ಈಕೆಯ ಹೆಸರು ಅನನ್ಯಾ ಬಿರ್ಲಾ. ಹೆಸರು ಕೇಳಿದ ಕೂಡಲೇ ನಿಮಗೆ ಗೊತ್ತಾಗುತ್ತೆ- ಈಕೆ ಬಿರ್ಲಾ ಫ್ಯಾಮಿಲಿಯ ಕೂಸು ಅಂತ. ಆದಿತ್ಯ ಬಿರ್ಲಾ ಕುಟುಂಬದ ಬ್ಯುಸಿನೆಸ್ ದೊರೆ ಕುಮಾರಮಂಗಳಂ ಬಿರ್ಲಾ ಅವರ ಮಗಳು ಈಕೆ. ಆದ್ರೆ ಎಲ್ಲೂ ತಾನು ಬಿರ್ಲಾ ಫ್ಯಾಮಿಲಿ ಹುಡುಗಿ ಎಂಬ ಮೈಲೇಜ್ ತಗೊಳ್ಳದೆ ತನ್ನದೇ ಆದ ಕೆರಿಯರ್ ನಿರ್ಮಿಸಿಕೊಳ್ತಾ ಇದಾಳೆ ಈಕೆ.

ಯೂಟ್ಯೂಬ್‌ನಲ್ಲಿ ನೀವು ಅನನ್ಯಾ ಬಿರ್ಲಾ ಎಂಬ ಹೆಸರು ನೀಡಿದರೆ ಈಕೆಯ ಸಾಕಷ್ಟು ಮ್ಯೂಸಿಕ್‌ ಆಲ್ಬಂಗಳು ನಿಮಗೆ ಕಾಣಸಿಗುತ್ತವೆ. ಚೆನ್ನಾಗಿ ಹಾಡುತ್ತಾಳೆ. ಇನ್‌ಸ್ಟಗ್ರಾಮ್‌ನಲ್ಲಿ ಇರುವ ಈಕೆಯ ಅಕೌಂಟ್‌ನಲ್ಲಿ ತುಂಬ ಸ್ಟೈಲಿಷ್ ಆದ ವಿನ್ಯಾಸದ ಡ್ರೆಸ್‌ಗಳನ್ನು ಧರಿಸಿಕೊಂಡು ಕಾಣಿಸಿಕೊಳ್ಳುತ್ತಾಳೆ. ಆಗಾಗ ಅಲ್ಲಲ್ಲಿ ಹಾಟ್‌ ಆದ ಔಟ್‌ಫಿಟ್‌ ಧರಿಸಿ ಫೋಟೋ ಕ್ಲಿಕ್ಕಿಸಿಕೊಳ್ತಾಳೆ ಕೂಡ. ಲೆಟ್ ದೇರ್ ಬಿ ಲವ್‌ ಎಂಬುದು ಆಕೆಯ ಹೊಸಾ ಮ್ಯೂಸಿಕ್‌ ಆಲ್ಬಮ್‌ನ ಹೆಸರು. ಇನ್‌ಸ್ಟಗ್ರಾಮ್‌ನಲ್ಲಿ ಈಕೆ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಫಾಲೋವರ್ಸ್ ಇದ್ದಾರೆ.

ಈಕೆಯ ಮನೆ ಲಾಸ್ ಏಂಜಲೀಸ್ನಲ್ಲಿದೆ. ಲಾಕ್‌ಡೌನ್‌ ಟೈಮಲ್ಲಿ ಸುಮಾರು ಇನ್ನೂರು ಹಾಡುಗಳನ್ನು ಬರೆದಿದಾಳೆ. ಅವುಗಳಲ್ಲಿ ಕೆಲವನ್ನು ಆಯ್ದುಕೊಂಡು ಮ್ಯೂಸಿಕ್‌ ಕಂಪೈಲೇಶನ್‌ ಮಾಡಿ, ಆಲ್ಬಂ ಮಾಡಿದ್ದಾಳೆ. ಅದರಲ್ಲಿ ಕೆಲವು ಈ ಕೊರೊನಾ ಕಾಲಘಟ್ಟದ ಕುರಿತೇ ಇವೆಯಂತೆ. ಈಕೆ ಕಾಲೇಜ್ ಡ್ರಾಪೌಟ್. ಅಂದ್ರೆ ಡಿಗ್ರಿಯನ್ನು ಅರ್ಧದಲ್ಲೇ ಬಿಟ್ಟಿದ್ದಾಳೆ. ಅದೂ ಮ್ಯೂಸಿಕ್‌ನ ಕಾರಣಕ್ಕಾಗಿಯೇ, ಅದರಲ್ಲೂ ಬ್ರಿಟನ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್ ಯೂನಿವರ್ಸಿಟಿಯಿಂದಲೇ ಅರ್ಧದಲ್ಲೇ ಹೊರ ನಡೆದಿದ್ದಾಳೆ. ಈ ಬಗ್ಗೆ ಆಕೆಗೆ ಖೇದವಿಲ್ಲ. ಮ್ಯೂಸಿಕ್‌ನ ಮೂಲಕ ಜಗತ್ತಿನ ಜನರನ್ನು ಒಂದುಗೂಡಿಸಬಹುದು ಎಂಬುದು ಆಕೆಯ ನಂಬಿಕೆಯಂತೆ. ಲಿವಿಂಗ್ ದಿ ಲೈಫ್‌, ಮೆಂಟ್‌ ಟು ಬಿ, ಹೋಲ್ಡಾನ್‌, ಸರ್ಕಲ್ಸ್ ಇತ್ಯಾದಿಗಳು ಆಕೆಯ ಅಲ್ಬಮ್‌ಗಳ ಹೆಸರುಗಳು.

