರಿ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