ಜನಪ್ರಿಯ ಹಿರಿಯ ಬಹುಭಾಷಾ ಸಂಗೀತ ನಿರ್ದೇಶಕರಾದ ದೇವ ಅವರು ಇಂದು ತಮಿಳುನಾಡಿನ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ದೇವ ಅವರು ಕನ್ನಡ ಚಿತ್ರರಂಗಕ್ಕೂ ತಮ್ಮ ಸಂಗೀತ ನಿರ್ದೇಶನದ ಮೂಲಕ ಅಪಾರ ಕೊಡಗೆ ಸಲ್ಲಿಸಿದ್ದಾರೆ.
ಜನಪ್ರಿಯ ಹಿರಿಯ ಬಹುಭಾಷಾ ಸಂಗೀತ ನಿರ್ದೇಶಕರಾದ ದೇವ ಅವರು ಇಂದು ತಮಿಳುನಾಡಿನ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ದೇವ ಅವರು ಕನ್ನಡ ಚಿತ್ರರಂಗಕ್ಕೂ ತಮ್ಮ ಸಂಗೀತ ನಿರ್ದೇಶನದ ಮೂಲಕ ಅಪಾರ ಕೊಡಗೆ ಸಲ್ಲಿಸಿದ್ದಾರೆ. ನಟ ರಮೇಶ್ ಅರವಿಂದ್ ನಟನೆಯ 'ಅಮೃತವರ್ಷಿಣಿ, ವಿಷ್ಣುವರ್ಧನ್ ನಟನೆಯ ಕೋಟಿಗೊಬ್ಬ, ಸಿಂಹಾದ್ರಿಯ ಸಿಂಹ, ರಾಜ ಸರಸಿಂಹ, ವಿಜಯದಶಮಿ, ಕದಂಬ ಸೇರಿದಂತೆ ಕನ್ನಡದ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಈ ದೇವ ಅವರು ಸಮಗೀತ ನೀಡಿದ್ದಾರೆ.
ಕನ್ನಡದಲ್ಲಿ ಸುಮಾರು 12 ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವ ದೇವ ಅವರು ಹಲವು ಭಾಷೆಗಳ ಸುಮಾರು 400ಕ್ಕೂ ಹೆಚ್ಚಿನ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇಂದು ತಮಿಳುನಾಡಿನ ಚೆನ್ನೈನಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಹಿರಿಯ ಸಂಗೀತ ನಿರ್ದೇಶಕ ದೇವಾ ಅವರ ಆರೋಗ್ಯದಲ್ಲಿ ಹಠಾತ್ ಏರುಪೇರು ಕಂಡುಬಂದಿತ್ತು. ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಪಲಕಾರಿ ಆಗದೇ ನಿಧನರಾಗಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಬೆಳಿಗ್ಗೆ ಸುಮಾರು 8.30ರ ವೇಳೆಗೆ ಭಾರತದ, ಅದರಲ್ಲೂ ಮುಖ್ಯವಾಗಿ ಸೌತ್ ಇಂಡಿಯಾದ ಸಂಗೀತ ನಿರ್ದೇಶಕ ದೇವ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

