ಸರ್ಕಾರಿ ಶಾಲೆಗಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗಳನ್ನಾಗಿ ಮಾಡಬೇಕು ಎಂದಿರುವ ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ನಿರ್ಧಾರವನ್ನು ಪವನ್ ಕಲ್ಯಾಣ್ ಖಂಡಿಸಿದ್ದಾರೆ. ಇಬ್ಬರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ವೈಯಕ್ತಿಕ ವಿಚಾರವನ್ನು ಕೆದಕಿದ ರೆಡ್ಡಿ ಮೇಲೆ ಪವನ್ ಕಲ್ಯಾಣ್ ಗರಂ ಆಗಿದ್ದಾರೆ.  

ತಮ್ಮ ರಾಧಿಕಾ ನಡುವಿನ ಸೀಕ್ರೆಟ್ ಬಿಚ್ಚಿಟ್ಟ ಚಾಲೆಂಜಿಂಗ್ ಸ್ಟಾರ್!

ನಡೆದಿದ್ದೇನು? 

ಎಲ್ಲಾ ಸರ್ಕಾರಿ ಶಾಲೆಗಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗಳನ್ನಾಗಿ ಮಾಡಬೇಕು. ಎಲ್ಲರಿಗೂ ಇಂಗ್ಲೀಷ್ ಶಿಕ್ಷಣ ಸಿಗುವಂತಾಗಬೇಕು ಎಂದು ಜಗನ್ಮೋಹನ್ ರೆಡ್ಡಿ ಹೇಳಿದ್ದರು.  ಇದನ್ನು ಪವನ್ ಕಲ್ಯಾಣ್ ಖಂಡಿಸಿದ್ದರು. ಆಗ ಇಬ್ಬರ ನಡುವೆ ಮಾತಿನ ಸಮರ ನಡೆದಿದೆ. ಆಗ ಜಗನ್ 'ಪವನ್ ಕಲ್ಯಾಣ್ ಅವರೇ, ನಿಮಗೆ ಮೂರು ಮದುವೆಯಾಗಿದೆ. ನಾಲ್ಕೈದು ಮಕ್ಕಳಿದ್ದಾರೆ. ನಿಮ್ಮ ಮಕ್ಕಳೆಲ್ಲಾ ಯಾವ ಶಾಲೆಯಲ್ಲಿ ಓದುತ್ತಿದ್ದಾರೆ'? ಎಂದು ಪ್ರಶ್ನಿಸಿದ್ದಾರೆ. 

ಜಗನಮೋಹನ್ ಹೇಳಿಕೆಯಿಂದ ಅಸಮಾಧಾನಗೊಂಡ ಪವನ್ ಕಲ್ಯಾಣ್, 'ನಾನು ಮೂರು ಮದುವೆಯಾದರೆ ನಿಮಗೇನು ತೊಂದರೆ? ಅದಕ್ಕೇ ನೀವು ಜೈಲಿಗೆ ಹೋಗಿದ್ದು ಅದಕ್ಕೇನಾ?'  ಎನ್ನುವ ಮೂಲಕ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಜೈಲು ವಾಸ ಅನುಭವಿಸಿದ ಜಗಮೋಹನ್ ರೆಡ್ಡಿಯವರನ್ನು ಪವನ್ ಕಲ್ಯಾಣ್ ಕಾಲೆಳೆದಿದ್ದಾರೆ. 'ನೀವು ರಾಜ್ಯದಲ್ಲಿ ಸರಕಾರಿ ಶಾಲೆಗಳಲ್ಲಿ ಜಾರಿಗೊಳಿಸಲು ಹೊರಟಿರುವ ಇಂಗ್ಲೀಷ್ ಮೀಡಿಯಂಗೂ ನನ್ನ ಮದುವೆಗೂ ಸಂಬಂಧ ಕಲ್ಪಿಸಬೇಡಿ'  ಎಂದು ರೆಡ್ಡಿಗೆ ಟಾಂಗ್ ಕೊಟ್ಟಿದ್ದಾರೆ. ಈ ರೀತಿಯಾಗಿ ವೈಯಕ್ತಿಕ ಮಟ್ಟಕ್ಕೆ ಇಳಿದು ಮಾತನಾಡುವುದು ಸರಿಯಲ್ಲ ಎಂದು ಆಂಧ್ರ ಸಿಎಂ ವಿರುದ್ಧ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನವೆಂಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: