ಟಾಲಿವುಡ್- ಬಾಲಿವುಡ್ ಲೋಕದ ಸುಂದರ ಚೆಲುವೆ, ಕರಾವಳಿ ಬೆಡಗಿ ಪೂಜಾ ಹೆಗ್ಡೆ ಈಗ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ. ಅದರಲ್ಲೂ 'ಅಲ ವೈಕುಂಠಪುರಂ ಲೋ' ಹಿಟ್ ನಂತರ ಪೂಜಾಗೆ ಫ್ಯಾನ್ಸ್‌ ಬಿಗ್ ಡಿಮ್ಯಾಂಡ್‌ ಇಡುತ್ತಿದ್ದಾರೆ.

ನೀರಲ್ಲಿ ಮೀನಾಗಿ ಬಿಕಿನಿ ತೊಟ್ಟ ನಟಿ!

ಜನವರಿ 12ರಂದು ರಾಜ್ಯಾದ್ಯಂತ ತೆರೆಕಂಡ 'ಅಲ ವೈಕುಂಠಪುರಂ' ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದ 'ನೀ ಕಲುನಿ..' ಹಾಡಿನಲ್ಲಿ ಪೂಜಾ ಡ್ಯಾನ್ಸ್‌ಗೆ ಫ್ಯಾನ್ಸ್‌ ಕ್ಲೀನ್‌ ಬೋಲ್ಡ್‌ ಆಗಿದ್ದಾರೆ. ಚಿತ್ರದ ಪ್ರಚಾರ ಕಾರ್ಯಕ್ರಮಕ್ಕೆ ಹೋದಾಗ ಅಭಿಮಾನಿಗಳು ಪೂಜಾಗೆ ಈ ಹಾಡು ಹಾಡುವಂತೆ ಡಿಮ್ಯಾಂಡ್‌ ಮಾಡುತ್ತಾರೆ. ಹೇಳದಿದ್ದರೆ ಕಾಡಿಸಿ, ಕಾಡಿಸಿ ಹಾಡಿಸುತ್ತಾರಂತೆ. 

ದಿಢೀರನೇ ಸಂಭಾವನೆ ಹೆಚ್ಚಿಸಿಕೊಂಡ 'ಮಹರ್ಷಿ' ನಟಿ!ಕೋಟಿನೂ ಕಮ್ಮಿ ಆಯ್ತಾ?

ಇತ್ತೀಚೆಗೆ ಮಂಗಳೂರಿನ ಈ ಸುಂದರಿಯನ್ನು ನೋಡಲು ಅಭಿಮಾನಿಯೊಬ್ಬ 5 ದಿನಗಳ ಕಾಲ ರಸ್ತೆಯಲ್ಲಿಯೇ ಮಲಗಿ, ಮೀಟ್ ಆಗಲು ಯತ್ನಿಸಿದ್ದ. ವಿಚಾರ ತಿಳಿಯುತ್ತಿದ್ದಂತೆ ಪೂಜಾ ತಕ್ಷಣವೇ ಭೇಟಿ ಮಾಡಿ ಮಾತನಾಡಿಸಿದ್ದು, ದೊಡ್ಡ ಸುದ್ದಿಯಾಗಿತ್ತು. ಇನ್ನು ಪೂಜಾ ಸಂಭಾವನೆ ಕೇಳಬೇಕೇ? ಅಲ್ಲು ಅರ್ಜುನ್‌ಗೆ ಜೋಡಿಯಾಗಿ ನಟಿಸಲು ಅವಕಾಶ ಗಿಟ್ಟಿಸಿಕೊಂಡಾಗಿನಿಂದ ಇವರ ಸಂಭಾವನೆ ಗಗನ ಮುಟ್ಟಿದೆ ಎಂದು ಟಾಲಿವುಡ್‌ ನಿರ್ದೇಶಕರು ಹೇಳುತ್ತಾರೆ. 'ಅಲ ವೈಕುಂಠಪುರಂ' ಚಿತ್ರಕ್ಕೆ ಪೂಜಾ 1 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಇದೆ. ಮುಂದಿನ ಚಿತ್ರಗಳಿಗೆ 2 ಕೋಟಿ ಕೇಳುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಒಟ್ಟಿನಲ್ಲಿ ಮೊಹೆಂಜದಾರೋ ನಟಿಗೆ ಇದೀಗ ಎಲ್ಲೆಡೆ ಎಲ್ಲಿಲ್ಲದ ಡಿಮ್ಯಾಂಡ್. 

2.5 ಕೋಟಿ ಪಡೆಯೋ ಈ ನಟಿ ನೋಡಲು 5 ದಿನ ರಸ್ತೇಲಿ ಮಲಗಿದ ಫ್ಯಾನ್!

ಜನವರಿ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