ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್‌ನ ಖ್ಯಾತ ನಟ ಸುಶಾಂತ್ ಸಿಂಗ್‌ ರಜಪೂತ್ ಗತಜೀವನದ ಬಗ್ಗೆ ಹೊಸಾಹೊಸಾ ಸತ್ಯಗಳು ಬಯಲಾಗ್ತಾ ಇವೆ. ಅದರಲ್ಲಿ ಒಂದು, ಈತನ ಪ್ರೇಯಸಿಯಾಗಿದ್ದ ರಿಯಾ ಚಕ್ರವರ್ತಿಯನ್ನು ಖ್ಯಾತ ನಿರ್ದೇಶಕ, ಅಲಿಯಾ ಭಟ್‌ಳ ತಂದೆ ಮಹೇಶ್‌ ಭಟ್‌ ಲಪಟಾಯಿಸಿದ್ದ ಅನ್ನುವುದು ಒಂದು. ಜೊತೆಗೆ, ಸುಶಾಂತ್ ಸಿಂಗ್‌ ಸೈಕೋ, ಆತನನ್ನು ಬಿಟ್ಬಿಡು ಅಂತಲೂ ಮಹೇಶ್‌ ಭಟ್‌ ಆಕೆಗೆ ಹೇಳಿದ್ದನಂತೆ. ಹಾಗಂತ ಮಹೇಶ್‌ ಭಟ್‌ನ ಒಬ್ಬಾಕೆ ಅಸಿಸ್ಟೆಂಟ್ ಬಾಯಿ ಬಿಟ್ಟಿದ್ದಾಳೆ.

ಮಹೇಶ್‌ ಭಟ್‌ನ ಅಸಿಸ್ಟೆಂಟ್‌ ಆಗಿದ್ದ ಸುಹೃತಾ ಸೇನ್‌ಗುಪ್ತಾ ಎಂಬಾಕೆ, ಮಹೇಶ್‌ ಭಟ್‌ ಹಾಗೂ ರಿಯಾ ಚಕ್ರವರ್ತಿಯ ಆಪ್ತ ನಡವಳಿಕೆಯ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾಳೆ. ಇತ್ತೀಚೆಗೆ ಮಹೇಶ್‌ ಭಟ್‌, ರಿಯಾಳನ್ನು ಹಾಕಿಕೊಂಡು ಸಡಕ್ ೨ ಸಿನಿಮಾ ಮಾಡಿದ್ದಾರೆ. ಆ ಸಿನಿಮಾದಲ್ಲಿ ರಿಯಾ ಚಕ್ರವರ್ತಿಗೆ ಲೀಡ್‌ ರೋಲ್‌. ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದಾಗ ಹಾಗೂ ನಂತರ ಮಹೇಶ್‌ ಭಟ್‌ ಬರ್ತ್‌ಡೇ ಸಂದರ್ಭದಲ್ಲಿ ರಿಯಾ ಮತ್ತು ಮಹೇಶ್‌ ಭಟ್ ಆಪ್ತವಾಗಿ ತಬ್ಬಿಕೊಂಡು ಪೋಸ್ ಕೊಟ್ಟಿದ್ದರು. ರಿಯಾ ತಾತನ ಪ್ರಾಯ ಆಗಿದೆ ಮಹೇಶ್‌ ಭಟ್‌ಗೆ. ಇಂಥ ಭಟ್‌, ರಿಯಾಳನ್ನು ಎಲ್ಲರೆದುರು ಮುಜುಗರವಾಗುವಂತೆ ತಬ್ಬಿಕೊಂಡು ಪೋಸ್ ನೀಡಿದ್ದಷ್ಟೇ ಅಲ್ಲ; ಆಕೆಯನ್ನು ತನ್ನ ಮಡಿಲಿನಲ್ಲಿಯೂ ಕೂರಿಸಿಕೊಂಡಿದ್ದಾನೆ. ಇಷ್ಟನ್ನು ತನ್ನ ಟ್ವಿಟ್ಟರ್‌ನಲ್ಲಿ ಈತ ಹಾಕಿಕೊಂಡಿದ್ದ. ರಿಯಾ ಕೂಡ ಹಾಕಿಕೊಂಡಿದ್ದಳು. ಇವರಿಬ್ಬರ ನಡುವೆ ಏನು ನಡೆದಿದೆ ಎಂದು ಬಾಲಿವುಡ್‌ ಗುಸುಗುಸು ಪಿಸಪಿಸ ಮಾತಾಡಿಕೊಂಡಿತ್ತು. ಟ್ವಿಟ್ಟರಿಗರು ಮಾತ್ರ ಈ ಜೋಡಿಯ ಅಕಾಲಿಕ ರೊಮ್ಯಾನ್ಸ್‌ಗೆ ಕಿಡಿ ಕಾರಿದ್ದರು. 

