ವಯಸ್ಸು 60, ತೂಕ 600ಕೆಜಿ, ಸಿಕ್ಕಿದ್ದು 8 ವಷಗಳ ಬಳಿಕ!

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 10, Jul 2018, 3:33 PM IST
600 Kg Australian Monster Crocodile Caught After Eight-Year Hunt
Highlights

ಆಸ್ಟ್ರೆಲೀಯಾದಲ್ಲಿ ಸೆರೆಯಾಯ್ತು ದೈತ್ಯ ಮೊಸಳೆ

ವಸ್ಸು 60, ತೂಕ 600 ಕೆಜಿ, ಎತ್ತರ 15.4 ಅಡಿ

ಸತತ 8 ವರ್ಷಗಳ ಪ್ರಯತ್ನಕ್ಕೆ ಸಿಕ್ಕ ಜಯ

ಸಿಡ್ನಿ(ಜು.10): 8 ವರ್ಷಗಳ ಸತತ ಪ್ರಯತ್ನದಿಂದ ವಿಶ್ವದ ದೈತ್ಯ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಸಾಗರ ತಜ್ಞರು ಯಶಸ್ವಿಯಾಗಿದ್ದಾರೆ. ಸುಮಾರು 600 ಕೆಜಿ ತೂಕದ ಈ ದೈತ್ಯ ಮೊಸಳೆ 2010 ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು.

ಸುಮಾರು 15.4 ಅಡಿ ಎತ್ತರ ಇರುವ ಈ ಮೊಸಳೆಗೆ 60 ವರ್ಷ ಆಯಸ್ಸು ಎನ್ನಲಾಗಿದ್ದು, ಇದನ್ನು ಹಿಡಿಯಲು ಸತತ 8 ವರ್ಷಗಳ ಕಾಲ ಸತತ ಪ್ರಯತ್ನ ನಡೆಸಲಾಗಿತ್ತು. ಸದ್ಯ ಈ ಮೊಸಳೆಯನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲಾಗಿದ್ದು, ಈ ಮೊಸಳೆಯ ಅಧ್ಯಯನ ನಡೆಸಲಾಗುವುದು ಎಂದು ಸಾಗರತಜ್ಞ ಟ್ರೇಸಿ ಡಲ್ಡಿಗ್ ಹೇಳಿದ್ದಾರೆ.

ಆಸ್ಟ್ರೆಲೀಯಾದಲ್ಲಿ ಮೊಸಳೆಯನ್ನು ವನ್ಯಮೃಗ ಸುರಕ್ಷಿತ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಕಳೆದ ವರ್ಷ ನದಿಯಲ್ಲಿ ಮಹಿಳೆಯನ್ನು ಮೊಸಳೆಯೊಂದು ಕೊಂದ ಬಳಿಕ, ಮೊಸಳೆಗಳ ಸಂಖ್ಯೆ ಕಡಿಮೆ ಮಾಡಲು ಜನರು ಆಗ್ರಹಿಸುತ್ತಿದ್ದಾರೆ.

loader