ಅನನ್ಯಾ ಮೆಂಟಲ್ ಹೆಲ್ತ್ ಆಕ್ಟಿವಿಸ್ಟ್ ಕೂಡ. ಅರ್ಥಾತ್‌, ಮಾನಸಿಕ ಆರೋಗ್ಯದ ಬಗ್ಗೆ ಕೆಲಸ ಮಾಡ್ತಾ ಇರುವವಳು. ಲಾಕ್‌ಡೌನ್‌ ಸಂದರ್ಭದಲ್ಲಿ ಡಿಪ್ರೆಶನ್‌ ಇತ್ಯಾದಿಗಳು ಹೆಚ್ಚುತ್ತಿರುವುದರ ಕುರಿತು ಆಕೆಗೆ ಅರಿವಿದೆ. ಎಂಪವರ್ ಎಂಬ ಕೌನ್ಸೆಲಿಂಗ್‌ ಸಂಸ್ಥೆಯನ್ನು ಆರಂಭಿಸಿದ್ದಾಳೆ. ಕರೆ ಮಾಡಿದವರಿಗೆ ಕೌನ್ಸೆಲಿಂಗ್‌ ಮಾಡುವುದು ಆಕೆಯ ಕಾಯಕವೂ ಆಗಿದೆ. ಭಾರತದಲ್ಲಿ ಡಿಪ್ರೆಶನ್‌ ಪ್ರಕರಣಗಳು ಸಾಕಷ್ಟಿವೆ. ಆದ್ರೆ ಕೌನ್ಸೆಲಿಂಗ್‌ ಪಡೆದುಕೋಬಹುದು ಎಂಬುದು ಇನ್ನೂ ಜನಕ್ಕೆ ಅರಿವೇ ಇಲ್ಲ ಅನ್ನುತ್ತಾಳೆ ಅನನ್ಯಾ.

ಶ್ರೀರಾಮನನ್ನು ಮನೆ ಮನೆಗೆ ತಲುಪಿಸಿದ ನಟರು ಇವರು! 

ಕೆಲವೊಮ್ಮೆ ತನ್ನನ್ನು ತನ್ನ ಶ್ರೀಮಂತ ಬಿರ್ಲಾ ಕುಟುಂಬದ ಹಿನ್ನೆಲೆಯಲ್ಲಿ ಗುರುತಿಸುವುದು ತನಗೆ ಕಿರಿಕಿರಿ ಅಂತಾಳೆ ಆಕೆ. ಹಾಗೆ ಮಾಡುವುದು ಆಕೆಗೆ ಇಷ್ಟವಿಲ್ಲ. ತಂದೆ ಕುಮಾರಮಂಗಳಂ ಬಿರ್ಲಾ ಎಷ್ಟೇ ಶ್ರೀಮಂತನಿರಬಹುದು, ಯಶಸ್ವಿ ಉದ್ಯಮಿ ಇರಬಹುದು. ಆದರೆ ಆ ಹಿನ್ನೆಲೆ ತನಗೆ ಎಳ್ಳಷ್ಟೂ ಸಂಬಂಧವಿಲ್ಲ. ನನ್ನ ವ್ಯಕ್ತಿತ್ವವೇ ಬೇರೆ, ನನ್ನ ಉದ್ಯೋಗ, ಉದ್ಯಮ, ಕರಿಯರ್‌ಗಳೇ ಬೇರೆ ಅಂತಾಳೆ ಆಕೆ. ಆ ವಿಷಯದಲ್ಲಿ ತುಂಬಾ ಸ್ವಾಭಿಮಾನಿ. ತನ್ನ ಫ್ಯಾಮಿಲಿ ಹೆಸರಿನ ಮೈಲೇಜ್‌ನಿಂದಾಗಿಯೇ ಕೆಲವೊಮ್ಮೆ ತನ್ನ ವೈಯಕ್ತಿಕ ಪ್ರತಿಭೆಯನ್ನು ಸ್ಥಾಪಿಸಿಕೊಳ್ಳುವುದಕ್ಕೂ ಈಕೆಗೆ ಕಷ್ಟ ಆಗಿದೆಯಂತೆ. ಇದು ಬಹುಶಃ ಎಲ್ಲ ಸೆಲೆಬ್ರಿಟಿಗಳ, ದೊಡ್ಡ ಉದ್ಯಮಿಗಳು ಮಕ್ಕಳ ಪಾಡೂ ಇರಬಹುದು.

ಆನ್‌ಸ್ಕ್ರೀನ್ ಈ ಸೂಪರ್ ಜೋಡಿ ನಿಜ ಜೀವನದಲ್ಲಿ ಒಂದಾಗಲೇ ಇಲ್ಲ! 

ಹೆಸರಿಗೆ ತಕ್ಕಂತೆ ಅನನ್ಯವಾಗಿಯೇ ಇರುವ ಈಕೆಗೆ ಇನ್ನೂ ಬಾಯ್‌ಫ್ರೆಂಡ್‌ ಇದ್ದಂತಿಲ್ಲ. ಯಾಕೆಂದರೆ ಇನ್‌ಸ್ಟಗ್ರಾಮ್‌ ತುಂಬಾ ಈಕೆ ಸಿಂಗಲ್‌ ಫೋಟೋಗಳೇ ಇವೆ. ತಪ್ಪಿದರೆ ಮ್ಯೂಸಿಕ್‌ ಆಲ್ಬಂಗಳು.

ಚೆನ್ನಾಗಿ ನಟಿಸಿಲ್ಲಾಂತ ಪಡೆದ ಸಂಭಾವನೆ ಮರಳಿಸಿದ್ರಾ ಪ್ರೇಮಂ ನಟಿ..?