4 ಕೋಟಿಯ ಲ್ಯಾಂಬೋರ್ಗಿನಿ ಖರೀದಿಸಿದ ಶ್ರದ್ಧಾ ಕಪೂರ್, ಬಾಲಿವುಡ್ ನಟಿಯ 'ಪ್ರೊಟೆಸ್ಟ್' ಕಥೆ ಕೆದಕಿದ ನೆಟ್ಟಿಗರು!
ನಟಿ ಶ್ರದ್ಧಾ ಕಪೂರ್ ಹೊಸ ಲ್ಯಾಂಬೋರ್ಗಿನಿ ಖರೀದಿಸಿದ್ದಾರೆ. ಆದರೆ, ಸೋಶಿಯಲ್ ಮೀಡಿಯಾ ಮಾತ್ರ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರ ಡಬಲ್ ಸ್ಟ್ಯಾಂಡ್‌ಅನ್ನು ಕೆಣಕಿ ಟ್ವೀಟ್ ಮಾಡಿದ್ದಾರೆ.
ಮುಂಬೈ (ಅ.25): ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಪಾಲಿಗೆ ನೆರವಾಗುತ್ತಿದ್ದ ಮೆಟ್ರೋ ರೈಲಿನ ಶೆಡ್‌ಅನ್ನು ಮುಂಬೈನ ಅರೇ ಅರಣ್ಯದಲ್ಲಿ ನಿರ್ಮಾಣ ಮಾಡಬೇಕು ಎಂದು ಅಂದಿನ ಸರ್ಕಾರ ನಿರ್ಧಾರ ಮಾಡಿತ್ತು. ಇದಕ್ಕಾಗಿ 3 ಸಾವಿರ ಮರಗಳನ್ನು ಕತ್ತರಿಸಬೇಕಾಗುತ್ತದೆ. ಆದರೆ ಅಷ್ಟೇ ಮರಗಳನ್ನು ವಿವಿಧ ಭಾಗಗಳಲ್ಲಿ ನೆಡುವುದಾಗಿ ಸರ್ಕಾರ ಆಶ್ವಾಸನೆ ನೀಡಿದರೂ, ಅದಕ್ಕೆ ವಿರುದ್ಧವಾಗಿ ದೊಡ್ಡ ಪ್ರತಿಭಟನೆ ನಡೆಯಿತು. ಅಂದು ಈ ಪ್ರತಿಭಟನೆಯಲ್ಲಿ ಸೇವ್ ಟ್ರೀ ಎಂದು ಪೋಸ್ಟರ್ ಹಿಡಿದುಕೊಂಡು ಬೀದಿಯಲ್ಲಿ ಪ್ರತಿಭಟನೆಗೆ ಇಳಿದಿದ್ದ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಇಂದು ಹೊಸ ಕಾರ್ ಖರೀದಿಸಿದ್ದಾರೆ. ಈ ಶ್ರದ್ಧಾ ಕಪೂರ್ ಖರೀದಿಸಿರುವ ಲ್ಯಾಂಬೋರ್ಗಿನಿ ಕಾರ್‌ಗೆ 4 ಕೋಟಿ ರೂಪಾಯಿ. ದಸರಾ ಸಂಭ್ರಮದಲ್ಲಿ ತಮ್ಮ ಹೊಸ ಕಾರ್‌ಗೆ ಪೂಜೆ ಮಾಡಿದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಹೆಚ್ಚಿನವರು ಹುಬ್ಬೇರಿಸಿದ್ದು, ಕೆಲವು ವರ್ಷಗಳ ಹಿಂದೆ ಅರೇದಲ್ಲಿ ಮೆಟ್ರೋ ಕಾರ್ ಶೆಡ್ ನಿರ್ಮಾಣಕ್ಕೆ ವಿರೋಧಿಸಿದ್ದ ವ್ಯಕ್ತಿ ಇವರೇ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಅಂದು ಪರಿಸರ ಕಾಳಜಿ ಎಂದಿದ್ದ ಇದೇ ಶ್ರದ್ಧಾ ಕಪೂರ್ ಇಂದು ಪೆಟ್ರೋಲ್‌ನಿಂದ ಓಡುವ ಲ್ಯಾಂಬೋರ್ಗಿನಿ ಕಾರ್ ಖರೀದಿಸಿದ್ದಾರೆ. ಇದು ಅವರ ಡಬಲ್ ಸ್ಟ್ಯಾಂಡ್‌ಗೆ ಸಾಕ್ಷಿ ಎಂದು ಬರೆದುಕೊಂಡಿದ್ದಾರೆ.
