Asianet Suvarna News Asianet Suvarna News

ಬಿಸಿಸಿಐ ಆಯ್ಕೆಗಾರ ಹುದ್ದೆಗೆ ಅರ್ಗಕರ್‌, ವೆಂಕಿ ಅರ್ಜಿ

ಬಿಸಿಸಿಐ ರಾಷ್ಟ್ರೀಯ ಆಯ್ಕೆಗಾರರ ಹುದ್ದೆಗೆ ಸಿಕ್ಕಾಪಟ್ಟೆ ಪೈಪೋಟಿ ಏರ್ಪಟ್ಟಿದೆ. ಇದೀಗ ಟೀಂ ಇಂಡಿಯಾ ಮಾಜಿ ವೇಗಿಗಳಾದ ಅಜಿತ್ ಅಗರ್ಕರ್, ವೆಂಕಟೇಶ್ ಪ್ರಸಾದ್ ಸಹಾ ಒಂದು ಕೈ ನೋಡಲು ಮುಂದಾಗಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

Former pacer Ajit Agarkar Venkatesh Prasad applies for BCCI chief selectors job
Author
New Delhi, First Published Jan 25, 2020, 10:48 AM IST
  • Facebook
  • Twitter
  • Whatsapp

ನವದೆಹಲಿ(ಜ.25): ಭಾರತ ತಂಡದ ಮಾಜಿ ವೇಗಿಗಳಾದ ಅಜಿತ್‌ ಅಗರ್ಕರ್‌ ಹಾಗೂ ವೆಂಕಟೇಶ್‌ ಪ್ರಸಾದ್‌ ಬಿಸಿಸಿಐ ರಾಷ್ಟ್ರೀಯ ಆಯ್ಕೆಗಾರರ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ವಿಕೆಟ್‌ ಕೀಪರ್‌ ನಯಾನ್‌ ಮೋಂಗ್ಯಾ ಸಹ ಸ್ಪರ್ಧೆಯಲ್ಲಿದ್ದಾರೆ.

ಕೊಹ್ಲಿ ಬಾಯ್ಸ್‌ಗೆ ಸಿಗೋ ಆದಾಯ ನಿರೀಕ್ಷಿಸುವುದು ತಪ್ಪು; ಸ್ಮೃತಿ ಮಂಧನಾ

ಅಗರ್ಕರ್‌ ಆಯ್ಕೆಗಾರನ ಹುದ್ದೆ ಅಲಂಕರಿಸಲು ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಅನುಭವ ಹೊಂದಿರುವ ಅವರು, ಆಯ್ಕೆಗಾರನಾಗಿ ಅನುಭವ ಸಹ ಹೊಂದಿದ್ದಾರೆ. ಅಗರ್ಕರ್‌ ಮುಂಬೈ ತಂಡದ ಆಯ್ಕೆಗಾರರಾಗಿದ್ದರು.

ಬಿಸಿಸಿಐ ಆಯ್ಕೆಗಾರ ಹುದ್ದೆಗೆ ಅರ್ಜಿ ಸಲ್ಲಿಸಿದ L ಶಿವರಾಮಕೃಷ್ಣನ್‌

ನ್ಯಾ.ಲೋಧಾ ಸಮಿತಿ ಶಿಫಾರಸಿನ ಪ್ರಕಾರ ಕಿರಿಯ ಇಲ್ಲವೇ ಹಿರಿಯ ತಂಡದ ಆಯ್ಕೆಗಾರರಾಗಿ ಕೇವಲ 4 ವರ್ಷ ಕಾರ್ಯನಿರ್ವಹಿಸಲು ಅವಕಾಶವಿದೆ. ಕಿರಿಯರ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ವೆಂಕಟೇಶ್‌ ಪ್ರಸಾದ್‌ಗೆ ಒಂದೂವರೆ ವರ್ಷ ಮಾತ್ರ ಬಾಕಿ ಇರುವ ಕಾರಣ, ಅವರ ನೇಮಕ ಅನುಮಾನ ಎನ್ನಲಾಗಿದೆ.

ಅಗರ್ಕರ್ ಮಾತ್ರವಲ್ಲದೇ ಲಕ್ಷ್ಮಣ್ ಶಿವರಾಮಕೃಷ್ಣನ್ ಸಹಾ ಬಿಸಿಸಿಐ ಆಯ್ಕೆಗಾರರ ಹುದ್ದೆಯ ಪ್ರಬಲ ಸ್ಪರ್ಧಿಯಾಗಿದ್ದಾರೆ. ಒಟ್ಟಿನಲ್ಲಿ ಯಾರು ಎಂ.ಎಸ್‌.ಕೆ. ಪ್ರಸಾದ್ ಸ್ಥಾನವನ್ನು ತುಂಬಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

 

ಜನವರಿ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios