ನಮಿತ್ ಮಲ್ಹೋತ್ರಾ ಅವರ 'ಪ್ರೈಮ್ ಫೋಕಸ್ ಸ್ಟುಡಿಯೋಸ್', 8 ಬಾರಿ ಆಸ್ಕರ್ ಪ್ರಶಸ್ತಿ ವಿಜೇತ 'DNEG' ಸಂಸ್ಥೆ ಹಾಗೂ ಯಶ್ ಅವರ 'ಮಾನ್ಸ್‌ಟರ್ ಮೈಂಡ್ ಕ್ರಿಯೇಷನ್ಸ್' ಜಂಟಿಯಾಗಿ ಈ ಬಿಗ್ ಬಜೆಟ್ ಸಿನಿಮಾವನ್ನು ನಿರ್ಮಿಸುತ್ತಿವೆ. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ಈ ದೃಶ್ಯಕಾವ್ಯವು ವಿಶ್ವದಾದ್ಯಂತ IMAX ರೂಪದಲ್ಲಿ ಬಿಡುಗಡೆಯಾಗಲಿದೆ.

Worldwide Developement after Ramayana Yash official poster Release ‘ರಾಮಾಯಣ’ ಚಿತ್ರದಲ್ಲಿನ ರಾಕಿಂಗ್ ಸ್ಟಾರ್ ಯಶ್ ‘ರಾವಣ’ನ ಖಡಕ್ ಲುಕ್ ಬಿಡುಗಡೆ ನೋಡಿ ಜಗತ್ತು ಹೇಳುತ್ತಿರೋದೇನು?

ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಬೃಹತ್ ದೃಶ್ಯಕಾವ್ಯ ‘ರಾಮಾಯಣ’ ಸಿನಿಮಾ. ಇದೀಗ ಇದೇ ಚಿತ್ರತಂಡ ರಾಕಿಂಗ್ ಸ್ಟಾರ್ ಯಶ್ ಅವರ 'ರಾವಣ' ಪಾತ್ರದ ಮೊದಲ ಅಧಿಕೃತ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್‌ನಲ್ಲಿ ಯಶ್ ಅತ್ಯಂತ ಗಂಭೀರ ಹಾಗೂ ಶಕ್ತಿಯುತ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಚಿತ್ರದ ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ಯಶ್ ಅವರ ರಾವಣನ ಪಾತ್ರವು ಅಪಾರ ಕುತೂಹಲ ಮೂಡಿಸಿತ್ತು. ತಮ್ಮ ಮೊದಲ ನೋಟದಲ್ಲೇ ತೀವ್ರತೆ ಹಾಗೂ ಪ್ರಭಾವಶಾಲಿ ವ್ಯಕ್ತಿತ್ವದಿಂದ ಪ್ರೇಕ್ಷಕರ ಗಮನ ಸೆಳೆದಿದ್ದ ಯಶ್, ಇದೀಗ ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ರಾಜ ಗಾಂಭೀರ್ಯದೊಂದಿಗೆ ವಿಜೃಂಭಿಸಿದ್ದಾರೆ.

ಹೊಳೆಯುವ ಚಿನ್ನದ ಕಿರೀಟ, ಮುತ್ತಿನ ಹಾರಗಳು

ಹೊಸ ಪೋಸ್ಟರ್‌ನಲ್ಲಿ ಯಶ್ ರತ್ನಖಚಿತವಾದ ಹೊಳೆಯುವ ಚಿನ್ನದ ಕಿರೀಟ, ಮುತ್ತಿನ ಹಾರಗಳು ಹಾಗೂ ಭಾರವಾದ ಚಿನ್ನದ ಬಳೆಗಳನ್ನು ಧರಿಸಿ ಕಂಗೊಳಿಸುತ್ತಿದ್ದಾರೆ. ಅವರ ತೀವ್ರ ನೋಟ ಮತ್ತು ಗಂಭೀರ ಉಪಸ್ಥಿತಿಯು ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಲಂಕಾಧಿಪತಿ ರಾವಣ ಮಹಾನ್ ಜ್ಞಾನಿ, ಅತ್ಯಂತ ಶಕ್ತಿಶಾಲಿ ರಾಜ ಹಾಗೂ ಅಪ್ರತಿಮ ಆಡಳಿತಗಾರ. ಆ ಪಾತ್ರದ ಗಾಂಭೀರ್ಯ ಮತ್ತು ಗತ್ತುಗಳನ್ನು ಯಶ್ ಅತ್ಯಂತ ನಿಖರವಾಗಿ ತಮ್ಮ ಅಭಿನಯ ಹಾಗೂ ಲುಕ್‌ನಲ್ಲಿ ತಂದಿದ್ದಾರೆ. ಈ ಪೋಸ್ಟರ್ ರಾವಣನ ಪಾತ್ರವನ್ನು ಬೆಳ್ಳಿತೆರೆಯ ಮೇಲೆ ಎಷ್ಟು ಅದ್ಧೂರಿಯಾಗಿ ಹಾಗೂ ಬೃಹತ್ ಪ್ರಮಾಣದಲ್ಲಿ ಕಲ್ಪಿಸಲಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ

ಮಹಾಕಾವ್ಯ ರಾಮಾಯಣದ ಭವ್ಯತೆ, ಭಾವನೆಗಳು ಹಾಗೂ ಕಾಲಾತೀತ ಪಾತ್ರಗಳನ್ನು ಬೆಳ್ಳಿತೆರೆಯ ಮೇಲೆ ವಿಶಾಲ ದೃಶ್ಯಕಾವ್ಯವಾಗಿ ತರಲು ನಿರ್ದೇಶಕ ನಿತೀಶ್ ತಿವಾರಿ ಶ್ರಮಿಸುತ್ತಿದ್ದಾರೆ. ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್, ಹನುಮಂತನಾಗಿ ಸನ್ನಿ ಡಿಯೋಲ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಅಭಿನಯಿಸುತ್ತಿದ್ದಾರೆ. ಈ ಚಿತ್ರವು ಭಾರತದಲ್ಲಿ ಹಿಂದಿ, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ನಮಿತ್ ಮಲ್ಹೋತ್ರಾ ಅವರ 'ಪ್ರೈಮ್ ಫೋಕಸ್ ಸ್ಟುಡಿಯೋಸ್', 8 ಬಾರಿ ಆಸ್ಕರ್ ಪ್ರಶಸ್ತಿ ವಿಜೇತ 'DNEG' ಸಂಸ್ಥೆ ಹಾಗೂ ಯಶ್ ಅವರ 'ಮಾನ್ಸ್‌ಟರ್ ಮೈಂಡ್ ಕ್ರಿಯೇಷನ್ಸ್' ಜಂಟಿಯಾಗಿ ಈ ಬಿಗ್ ಬಜೆಟ್ ಸಿನಿಮಾವನ್ನು ನಿರ್ಮಿಸುತ್ತಿವೆ. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ಈ ದೃಶ್ಯಕಾವ್ಯವು ವಿಶ್ವದಾದ್ಯಂತ IMAX ರೂಪದಲ್ಲಿ ಬಿಡುಗಡೆಯಾಗಲಿದ್ದು, 'ಭಾಗ 1' ಮುಂಬರುವ 2026ರ ದೀಪಾವಳಿಗೆ ಹಾಗೂ 'ಭಾಗ 2' 2027ರ ದೀಪಾವಳಿಗೆ ಜಾಗತಿಕವಾಗಿ ತೆರೆಕಾಣಲಿದೆ.