ಹರಾರೆ(ಅ.29): A friend in need is a friend indeed ಅಂತಾರೆ. ಗೆಳೆತನವೇ ಅಂತದ್ದು. ಒಬ್ಬ ಗೆಳೆಯನೋ, ಗೆಳತಿಯೋ ಸಂಕಷ್ಟದಲ್ಲಿದ್ದರೆ ಗೆಳಯನೋ, ಗೆಳತಿಯೋ ನೆರವಿಗೆ ಬರುವುದನ್ನೇ ಗೆಳತನ ಎನ್ನುವುದು.

ಹುನಗುಂದದ ಹಿರೇಮಾಗಿಯಲ್ಲಿ ಮೊಸಳೆ ಪ್ರತ್ಯಕ್ಷ: ಭಯಭೀತರಾದ ಜನತೆ

ಅದರಂತೆ ಕೇವಲ 11 ವರ್ಷದ ಬಾಲಕಿಯೋರ್ವಳು ತನ್ನ ಗೆಳತಿಯನ್ನು ನುಂಗಲಿದ್ದ ಮೊಸಳೆ ಮೇಲೆ ಎರಗಿ ಅದರ ಕಣ್ಣನ್ನು ತಿವಿದು ಓಡಿಸಿದ ಘಟನೆ ಜಿಂಬಾಬ್ವೆಯ ಹ್ವಾಂಗೆಯಲ್ಲಿ ನಡೆದಿದೆ.

ಯಾದಗಿರಿಯಲ್ಲಿ ನಿರ್ಮಾಣವಾಗಲಿದೆಯಾ ಮೊಸಳೆ ಪಾರ್ಕ್?

ಲಾಟೋಯಾ ಮುವಾನಿ ಎಂಬ ಬಾಲಿಕಿ ಮೇಲೆ ಮೊಸಳೆಯೊಂದು ದಾಳಿ ಮಾಡಿ, ಆಕೆಯನ್ನು ನುಂಗಲು ಹವಣಿಸುತ್ತಿತ್ತು. ಈ ವೇಳೆ 11 ವರ್ಷದ ಬಾಲಕಿ ರೆಬೆಕಾ ಮುಂಕ್ವಾಂಬ್ವೆ ಮೊಸಳೆ ಮೇಲೆರಗಿ ಅದರ ಕಣ್ಣಿಗೆ ತಿವಿದು ತನ್ನ ಗೆಳತಿಯನ್ನು ರಕ್ಷಿಸಿದ್ದಾಳೆ.

ಹೆಬ್ಬಾವು-ಮೊಸಳೆ ರಣಭೀಕರ ಹೋರಾಟ, ಗೆದ್ದು ಬೀಗಿದ್ದು ಯಾರು?

ಇನ್ನು ಗೆಳತಿ ಲಾಟೋಯಾಳನ್ನು ರಕ್ಷಿಸಲು ರೆಬೆಕಾ ತೋರಿದ ಧೈರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಹ್ವಾಂಗೆ ಗ್ರಾಮಸ್ಥರು ಆಕೆಯನ್ನು ಸನ್ಮಾನಿಸಿದ್ದಾರೆ.

ವಯಸ್ಸು 60, ತೂಕ 600ಕೆಜಿ, ಸಿಕ್ಕಿದ್ದು 8 ವಷಗಳ ಬಳಿಕ!