ಅವಕಾಶಕ್ಕಾಗಿ ಅಲೆದಿದ್ರು ಸೋನು ಸೂದ್: ರಿಯಲ್ ಹಿರೋ ಬಾಲಿವುಡ್ ನೆಪೊಟಿಸಂ ಬಗ್ಗೆ ಹೇಳಿದ್ದಿಷ್ಟು

ಬಾಲಿವುಡ್‌ನಲ್ಲಿ ಸ್ವಜನ ಪಕ್ಷಪಾತದ ಬಗ್ಗೆ ತೀವ್ರ ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ನಟ ಸೋನು ಸೂದ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬಾಲಿವುಡ್ ನೆಪೊಟಿಸಂ ಬಗ್ಗೆ ರಿಯಲ್ ಹೀರೋ ಏನ್ ಹೇಳಿದ್ದಾರೆ..? ಇಲ್ಲಿ ಓದಿ.

sonu soods advice to outsiders come only if you have nerves of steel

ನಿಮ್ಮಲ್ಲಿ ಗಟ್ಟಿತನ ಇದ್ದರಷ್ಟೇ ಬನ್ನಿ, ಸ್ಟಾರ್‌ ಕಿಡ್‌ಗಳಿಗೆ ಯಾವಾಗಲೂ ಎಲ್ಲವೂ ಸುಲಭವಾಗಿಯೇ ಸಿಗುತ್ತದೆ ಎಂದು ನಟ ಸೋನು ಸೂದ್ ಹೇಳಿದ್ದಾರೆ. ಬಾಲಿವುಡ್‌ನಲ್ಲಿ ಸ್ವಜನ ಪಕ್ಷಪಾತದ ಬಗ್ಗೆ ತೀವ್ರ ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ನಟ ಸೋನು ಸೂದ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಸದ್ದು ಮಾಡಿದ ನೆಪೊಟಿಸಂ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಸೋನು, ಸುಶಾಂತ್ ಹಾರ್ಡ್ ವರ್ಕಿಂಕ್ ಹುಡುಗನಾಗಿದ್ದ ಎಂದಿದ್ದಾರೆ.

ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸದ ಹೊರಗಿನವರಿಗಿಂತ ಸ್ಟಾರ್‌ ಕಿಡ್‌ಗಳಿಗೆ ಎಲ್ಲವೂ ಸುಲಭವಾಗಿಯೇ ಸಿಗುತ್ತದೆ. ಹೊರಗಿನವನೊಬ್ಬ ನಗರಕ್ಕೆ ಬಂದು ಏನಾದರೂ ಸಾಧಿಸಿದರೆ ಆ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಾಗುತ್ತದೆ. ನಮಗೊಂದು ಹೊಸ ವಿಶ್ವಾಸವನ್ನು ಕೊಡುತ್ತದೆ. ಆದರೆ ಈ ರೀತಿಯಾಗಿ ಏನಾದರೂ ಆದರೆ ಇದು ನಮ್ಮೆಲ್ಲರನ್ನೂ ಅತಿಯಾಗಿ ನೋಯಿಸುತ್ತದೆ ಎಂದಿದ್ದಾರೆ.

ಸುಶಾಂತ್ ಹೆಸರು ಹೇಳಿದ್ದಕ್ಕೆ ಕುಟುಂಬಸ್ಥರಲ್ಲಿ ಕ್ಷಮೆ ಕೇಳಿದ ನಟಿ ಸ್ವರಾ ಭಾಸ್ಕರ್..!

ಬಾಲಿವುಡ್ ಒತ್ತಡಗಳು ನಿಜ. ನಗರಕ್ಕೆ ಕೆಲಸ ಹುಡಕಿಕೊಂಡು ದಿನವೈ ಸಾವಿರಾರು ಜನ ಬರುತ್ತಾರೆ. ಆದರೆ ಕೆಲವರಿಗಷ್ಟೇ ಗೆಲುವು ಸಿಗುತ್ತದೆ. ಹೊರಗಿನಿಂದ ಬಂದವರು ಯಾವಗಲೂ ಹೊರಗಿನವರಾಗಿಯೇ ಇರುತ್ತಾರೆ ಎಂದಿದ್ದಾರೆ.

