ಬೆಂಗಳೂರು, [ಡಿ.27]: ಮೊನ್ನೇ ಡಿಸೆಂಬರ್ 24ರಂದು ಬೆಂಗಳೂರಿನ ಪಬ್ ವೊಂದರಲ್ಲಿ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಹಾಗೂ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ನಡುವೆ ಗಲಾಟೆಯಾಗಿದ್ದು, ಇದು ತೀವ್ರ ಸ್ವರೂಪ ಪಡೆದುಕೊಂಡಿದೆ. 

ಮದ್ಯದ ನಶೆಯಲ್ಲಿ ಸ್ಯಾಂಡಲ್‌ವುಡ್‌ ನಟಿಯ ಮಿಡ್‌ ನೈಟ್‌ ರಂಪಾಟ...!

ಸಂಜನಾ ಅವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ನನ್ನ ಬಳಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ವಂದನಾ ಜೈನ್ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಇದ್ರಿಂದ ರೊಚ್ಚಿಗೆದ್ದ ಸಂಜನಾ ಸುವರ್ಣ ನ್ಯೂಸ್ ಜತೆ ಮಾತನಾಡುವ ವೇಳೆ ಪ್ರಕರಣದ ಬಗ್ಗೆ ಸಂಜನಾ ಗಲ್ರಾನಿ ಸ್ಪಷ್ಟನೆ ನೀಡಿದ್ದಾರೆ. ಜತೆಗೆ  ವಂದನಾ ಅವರ ಹಳೆ ಕಹಾನಿಗಳನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಾರೆ. 

ಅಮಿತ್ ಮಿಶ್ರಾ ಕರಿಯರ್ ಹಾಳು ಮಾಡಿದ್ದೇ ಇವಳು: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಗಲ್ರಾನಿ

ಗಲ್ರಾನಿ ಸ್ಪಷ್ಟನೆ
ಯಾವುದೇ ಗಲಾಟೆ ಮಾಡಿಲ್ಲ. ನಾನು ಮತ್ತು ನನ್ನ ಸ್ನೇಹಿತೆ ಕೆಲವು ವಿಚಾರಕ್ಕೆ ವಾಗ್ವಾದ ಮಾಡಿದ್ದು ನಿಜ. ಸ್ನೇಹಿತರು ಅಂದ್ಮೇಲೆ ಸಣ್ಣ ಪುಟ್ಟ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದೆ. ಇದನ್ನು ಇಷ್ಟು ದೊಡ್ಡದಾಗಿ ಬಿಂಬಿಸುವುದು ಬೇಡ. ಸೆಲೆಬ್ರಿಟಿಗಳು ಅಂದ್ಮೇಲೆ ನಮಗೂ ಖಾಸಗಿ ಜೀವನ ಇದೆ. ಇದರಿಂದ ಯಾವ ಪ್ರಚಾರವೂ ನಮಗೆ ಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಬಗ್ಗೆ ಕೇಂದ್ರ ವಲಯ ಡಿಸಿಪಿ ಹೇಳಿದ್ದೇನು..?
ವಂದನಾ ನೀಡಿರುವ ದೂರನ್ನು ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಬಗ್ಗೆ ಕೇಂದ್ರ ವಲಯ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಮಾತನಾಡಿದ್ದು, ಸಂಜನಾ ನನ್ನ ಜತೆ ಗಲಾಟೆ ಮಾಡಿದ್ದಾರೆ ಎಂದು ವಂದನಾ ಜೈನ್ ಅವರು ದೂರು ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸದ್ಯಕ್ಕೆ ದೂರದಾರರ ಮೇರೆಗೆ ಎನ್.ಸಿ [ಕ್ರಮಕೈಗೊಳ್ಳಬಹುದಾದ ಕೇಸ್] ದಾಖಲಿಸಿಕೊಂಡಿದ್ದೇವೆ. ಈ ಪ್ರಕರಣವನ್ನು ತನಿಖೆ ನಡೆಸಲು ದೂರುದಾರರು ಕೋರ್ಟ್ ನಿಂದ ಅನುಮತಿ ಪಡೆದುಕೊಂಡು ಬರಬೇಕು. ಆಗ ಈ ಪ್ರಕರಣದ ತನಿಖೆಯನ್ನು ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.