Bail movie: ಅಕ್ಟೋಬರ್ 2 ರಂದು ಶಿವಣ್ಣ ಅಭಿನಯದ ಬೇಲ್ ರಿಲೀಸ್ ಆಗ್ತಿದೆ. ಸಿನಿಮಾದ ಕಾರ್ಯಕ್ರಮ ಒಂದರಲ್ಲಿ ಶಿವಣ್ಣನ ಬಗ್ಗೆ ಲೂಸ್ ಮಾದಾ ಯೋಗೇಶ್ ಅಚ್ಚರಿಯ ಹೇಳಿಕೆಯನ್ನ ನೀಡಿದ್ದಾರೆ. ಏನು ಹೇಳಿದರು? ಸ್ಟೋರಿ ಓದಿ.

ಅಕ್ಟೋಬರ್ 2 ರಂದು ಶಿವಣ್ಣ ಅಭಿನಯದ ಬೇಲ್ (Bail movie) ರಿಲೀಸ್ ಆಗ್ತಿದೆ. ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ನಲ್ಲಿ ನಟ ಲೂಸ್ ಮಾದಾ ಯೋಗಿ ಆಡಿರುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಬೇಲ್ ಸಿನಿಮಾದಲ್ಲಿ ನಟ ಲೂಸ್ ಮಾದ ಖಡಕ್ ವಿಲನ್ ಆಗಿ ಅಬ್ಬರಿಸಿದ್ದಾರೆ.

ಶಿವಣ್ಣನ ಬಗ್ಗೆ ಯೋಗಿ ಮಾತನ್ನಾಡಿ.. ಬೇಲ್ ಸಿನಿಮಾ ನನಗೆ ತುಂಬಾ ಸ್ಪೆಷಲ್. ಹಿಂದೆ ನಾನು ಅಣ್ಣನ (ಶಿವಣ್ಣ) ಜೊತೆ ಲೀಡರ್ ಅನ್ನೋ ಚಿತ್ರದಲ್ಲಿ ನಟಿಸಿದ್ದೆ. ಆ ಸಿನಿಮಾದಲ್ಲಿ ಶಿವಣ್ಣನ ಜೊತೆ ಹೆಚ್ಚು ಸ್ಕ್ರೀನ್ ಶೇರ್ ಮಾಡಲಾಗಲಿಲ್ಲ. ನನಗೆ ಸಂಪೂರ್ಣ ಸಮಾಧಾನ ಸಿಕ್ಕಿರಲಿಲ್ಲ ಎಂಬ ಕೊರಗಿತ್ತು. ಅದನ್ನ ನಾನು ಅಣ್ಣನಿಗೂ ಹೇಳಿದ್ದೆ. ಈಗ ನಿರ್ದೇಶಕ ಪವನ್ ಒಡೆಯರ್ 'ಬೇಲ್' ಚಿತ್ರದಲ್ಲಿ ಕೊಟ್ಟಿರುವ ಅವಕಾಶದಿಂದ ಆ ಆಸೆ ಈಡೇರಿದೆ ಎಂದು ಸಂಭ್ರಮಿಸಿದರು.

ಯೋಗಿ ಮಾತು

ಶಿವಣ್ಣನ ಎದುರು ಖಳನಾಯಕನಾಗಿ ನಟಿಸಿದ ಅನುಭವ ಬಿಚ್ಚಿಟ್ಟ ಯೋಗಿ.. ಶಿವಣ್ಣ ಅಂದ್ರೇನೆ ಡೆಫಿನಿಶನ್ ಆಫ್ ಬಾಸ್! ಇಂಡಸ್ಟ್ರಿಗೆ ಮಚ್ಚು ಹಿಡಿಯೋದು ಹೇಳಿಕೊಟ್ಟವರೇ ಅವರು. ಅಂಥವರ ಮುಂದೆ ನಾವು ಮಚ್ಚು ಹಿಡ್ಕೊಂಡು ನಿಂತು ಆಕ್ಟ್ ಮಾಡೋದು ಇದೆಯಲ್ಲಾ.. ಅದು ನಿಜಕ್ಕೂ ಎಪಿಕ್ ಅನುಭವ. ಅದ್ರಲ್ಲೇ ಬಾರೀ ಮಜಾ ಇದೆ. ಸಿನಿಮಾದಲ್ಲಿ ಯಾರಿಗೂ ಒದೆ ತಿನ್ನೋಕೆ ಆಸೆ ಇರಲ್ಲ. ಆದರೆ ಶಿವಣ್ಣನ ಹತ್ರ ಒದೆ ತಿನ್ನೋದ್ರಲ್ಲೂ ಒಂಥರಾ ಖುಷಿ ಇದೆ ಎಂದು ಎಲ್ಲರನ್ನೂ ನಗಿಸಿದರು.

ನಾನು ಎಷ್ಟೋ ಕಡೆ ಶಿವಣ್ಣನ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತೇನೆ. ನನಗೆ ಅವರಂದ್ರೆ ಅಷ್ಟು ಇಷ್ಟ. ಕೆಲವರು ಇದನ್ನ ಡವ್ ಮಾಡ್ತಾರೆ ಅಂತಾರೆ. ಕೆಲವರು ಬಕೆಟ್ ಹಿಡಿಯೋದು ಅಂತ ಕರೀತಾರೆ. ಶಿವಣ್ಣನ ಮೇಲಿರುವ ಪ್ರೀತಿಗೆ ಬಕೆಟ್ ಅನ್ನೋದೇ ಹೆಸರಾಗಿದ್ರೆ ಪರವಾಗಿಲ್ಲ. ನನ್ನ ಕೈಲಿ ಅಣ್ಣನ ಬಕೆಟ್ ಯಾವತ್ತೂ ಇರುತ್ತೆ. ಐ ಲವ್ ಹಿಮ್ ಎಂದು ಪ್ರೀತಿಯಿಂದ ಮಾತನಾಡಿದರು.

ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಅವರ ಸರಳತೆ ಕೊಂಡಾಡಿದ ಯೋಗಿ.. ಗೀತಾ ಅಕ್ಕ ಅಮೇಸಿಂಗ್ ವ್ಯಕ್ತಿತ್ವ. ನಂಗೆ ಅವರೇ ಸ್ವತಃ ಫೋನ್ ಮಾಡಿ ವಿಶ್ ಮಾಡ್ತಾರೆ. ಕನ್ನಡ ಇಂಡಸ್ಟ್ರಿಯಲ್ಲಿ ನಂಗೆ ಫೋನ್ ಮಾಡಿ ಮಾತನಾಡೋ ಏಕೈಕ ಸ್ಟಾರ್ ಅಂದ್ರೆ ಅದು ಶಿವಣ್ಣ. ಇದುವರೆಗೂ ಬೇರೆ ಯಾವ ನಟರೂ ಹೀಗೆ ಮಾಡಿಲ್ಲ. ಶಿವಣ್ಣ ಎಂಥಾ ಗ್ರೇಟ್ ಹ್ಯೂಮನ್ ಬೀಯಿಂಗ್ ಅನ್ನೋದಕ್ಕೆ ಇದೇ ಸಾಕ್ಷಿ. ನಾನು ಯಾವತ್ತೂ ಅವರ ಅಪ್ಪಟ ಅಭಿಮಾನಿ ಎಂದರು.

ಕೆವಿಎನ್ ಪ್ರೊಡಕ್ಷನ್ಸ್ (KVN Productions) ಅದ್ದೂರಿಯಾಗಿ ನಿರ್ಮಿಸಿರುವ 'ಬೇಲ್' ಚಿತ್ರದಲ್ಲಿ ಶಿವಣ್ಣ, ಲೂಸ್ ಮಾದ ಯೋಗಿ ಜೊತೆಗೆ ದೀಕ್ಷಿತ್ ಶೆಟ್ಟಿ, ಸಂಜನಾ ಆನಂದ್, ಸಾಯಿಕುಮಾರ್ ಹಾಗೂ ಜಯರಾಮ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ಮತ್ತು ವೈದಿ ಅವರ ಛಾಯಾಗ್ರಹಣವಿದೆ.