ಸಹೋದರಿಗೆ ಸುಶಾಂತ್ ಸಿಂಗ್ ಮಾಡಿದ್ದ ಕೊನೆಯ ಮೆಸೇಜ್ ವೈರಲ್! 
ನಿನ್ನೆ ಈ ವಿಚಾರದಲ್ಲಿ ಸುಶಾಂತ್‌ ಹತ್ಯೆಯನ್ನು ತನಿಖೆ ನಡೆಸುತ್ತಿರುವ ಮುಂಬಯಿ ಪೊಲೀಸರು ಮಹೇಶ್‌ ಭಟ್‌ನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಆಗ ಮಹೇಶ್‌ ಭಟ್‌, ಸುಶಾಂತ್‌ಗೆ ಡಿಪ್ರೆಶನ್, ಬೈಪೋಲಾರ್ ಡಿಸಾರ್ಡರ್ ಇದ್ದುದು ನಿಜ; ಇದರಿಂದ ಆತನ ಗರ್ಲ್‌ಫ್ರೆಂಡ್‌ ರಿಯಾಗೆ ತುಂಬಾ ಮಾನಸಿಕ ವೇದನೆ ಆಗುತ್ತಿದ್ದುದೂ ನಿಜ. ಇದರಿಂದ ನೊಂದ ಆಕೆ ಪದೇ ಪದೇ ತನ್ನಲ್ಲಿಗೆ ಕೌನ್ಸೆಲಿಂಗ್‌ಗೆ ಬರುತ್ತಿದ್ದಳು ಎಂದೂ ಹೇಳಿದ್ದಾರೆ. ಮೆಡಿಕಲ್ ಡಿಪ್ರೆಶನ್ ಒಂದು ಬಗೆಯಲ್ಲಿ ವಾಸಿಯಾಗದ ಕಾಯಿಲೆ. ರೋಗಿಯ ಪ್ರಬಲ ಇಚ್ಛಾಶಕ್ತಿ ಇಲ್ಲವಾದರೆ ಅದು ಗುಣವಾಗದು. ಇದು ಇದ್ದವರಿಂದ ದೂರ ಸರಿಯುವುದೇ ಸರಿ. ಆದ್ದರಿಂದ ನೀನು ಸುಶಾಂತ್‌ನನ್ನು ಬಿಟ್ಟು ಬಾ ಎಂಬುದಾಗಿ ಆಕೆಗೆ ಹೇಳಿದ್ದೆ ಎಂದೂ ಕೂಡ ಮಹೇಶ್‌ ಭಟ್‌ ಹೇಳಿದ್ದಾರೆ. ಮಹೇಶ್‌ ಭಟ್‌ ಪರ್ವೀನ್‌ ಬಾಬಿಗೂ ಕೂಡ ಹೀಗೇ ಹೇಳಿದ್ದರಂತೆ. ಪರ್ವೀನ್‌ ಬಾಬಿ ಕೂಡ ಡಿಪ್ರೆಶನ್‌ನಿಂದ ಜೀವ ತೆಗೆದುಕೊಂಡವಳು. ಸುಶಾಂತ್‌ ಸೈಕೋ ಆಗಿದ್ದಾನೆ; ಆತನಿಂದ ದೂರ ಸರಿ ಎಂದು ಭಟ್‌ ರಿಯಾಗೆ ಹೇಳಿದ್ದನಂತೆ. 

ಸುಶಾಂತ್ ಸಿಂಗ್ 'ದಿಲ್ ಬೇಚಾರ' ಸೂಪರ್ ಹಿಟ್! 
ಇದನ್ನು ತಿಳಿದ ಬಳಿಕ ಟ್ವಿಟ್ಟರಿಗರು ಹಾಗೂ ಬಾಲಿವುಡ್‌ನ ಸುಶಾಂತ್‌ ಅಭಿಮಾನಿಗಳ ಬಳಗದಲ್ಲಿ ಮಹೇಶ್‌ ಭಟ್‌ ಬಗ್ಗೆ ಒಂದು ಬಗೆಯ ಕಹಿ ಮೂಡಿದೆ. ಸುಶಾಂತ್‌ನ ಮಾನಸಿಕತೆ ಸರಿ ಎಲ್ಲ ಎಂದಾದರೆ ಆತನಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದು, ರಿಯಾ ಹಾಗೂ ಆತ ಜಗಳವಾಡಿದ್ದರೆ ಅವರಿಬ್ಬರ ಮಧ್ಯೆ ಮಾತುಕತೆ ನಡೆಸಿ ರಾಜಿ ಮಾಡಿಸುವುದು ಭಟ್‌ ಕೆಲಸ ಆಗಬೇಕಿತ್ತಲ್ಲವೇ. ಯಾಕೆ ಆತನಿಂದ ಆಚೆ ಬಾ ಎಂದು ಹೇಳಬೇಕಿತ್ತು? ಸುಶಾಂತ್‌ಗೆ ಸಡಕ್‌ ೨ ನಲ್ಲಿ ರೋಲ್‌ ಕೊಡಿಸುವುದಾಗಿ ಹೇಳಿ ನಂತರ ಯಾಕೆ ಕೈ ಬಿಡಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. ಇದರರ ಹಿಂದೆ ರಿಯಾಳ ದುರ್ಬಳಕೆ ಮಾಡಿಕೊಳ್ಳುವ ಉದ್ದೇಶವಿತ್ತೇ ಎಂದು ಅನುಮಾನಪಟ್ಟಿದ್ದಾರೆ. ಮುಂಬಯಿ ಪೊಲೀಸರ ವಿಚಾರಣೆ ವೇಳೆ, ರಿಯಾ ತನಗೆ ಶಿಷ್ಯೆ ಇದ್ದಂತೆ, ಆಕೆ ತನ್ನನ್ನು ಗುರು ಸಮಾನ ಎಂದು ಭಾವಿಸಿದ್ದಾಳೆ ಎಂದು ಭಟ್‌ ಹೇಳಿದ್ದಾರೆ.

ಸುಶಾಂತ್‌ಗಿತ್ತಂತೆ ಬೈಪೋಲಾರ್ ಡಿಸಾರ್ಡರ್! ಏನಿದು ಸಮಸ್ಯೆ?