ಸಿಡ್ನಿ[ಜು. 13] ಅದೊಂದು ರಣಭೀಕರ ಹೋರಾಟ.. ಯುದ್ಧ ಶುರುವಾಗಿದೆ. ಆಸ್ಟ್ರೇಲಿಯಾದ ಮೊಸಳೆ ಮತ್ತು ಹೆಬ್ಬಾವು ಎಂದು ನಾವು ಕರೆಯಬಹುದಾದ ಆಲಿವ್ ಪೈಥಾನ್  ಕಾದಾಟ ನಡೆಸಿವೆ.

ಹೋರಾಟದಲ್ಲಿ ಅಂತಿಮವಾಗಿ ಹೆಬ್ಬಾವೇ ಗೆದ್ದು ಬೀಗಿದೆ. ಈ ಹೋರಾಟದ ಚಿತ್ರಗಳು ಆಸ್ಟ್ರೇಲಿಯಾ ಮಾತ್ರವಲ್ಲ ಇಡೀ ಪ್ರಪಂಚದಾದ್ಯಂತ ವೈರಲ್ ಆಗಿದೆ.

ಈ ಚಿತ್ರಗಳನ್ನು ಕ್ವೀನ್ಸ್ ಲ್ಯಾಂಡ್ ಮೌಂಟ್ ಇಸಾದಲ್ಲಿ ಕ್ಲಿಕ್ಕಿಸಿದ್ದು, ಆಸ್ಟ್ರೇಲಿಯಾದ ಜಿ. ಜಿ ವೈಲ್ಡ್ ಲೈಫ್ ರೆಸ್ಕ್ಯೂ ಸಂಘಟನೆ ಅದನ್ನು ಆನ್ ಲೈನ್ ನಲ್ಲಿ ಶೇರ್ ಮಾಡಿದೆ. ಶೇರ್ ಮಾಡಿದಾಗಿನಿಂದಲೂ ಬೇರೆಯವರಿಂದ ಶೇರ್ ಆಗುತ್ತಲೇ ಇದೆ.

ಅಳಿವಿನಂಚಿನಲ್ಲಿರುವ ಗಿಬ್ಬನ್‌ಗೆ ವಾಸಸ್ಥಾನ ಉಡುಗೊರೆ ನೀಡುತ್ತಿರುವ ಮೇಘ

ಆಸ್ಟ್ರೇಲಿಯಾದ ಎರಡನೇ ಅತ್ಯಂತ ದೊಡ್ಡ ಹಾಗೂ ಪಶ್ಚಿಮ ಆಸ್ಟ್ರೇಲಿಯಾದ ಅತ್ಯಂತ ದೊಡ್ಡ ಹಾವು (ಆಲಿವ್ ಪೈಥಾನ್) ಆಸ್ಟ್ರೇಲಿಯಾದ ಮೊಸಳೆ (ಕ್ರೊಕೊಡೈಲಸ್ ಜಾನ್‍ಸ್ಟೋನಿ) ನುಂಗಿ ಹಾಕಿದೆ. ಜೂನ್ 1 ರಂದೇ ಹಾಕಿದ್ದ ಚಿತ್ರಗಳು ಈಗ ಏಕಾಏಕಿ ಪ್ರಚಾರ ಪಡೆದುಕೊಳ್ಳುತ್ತಿದ್ದು ಹೋರಾಟದ ಘಟನಾವಳಿಗಳನ್ನು ನೀವು ನೋಡಿಕೊಂಡು ಬನ್ನಿ..