sonu soods advice to outsiders come only if you have nerves of steel

ನಾನು ನಗರಕ್ಕೆ ಬಂದಾಗ ನನ್ನ ಮೆಕ್ಯಾನಿಕಲ್ ಎಂಜಿನಿಯರಿಂಗ್ ಡಿಗ್ರಿ ಮುಗಿದಿತ್ತು. ಜನರು ನನ್ನನ್ನು ನೋಡುವ ರೀತಿ ಚೆನ್ನಾಗಿರಬಹುದು ಎಂದುಕೊಂಡಿದ್ದೆ. ಆದರೆ ಹಾಗೇನೂ ಆಗಲಿಲ್ಲ. ಯಾರೊಬ್ಬರು ನನ್ನನ್ನು ಅವರ ಕಚೇರಿಯ ಒಳಗೆ ಕಾಲಿಡುವುದಕ್ಕೂ ಬಿಡಲಿಲ್ಲ. ಮೊದಲಿನ ಆರೆಂಟು ತಿಂಗಳುಗಳಲ್ಲೇ ಈ ಪಯಣ ತುಂಬ ಕಷ್ಟ ಎಂಬುದು ನನಗೆ ಅರ್ಥವಾಗಿಬಿಟ್ಟಿತ್ತು ಎಂದಿದ್ದಾರೆ.

ಸುಶಾಂತ್‌ಗಿತ್ತಂತೆ ಬೈಪೋಲಾರ್ ಡಿಸಾರ್ಡರ್! ಏನಿದು ಸಮಸ್ಯೆ?

ಸಲ್ಮಾನ್‌ ಖಾನ್‌ನಿಂದ ಹಿಡಿದು ಜಾಕಿ ಚಾನ್‌ ಜೊತೆ ಎಲ್ಲರೊಂದಿಗೂ ತೆರೆ ಹಂಚಿಕೊಂಡ ಸೋನು ಹೊರಗಿನಿಂದ ಬರುವವರಿಗಾಗಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ನಿಮ್ಮಲ್ಲಿ ಗಟ್ಟಿತನವಿದ್ದರಷ್ಟೇ ಇಂಡಸ್ಟ್ರಿಗೆ ಬನ್ನಿ, ಏನಾದ್ರೂ ಪವಾಡ ಆಗುತ್ತೇ ಎಂದುಕೊಂಡು ಬರಬೇಡಿ. ನೀವು ನೋಡುವುದಕ್ಕೆ ಚೆನ್ನಾಗಿದ್ದೀರಿ, ನಿಮ್ಮ ಬಾಡಿ ಚೆನ್ನಾಗಿದೆ ಎನ್ನುವ ಮಾತ್ರಕ್ಕೆ ಯಾರೂ ತಮ್ಮ ಪ್ರೊಡಕ್ಷನ್‌ ಹೌಸ್‌ನ ಸಿನಿಮಾದಲ್ಲಿ ನಿಮ್ಮನ್ನು ಸೇರಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಸೋನುಗೆ ಸೂದ್ ಸರಿಸಾಟಿ, ಸಂಕಷ್ಟದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳಿಗೆ ಆಪದ್ಬಾಂಧವ

ಈ ನಿಟ್ಟಿನಲ್ಲಿ ಹೇಳುವುದಾದರೆ ಸ್ಟಾರ್‌ ಕಿಡ್‌ಗೆ ಎಲ್ಲವೂ ಸುಲಭವಾಗಿಯೇ ಸಿಗುತ್ತದೆ. ತಂದೆ ನಿರ್ಮಾಪಕನಿಗೋ, ನಿರ್ದೇಶಕನಿಗೋ ಒಂದು ಕಾಲ್‌ ಮಾಡಿ ಹೇಳಿದರೆ ಸಾಕು ದೊಡ್ಡ ಅವಕಾಶ ಕೈ ಸೇರುತ್ತದೆ. ನಾಳೆ ನನ್ನ ಮಕ್ಕಳೂ ಸಿನಿಮಾ ಕ್ಷೇತ್ರದಲ್ಲಿ ಹೋಗಬೇಕೆಂದುಕೊಂಡರೆ ಅದು ಬಹುಷ ಸುಲಭವಾಗಬಹುದು ಎಂದಿದ್ದಾರೆ.

Latest Videos
Follow Us:
Download App:
  • android
  • ios