ಜನವಾಡ ರಸ್ತೆಯಲ್ಲಿರುವ ಕೃಷಿಹೊಂಡದಲ್ಲಿ ಈಜಾಡಲು ಹೋಗಿ ನೀರುಪಾಲಾಗಿದ್ದಾರೆ.

ಬೀದರ್(ಸೆ.29): ದಸರಾ ರಜೆ ನಿಮಿತ್ತ ಹಳ್ಳಿಗೆ ಬಂದ ಇಬ್ಬರು ಬಾಲಕರು ಕೃಷಿ ಹೊಂಡದಲ್ಲಿ ಈಜಾಡಲು ಹೋಗಿ ನೀರು ಪಾಲಾದ ಘಟನೆ ಬೀದರ್ ತಾಲೂಕಿನ ಸಂಗೊಳಗಿ ಗ್ರಾಮದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಜುನಾಥ(10) ಮತ್ತು ಅಭಿಷೇಕ(12) ನೀರುಪಾಲಾದ ದುರ್ದೈವಿಗಳು. ನಿನ್ನೆ ಸಂಜೆ ಮನೆಯಿಂದ ಹೊರ ಹೋದ ಈ ಬಾಲಕರು ನೇರವಾಗಿ ಜನವಾಡ ರಸ್ತೆಯಲ್ಲಿರುವ ಕೃಷಿಹೊಂಡದಲ್ಲಿ ಈಜಾಡಲು ಹೋಗಿ ನೀರುಪಾಲಾಗಿದ್ದಾರೆ. ಮೃತ ಬಾಲಕರಿಬ್ಬರು ಕೃಷಿ ಇಲಾಖೆ ಅಧಿಕಾರಿ ಬಸವರಾಜ ಬಿರಾದರ ಅವರ ಪುತ್ರರು.

ಘಟನಾ ಸ್ಥಳಕ್ಕೆ ಬೀದರ್ ಡಿವೈಎಸ್ಫಿ ಹುನಚಿಕಟ್ಟೆ ಭೇಟಿ ನೀಡಿದ್ದು, ಜನವಾಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.