ಅತ್ಯಂತ ದುಬಾರಿ ಕಾರುಗಳನ್ನು ಉತ್ಪಾದಿಸುವ ಲಂಬೋರ್ಗಿನಿ ಕಂಪನಿಯಿಂದ ಲ್ಯಾಂಬೊರ್ಗೀನಿ ಹುರಾಕಾನ್ ಕಾರು ಟೆಕ್ನಿಕಾ ಮಾಡೆಲ್ ಕಾರನ್ನು ಶ್ರದ್ಧಾ ಖರೀದಿಸಿದ್ದಾರೆ. ಕಾರಿನ ಬೆಲೆ ಸುಮಾರು 4 ಕೋಟಿ ರೂಪಾಯಿ. ಶ್ರದ್ಧಾ ಕಪೂರ್ ಇಷ್ಟು ದುಬಾರಿ ವೆಚ್ಚದಲ್ಲಿ ಕಾರು ಖರೀದಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಶ್ರದ್ಧಾ ಕಪೂರ್ ಅವರ ಸ್ನೇಹಿತೆ, ಮುಂಬೈನಲ್ಲಿ ಲಂಬೋರ್ಗಿನಿ ಕಾರುಗಳನ್ನು ಮಾರಾಟ ಮಾಡುವ ಡೀಲರ್‌ಷಿಪ್‌ನ ಮಾಲೀಕರಾದ ಪೂಜಾ ಚೌಧರಿ ಅವರು ಶ್ರದ್ಧಾ ಕಪೂರ್ ಅವರ ಲಂಬೋರ್ಗಿನಿ ಕಾರಿನೊಂದಿಗೆ ಫೋಟೋ ತೆಗೆದುಕೊಂಡು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಬುಧವಾರ, ಶ್ರದ್ಧಾ ತನ್ನ ಕಾರನ್ನು ಜುಹುನಲ್ಲಿನ ಪ್ರಸಿದ್ಧ ಇಸ್ಕಾನ್ ದೇವಾಲಯಕ್ಕೆ ಡ್ರೈವ್ ಮಾಡಿದ್ದರು. ಹೊಸ ಕಾರ್‌ಗೆ ಪೂಜೆ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ನಟಿ ತನ್ನ ಹೊಸ ಕಾರಿನ ಫೋಟೋಗಳು ಮತ್ತು ವೀಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆದ ಬೆನ್ನಲ್ಲಿಯೇ, ನೆಟ್ಟಿಗರು ಬಹಳ ಕಡಿಮೆ ಮೈಲೇಜ್ ಹೊಂದಿರುವ ಮತ್ತು ಹೆಚ್ಚು ಇಂಧನವನ್ನು (ಹೆಚ್ಚಿನ CO2 ಹೊರಸೂಸುವ) ಪೆಟ್ರೋಲ್ ಬಳಕೆಯ ಐಷಾರಾಮಿ ಕಾರನ್ನು ಬಳಸಿದ್ದಕ್ಕಾಗಿ ಆಕೆಯನ್ನು ಪ್ರಶ್ನೆ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಪರಿಸರ ಕಾಳಜಿಗಾಗಿ ಬೀದಿಗಿಳಿದಿದ್ದ ಈಕೆ ಪರಿಸರಕ್ಕೆ ಮಾರಕವಾಗಿರುವ ಇಂಗಾಲವನ್ನು ಹೆಚ್ಚಾಗಿ ಹೊರಸೂಸುವ ಕಾರ್‌ಅನ್ನು ಖರೀದಿಸಿದ್ದು ವಿಪರ್ಯಾಸ ಎಂದಿದ್ದಾರೆ. ಬಿಳಿ ಮತ್ತು ಗುಲಾಬಿ ಬಣ್ಣದ ಚೂಡಿದಾರ್ ಧರಿಸಿದ ಶ್ರದ್ಧಾ ಹೊಸ ಲಂಬೋರ್ಗಿನಿ ಮುಂದೆ ನಿಂತು ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಕಾರು ಖರೀದಿಸಿದ ಬಳಿಕ ಅವರು ಮುಂಬೈ ರಸ್ತೆಗಳಲ್ಲಿ ಸುತ್ತಾಡಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಶ್ರದ್ಧಾ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಲ್ಯಾಂಬೋರ್ಗಿನಿ ಹುರಾಕನ್ ಟೆಕ್ನಿಕಾವನ್ನು ಭಾರತದಲ್ಲಿ ಆಗಸ್ಟ್ 2022ರಲ್ಲಿ ಪ್ರಾರಂಭಿಸಲಾಯಿತು. ಲಂಬೋರ್ಗಿನಿ ವೆಬ್‌ಸೈಟ್ ಪ್ರಕಾರ, ಈ ಕಾರಿನ ಗರಿಷ್ಠ ವೇಗ 310 ಕಿಲೋಮೀಟರ್ ಇದೆ. ಈ ಕಾರಿನಲ್ಲಿ ಇಬ್ಬರು ಮಾತ್ರ ಕುಳಿತುಕೊಳ್ಳಬಹುದು. 5204 ಸಿಸಿ ಇಂಜಿನ್ನ ಇದು ಹೊಂದಿದೆ. ಈ ಕಾರು ಪ್ರತಿ ಲೀಟರ್ ಪೆಟ್ರೋಲ್ಗೆ 7 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. 9.6 ಸೆಕೆಂಡ್ನಲ್ಲಿ ಜೀರೋದಿಂದ 100 ಕಿಲೋಮೀಟರ್ ವೇಗ ತಲುಪಬಹುದು.
ಏನಿದು ಮಹದೇವ್ ಬೆಟ್ಟಿಂಗ್ ಆ್ಯಪ್ , ರಣಬೀರ್, ಶ್ರದ್ಧಾ ಕಪೂರ್ ಸೇರಿ ಖ್ಯಾತ ನಟ-ನಟಿಯರು ದಂಧೆಯಲ್ಲಿ!
2019 ರಲ್ಲಿ, ಹೊಸ ಮೆಟ್ರೋ ಕಾರ್ ಶೆಡ್ ನಿರ್ಮಿಸಲು ಆರೆ ಪ್ರದೇಶದಲ್ಲಿ ಮರಗಳನ್ನು ಕಡಿಯುವುದನ್ನು ವಿರೋಧಿಸಿ ಶ್ರದ್ಧಾ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. "ಪರಿಸರದ ಆಯ್ದ ಕಾರ್ಯಕರ್ತ" ಶ್ರದ್ಧಾ ಅವರು ಕಾರ್ ಶೆಡ್ ಅನ್ನು ಬಯಸಲಿಲ್ಲ ಮತ್ತು ಸಾಮಾನ್ಯ ಮುಂಬೈಕರ್‌ಗಳಿಗೆ ಅಗತ್ಯವಾದ ಮೆಟ್ರೋ ಯೋಜನೆಯನ್ನು ವಿರೋಧಿಸಿದರು ಆದರೆ ಅಕ್ಕ ತನಗಾಗಿ ಐಷಾರಾಮಿ ಕಾರ್ ಖರೀದಿಸಿ ಮುಂಬೈ ಸುತ್ತಾಡ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಮದುವೆ ಯಾವಾಗ ಎಂಬ ಪ್ರಶ್ನೆಗೆ ಶ್ರದ್ಧಾ ಕಪೂರ್ ಹಿಂಗ್ ಹೇಳಿ ಬಿಡೋದಾ?